AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Sofia Hayat: ‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸಾಯಲಿ ಅಂತ ನಾನು ಪ್ರತಿ ದಿನ ಪ್ರಾರ್ಥಿಸುತ್ತೇನೆ. ನಿನ್ನನ್ನು ನಾನು ಜೈಲಿನಲ್ಲಿ ನೋಡುತ್ತೇನೆ’ ಎಂದು ಸೋಫಿಯಾ ಹಯಾತ್​ಗೆ ಅಪರಿಚಿತ ಹುಡುಗಿಯೊಬ್ಬಳು ಮೆಸೇಜ್​ ಮಾಡಿದ್ದಾಳೆ.

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?
‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’ ಎಂದು ಬಿಗ್​ ಬಾಸ್​ ಸ್ಪರ್ಧಿಗೆ ಶಾಪ
TV9 Web
| Edited By: |

Updated on: Jun 27, 2021 | 12:43 PM

Share

ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ ಎಂಬುದು ನಿಜ. ಆದರೆ ಅದನ್ನೇ ದುರುಪಯೋಗ ಮಾಡಿಕೊಳ್ಳುವ ಕೆಲವು ಜನರು ಸೆಲೆಬ್ರಿಟಿಗಳ ಬಗ್ಗೆ ಮನಬಂದಂತೆ ಮಾತನಾಡುತ್ತಾರೆ. ಮಾಜಿ ಬಿಗ್​ ಬಾಸ್​ ಸ್ಪರ್ಧಿ, ನಟಿ ಸೋಫಿಯಾ ಹಯಾತ್​ ಬಗ್ಗೆ ಈಗ ಹುಡುಗಿಯೊಬ್ಬಳು ಇಲ್ಲಸಲ್ಲದ ಗಾಸಿಪ್​ ಹಬ್ಬಿಸಿದ್ದಾಳೆ. ಅಲ್ಲದೆ, ತೀರಾ ಕೆಟ್ಟದಾಗಿ ಶಾಪ ಹಾಕಿದ್ದಾಳೆ. ಅದರ ಸ್ಕ್ರೀನ್​ಶಾಟ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋಫಿಯಾ ಅವರು, ಮತ್ತೊಂದು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ ಬಾಸ್​ ಹಿಂದಿ ಸೀಸನ್​ 7ರಲ್ಲಿ ಸೋಫಿಯಾ ಹಯಾತ್​ ಸ್ಪರ್ಧಿಸಿದ್ದರು. ಅವರಿಗೆ ಸೀಸನ್​ 14ರ ಸ್ಪರ್ಧಿ ಅಭಿನವ್​ ಶುಕ್ಲಾ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಲಾಗಿದೆ. ಅದೇ ವಿಚಾರ ಇಟ್ಟುಕೊಂಡು ಹುಡುಗಿಯೊಬ್ಬಳು ಮೆಸೇಜ್​ ಮಾಡಿದ್ದಾಳೆ. ‘ನಿನ್ನ ಮತ್ತು ಅಭಿನವ್​ ಶುಕ್ಲಾ ನಡುವೆ ಏನೇನು ನಡೆದಿದೆ ಎಂಬುದೆಲ್ಲ ನನಗೆ ಗೊತ್ತಿದೆ’ ಎಂದು ಆಕೆ ಬ್ಲಾಕ್​ಮೇಲ್​ ಮಾಡಲು ಪ್ರಯತ್ನಿಸಿದ್ದಾಳೆ.

‘ಅಭಿನವ್​ ಶುಕ್ಲಾ ನಿನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಯಾಗಿ ಒಂದು ರಾತ್ರಿ ಕಳೆದ ಅವನ ಮತ್ತು ನಿನ್ನ ವಿರುದ್ಧ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸಾಯಲಿ ಅಂತ ನಾನು ಪ್ರತಿ ದಿನ ಪ್ರಾರ್ಥಿಸುತ್ತೇನೆ. ನಿನ್ನನ್ನು ನಾನು ಜೈಲಿನಲ್ಲಿ ನೋಡುತ್ತೇನೆ. ನಿನ್ನಂತ ನೀಚ ನೀಲಿಚಿತ್ರಗಳ ನಟಿಯನ್ನು ಬೆಳೆಸಿದ್ದಕ್ಕಾಗಿ ನಿನ್ನ ತಂದೆ-ತಾಯಿಗೆ ನಾಚಿಕೆ ಆಗಬೇಕು’ ಎಂದು ಸೋಫಿಯಾ ಹಯಾತ್​ಗೆ ಅಪರಿಚಿತ ಹುಡುಗಿ ಮೆಸೇಜ್​ ಮಾಡಿದ್ದಾಳೆ.

ಇಂಥ ಬೆದರಿಕೆಗಳಿಗೆಲ್ಲ ತಾವು ಬಗ್ಗುವುದಿಲ್ಲ ಎಂದು ಸೋಫಿಯಾ ಹಯಾತ್​ ತಿಳಿಸಿದ್ದಾರೆ. ‘ನನ್ನ ಬಳಿ ಸಹಾಯ ಕೇಳಿಕೊಂಡು ಮೆಸೇಜ್​ ಮಾಡಲು ಆರಂಭಿಸಿದ ಈಕೆ, ನಂತರ ಈ ರೀತಿ ಮೆಸೇಜ್​ ಕಳಿಸಿದ್ದಾಳೆ. ಈಗ ನಾನು ಅವಳನ್ನು ಬ್ಲಾಕ್​ ಮಾಡಿದ್ದೇನೆ. ನಂತರ ಬೇರೆ ಅಕೌಂಟ್​ ಕ್ರಿಯೇಟ್​ ಮಾಡಿ ಮೆಸೇಜ್​ ಮಾಡಿದಳು. ಜನರು ಇಂಥವರಿಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಸೋಫಿಯಾ ಹೇಳಿದ್ದಾರೆ.

View this post on Instagram

A post shared by Sofia Hayat (@sofiahayat)

‘ನನಗೂ ಮತ್ತು ಅಭಿನವ್​ ಶುಕ್ಲಾಗೂ ಪರಿಚಯವೇ ಇಲ್ಲ. ಆತ ಯಾರು ಎಂಬುದೇ ನನಗೆ ಗೊತ್ತಿಲ್ಲ. ಒಮ್ಮೆಯೂ ನಾನು ಅವರ ಜೊತೆ ಕೆಲಸ ಮಾಡಿಲ್ಲ. ಗೂಗಲ್​ನಲ್ಲಿ ಹುಡುಕಿದ ಬಳಿಕವೇ ಅವರ ಬಗ್ಗೆ ನನಗೆ ಗೊತ್ತಾಗಿದ್ದು’ ಎಂದು ವಿಡಿಯೋ ಮೂಲಕ ಸೋಫಿಯಾ ಹಯಾತ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್