ದರ್ಶನ್​-ವಿಜಯಲಕ್ಷ್ಮಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ; ವೈರಲ್​ ಆಯ್ತು ಮದುವೆ ಆಮಂತ್ರಣ ಪತ್ರ  

‘ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ಹಾಗೂ ವಿಜಯಲಕ್ಷ್ಮಿ ಅತ್ತಿಗೆ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಯಾವಾಗ್ಲೂ ಹಿಂಗೆ ನಗ್ ನಗ್ತಾ ಜೊತೆಯಾಗಿ ಖುಷಿಯಾಗಿ ಇರಿ ಅಣ್ಣ ಮತ್ತು ಅತ್ತಿಗೆ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ದರ್ಶನ್​-ವಿಜಯಲಕ್ಷ್ಮಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ; ವೈರಲ್​ ಆಯ್ತು ಮದುವೆ ಆಮಂತ್ರಣ ಪತ್ರ  
ದರ್ಶನ್​-ವಿಜಯಲಕ್ಷ್ಮಿ ಹಾಊ ವೆಡ್ಡಿಂಗ್​ ಕಾರ್ಡ್​
Rajesh Duggumane

|

May 19, 2021 | 4:37 PM

ನಟ ದರ್ಶನ್​-ವಿಜಯಲಕ್ಷ್ಮಿ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ಅವರ ವಿವಾಹ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಒಂದು ವೈರಲ್​ ಆಗಿದೆ.  2003ರಲ್ಲಿ ವಿಜಯಲಕ್ಷ್ಮಿ ಅವರನ್ನು ದರ್ಶನ್​ 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆದರು. ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಪದವೀಧರೆ​. ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್​. ದರ್ಶನ್​-ವಿಜಯಲಕ್ಷ್ಮಿ ಮದುವೆಗೆ ಇಂದು 18 ವರ್ಷ. ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.

ದರ್ಶನ್ ಅವರ ವಿವಾಹ ಆಮಂತ್ರಣ ಪತ್ರ ಈಗ ವೈರಲ್​ ಆಗಿದೆ. 19-05-2003ನೇ ಸೋಮವಾರ ಬೆಳಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ ಎಂದು ಆಮಂತ್ರಣ ಪತ್ರದಲ್ಲಿ ಬರೆಯಲಾಗಿತ್ತು.

‘ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ಹಾಗೂ ವಿಜಯಲಕ್ಷ್ಮಿ ಅತ್ತಿಗೆ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಯಾವಾಗ್ಲೂ ಹಿಂಗೆ ನಗ್ ನಗ್ತಾ ಜೊತೆಯಾಗಿ ಖುಷಿಯಾಗಿ ಇರಿ ಅಣ್ಣ ಮತ್ತು ಅತ್ತಿಗೆ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಈ ವರ್ಷ ತೆರೆಗೆ ಬಂದ ರಾಬರ್ಟ್​ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈ ಸಿನಿಮಾ ನೋಡಿ ಅಭಿಮಾನಿಗಳು ಸಖತ್​​ ಖುಷಿ ಆಗಿದ್ದರು. ಈ ಸಿನಿಮಾ 100 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರ ತೆರೆಕಂಡ ನಂತರ ದರ್ಶನ್​ ಯಾವುದೇ ಹೊಸ ಚಿತ್ರವನ್ನು ಘೋಷಿಸಿಲ್ಲ.

ಇದನ್ನೂ ಓದಿ: Kotigobba 3: ದರ್ಶನ್​ಗೆ ಹೀರೋಯಿನ್​ ಆಗಿದ್ದ ನಟಿಗೆ ಈಗ ಸುದೀಪ್ ತಾಯಿ ಪಾತ್ರ?

ತೂಗುದೀಪ ಶ್ರೀನಿವಾಸ್​, ದರ್ಶನ್​, ದಿನಕರ್​ ಬಗ್ಗೆ ಮೀನಾ ತೂಗುದೀಪ ಅಪರೂಪದ ಮಾತುಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada