550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?

ಓಂ ಚಿತ್ರಕ್ಕೆ 26 ವರ್ಷ ಸಂಭ್ರಮ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ರೀತಿಯ ಪೋಸ್ಟರ್​​ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ.

550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?
ಶಿವರಾಜ್​ಕುಮಾರ್​-ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: May 19, 2021 | 2:27 PM

 ಅದು, 1995 ಮೇ 19. ಭಾರೀ ನಿರೀಕ್ಷೆಗಳೊಂದಿಗೆ ಶಿವರಾಜ್​ಕುಮಾರ್ ನಟನೆಯ ಓಂ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು ಉಪೇಂದ್ರ. ಈ ಸಿನಿಮಾ ತೆರೆಕಂಡು 26 ವರ್ಷ ಕಳೆದಿದೆ. ಈ ವಿಶೇಷ ದಿನದಂದು ಅಭಿಮಾನಿಗಳು ಆನ್​ಲೈನ್​ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಭೂಗತ ಲೋಕದ ಕಥೆ ಇಟ್ಟುಕೊಂಡು ಮಾಡಲಾದ ಓಂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಿರ್ದೇಶಕ ಉಪೇಂದ್ರ ಅವರ ಡೈರೆಕ್ಷನ್​ ನೋಡಿ ಅಭಿಮಾನಿಗಳು ಉಘೇಉಘೇ ಎಂದಿದ್ದರು. ಈ ಮೂಲಕ ಓಂ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿ ಮಾಡಿತ್ತು. ಒಮ್ಮೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದ್ದು ಮಾತ್ರವಲ್ಲದೆ, ನಂತರದ ವರ್ಷಗಳಲ್ಲಿ ಹಲವು ಬಾರಿ ಮರು ಬಿಡುಗಡೆಗೊಂಡು ಹೌಸ್‌ಫುಲ್‌ ಪ್ರದರ್ಶನ ಕಂಡಿದ್ದು ‘ಓಂ’ ಚಿತ್ರದ ಹೆಚ್ಚುಗಾರಿಕೆ. ಹೊಸ ಬಗೆಯ ಚಿತ್ರಕಥೆ, ವಿಭಿನ್ನವಾದ ಮೇಕಿಂಗ್‌, ಮನ ಸೆಳೆಯುವ ಹಾಡುಗಳು, ಕಲಾವಿದರ ಅದ್ಭುತ ನಟನೆಯಿಂದಾಗಿ ಕನ್ನಡ ಮಾತ್ರವಲ್ಲದೆ ಪರಭಾಷೆ ಮಂದಿಯನ್ನೂ ಈ ಚಿತ್ರ ಆಕರ್ಷಿಸಿತ್ತು. ತೆಲುಗು, ಹಿಂದಿಗೆ ಸಿನಿಮಾ ರಿಮೇಕ್‌ ಕೂಡ ಆಯಿತು.

ಓಂ ಚಿತ್ರಕ್ಕೆ 26 ವರ್ಷ ಸಂಭ್ರಮ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ರೀತಿಯ ಪೋಸ್ಟರ್​​ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಶಿವರಾಜ್​ಕುಮಾರ್​-ಉಪೇಂದ್ರ ಕಾಂಬಿನೇಷನ್​ನಲ್ಲಿ ಇದೇ ಮಾದರಿಯ ಮತ್ತೊಂದು ಸಿನಿಮಾ ಬರಲಿ ಎಂದು ಕೋರುತ್ತಿದ್ದಾರೆ.

ಓಂ ಸಿನಿಮಾ ತನ್ನ ಪಾಲಿಗೆ ಸಾಕಷ್ಟು ದಾಖಲೆಗಳನ್ನು ಮುಡಿಗೇರಿಸಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಲಾವಿದರನ್ನು ಹಾಕಿಕೊಂಡು ಶೂಟ್​ ಮಾಡಲಾಗುತ್ತದೆ. ಆದರೆ, ನಿಜ ಜೀವನದಲ್ಲಿ ಭೂಗತ ಜಗತ್ತಿನಲ್ಲಿದ್ದವರೇ ಈ ಸಿನಿಮಾದಲ್ಲಿ ರೌಡಿಯಾಗಿ ನಟಿಸಿದ್ದರು. 20 ವರ್ಷಗಳಲ್ಲಿ 550ಕ್ಕೂ ಹೆಚ್ಚು ಬಾರಿ ಈ ಸಿನಿಮಾ ರೀ-ರಿಲೀಸ್‌ ಆಗಿದೆ. ಈ ಮೂಲಕ ಸಿನಿಮಾ ಲಿಮ್ಕಾ ದಾಖಲೆಯಲ್ಲಿ ಹೆಸರು ದಾಖಲಿಸಿಕೊಂಡಿದೆ. ಮರುಬಿಡುಗಡೆ ಆದಾಗಲೂ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೂರು ದಿನ ಪ್ರದರ್ಶನ ಕಂಡಿದ್ದು ವಿಶೇಷ.

ರಿಲೀಸ್‌ ಆಗಿ 20 ವರ್ಷಗಳ ನಂತರ ಅಂದರೆ 2015ರಲ್ಲಿ ಸಿನಿಮಾದ ಪ್ರಸಾರ ಹಕ್ಕನ್ನು ಖಾಸಗಿ ವಾಹಿನಿ ಒಂದು ಪಡೆದುಕೊಂಡಿತ್ತು. ಈ ವೇಳೆ ಟೆಲಿವಿಷನ್‌ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿತ್ತು. ಪಾರ್ವತಮ್ಮ ರಾಜ್​ಕುಮಾರ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್