AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಗ್ನಿಸಾಕ್ಷಿ’ ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ಯಾವಾಗಲೂ ಇರ್ತಿತ್ತು ರೇಷ್ಮೆ ಸೀರೆ; ಸುದೀಪ್ ಬಿಚ್ಚಿಟ್ಟ ಅಚ್ಚರಿಯ ವಿಚಾರ

ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಸೈಲೆಂಟ್. ಹಾಗಂತ ತಮಗೇನಾದರೂ ಅವಮಾನ ಆದರೆ ಅಥವಾ ಇಗೋಗೆ ಹರ್ಟ್ ಆದರೆ ಅವರು ಸುಮ್ಮನೆ ಕೂರುವವರಲ್ಲ. ನಗುನಗುತ್ತಲೇ ವೈಷ್ಣವಿ ಮಾತಿನ ಛಾಟಿ ಬೀಸುತ್ತಾರೆ.

‘ಅಗ್ನಿಸಾಕ್ಷಿ’ ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ಯಾವಾಗಲೂ ಇರ್ತಿತ್ತು ರೇಷ್ಮೆ ಸೀರೆ; ಸುದೀಪ್ ಬಿಚ್ಚಿಟ್ಟ ಅಚ್ಚರಿಯ ವಿಚಾರ
ವೈಷ್ಣವಿ-ಸುದೀಪ್​
ರಾಜೇಶ್ ದುಗ್ಗುಮನೆ
|

Updated on:Jun 27, 2021 | 2:26 PM

Share

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಖ್ಯಾತಿ ಹೆಚ್ಚಿಸಿಕೊಂಡರು. ಈ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ನಟಿಸುವ ಮೂಲಕ ಇಡೀ ರಾಜ್ಯದ ಜನತೆಗೆ ಅವರು ಪರಿಚಿತರಾದರು. ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ರೇಷ್ಮೆ ಸೀರೆಯೊಂದನ್ನು ಇಟ್ಟುಕೊಂಡು ತಿರುಗುತ್ತಿದ್ದರಂತೆ. ಈ ವಿಚಾರವನ್ನು ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಬಿಚ್ಚಿಟ್ಟಿದ್ದಾರೆ. ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಸೈಲೆಂಟ್. ಹಾಗಂತ ತಮಗೇನಾದರೂ ಅವಮಾನ ಆದರೆ ಅಥವಾ ಇಗೋಗೆ ಹರ್ಟ್ ಆದರೆ ಅವರು ಸುಮ್ಮನೆ ಕೂರುವವರಲ್ಲ. ನಗುನಗುತ್ತಲೇ ವೈಷ್ಣವಿ ಮಾತಿನ ಛಾಟಿ ಬೀಸುತ್ತಾರೆ. ಇದು ಸುದೀಪ್ ಗಮನಕ್ಕೂ ಬಂದಿದೆ. ಆ ಬಗ್ಗೆ ಅವರು ವೇದಿಕೆ ಮೇಲೆ ಹೇಳಿದ್ದಾರೆ.

ರೇಷ್ಮೆ ಶಾಲಿನಲ್ಲಿ ಚಪ್ಪಲ್ಲಿ ಸುತ್ತಿ ಹೊಡೆಯೋದು ಎನ್ನುವ ಮಾತು ಚಾಲ್ತಿಯಲ್ಲಿದೆ. ಇದನ್ನೇ ವೈಷ್ಣವಿ ಮಾಡುತ್ತಾರೆ ಅನ್ನೋದು ಸುದೀಪ್ ಅಭಿಪ್ರಾಯ. ‘ವೈಷ್ಣವಿ ಯಾವಾಗಲೂ ರೇಶ್ಮೇ ಸೀರೆ ಇಟ್ಕೊಂಡು ಇರ್ತಾರೆ. ಅವರು ಬಯ್ಯಲ್ಲ, ರೇಷ್ಮೆ ಶಾಲಿನಲ್ಲಿ ಹಾಕಿಹಾಕಿ ಕೊಡ್ತಾ ಇರ್ತಾರೆ. ಅವರಿಗೆ ಬಯ್ಯಬೇಕು ಎನಿಸಿದಾಗೆಲ್ಲ ನಿಮಗೊಂದು ಮೆಡಲ್ ಕೊಡಬೇಕು ಎಂದು ಹೇಳ್ತಾರೆ. ಇದು ಅನೇಕರಿಗೆ ಅರ್ಥವಾಗುವುದಿಲ್ಲ. ಆದರೆ, ಅವರ ಜತೆ ಒಡನಾಟ ನಡೆಸಿದವರಿಗೆ ಇದು ಗೊತ್ತಾಗುತ್ತದೆ’ ಎಂದರು ಸುದೀಪ್.

‘ಧಾರಾವಾಹಿ ಶೂಟ್ ಮಾಡುವ ಟೈಮ್ನಿಂದ ಕೈಯಲ್ಲಿ ಕಲ್ಪನಾ ರೇಶ್ಮೇ ಸೀರೆ ಇಟ್ಟುಕೊಂಡು ವೈಷ್ಣವಿ ಓಡಾಡುತ್ತಿದ್ದಾರೆ. ‘ಎರಡು ಸೀರೆ ಏಕೆ? ನಾವು ಹೇಳಿದ್ದು ಒಂದೇ ಸೀರೆ ಅಲ್ಲವಾ?’ ಎಂದು ನಿರ್ದೇಶಕರು ಕೇಳುತ್ತಾರೆ. ಆಗ ವೈಷ್ಣವಿ ಹೌದು, ಒಂದು ಉಟ್ಟುಕೊಳ್ಳೋಕೆ, ಮತ್ತೊಂದು ಹೊಡೆಯೋಕೆ ಎನ್ನುತ್ತಾರೆ’ ಎಂದು ಸುದೀಪ್ ಹೇಳುತ್ತಿದ್ದಂತೆ ಮನೆಯವರೆಲ್ಲರೂ ನಗೆಗಡಲಲ್ಲಿ ತೇಲಿದರು.

ಬಿಗ್ ಬಾಸ್ ಸೀಸನ್ 8 ಮೊದಲ ಇನ್ನಿಂಗ್ಸ್ನಲ್ಲಿ ವೈಷ್ಣವಿ ಹೆಚ್ಚು ಮೌನ ವಹಿಸುತ್ತಿದ್ದರು. ಆದರೆ, ಈಗ ಅವರು ಕೊಂಚ ಬದಲಾಗಿದ್ದಾರೆ. ಏನಾದರೂ ತಪ್ಪುಗಳು ನಡೆದರೆ ಅದನ್ನು ನೇರವಾಗಿಯೇ ಹೇಳುತ್ತಿದ್ದಾರೆ.

ಇದನ್ನೂ ಓದಿ: ‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?

Published On - 2:20 pm, Sun, 27 June 21