AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?

‘ಒಂದು ವಾರದಲ್ಲಿ ನಿಮ್ಮಿಬ್ಬರೊಳಗೆ ಯಾರಾದರೂ ಒಬ್ಬರು ಹೊರಗಡೆ ಹೋಗಬೇಕು ಎನ್ನುವಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ದಿವ್ಯಾ ಉರುಡುಗ ಅವರಿಗೆ ಮೊದಲು ಈ ಪ್ರಶ್ನೆ ಕೇಳಲಾಯಿತು.

Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?
ಅರವಿಂದ್​ ಕೆಪಿ, ದಿವ್ಯಾ ಉರುಡುಗ
ಮದನ್​ ಕುಮಾರ್​
|

Updated on:Jun 27, 2021 | 9:00 AM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆದ ಜೋಡಿ ಎಂದರೆ ಅದು ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ. ಆರಂಭದಲ್ಲಿ ಅಷ್ಟೇನೂ ಆಪ್ತವಾಗಿಲ್ಲದ ಅವರು ‘ಜೋಡಿ ಟಾಸ್ಕ್​’ ಮುಗಿದ ಬಳಿಕ ತುಂಬ ಆತ್ಮೀಯರಾಗಿಬಿಟ್ಟರು. 42 ದಿನಗಳ ಗ್ಯಾಪ್​ ಬಳಿಕ ಈಗ ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭ ಆಗಿದೆ. ಹಾಗಿದ್ದರೂ ಇಬ್ಬರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ಕಿಚ್ಚ ಸುದೀಪ್​ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ಇಬ್ಬರಿಂದಲೂ ಬೇರೆ ಬೇರೆ ಉತ್ತರಗಳು ಬಂದವು.

‘ಒಂದು ವಾರದಲ್ಲಿ ನಿಮ್ಮಿಬ್ಬರೊಳಗೆ ಯಾರಾದರೂ ಒಬ್ಬರು ಹೊರಗಡೆ ಹೋಗಬೇಕು ಎನ್ನುವಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ದಿವ್ಯಾ ಉರುಡುಗ ಅವರಿಗೆ ಮೊದಲು ಈ ಪ್ರಶ್ನೆ ಕೇಳಲಾಯಿತು. ಅದಕ್ಕೆ ದಿವ್ಯಾ ಉತ್ತರಿಸುವ ಬದಲು ತಬ್ಬಿಬ್ಬಾದರು. ‘ಇದೊಂದು ಆಟ ಎಂದು ಪರಿಗಣಿಸಿ… ನಾನು..’ ಎಂದು ದಿವ್ಯಾ ವಿವರಣೆ ನೀಡಲು ಮುಂದಾದರು. ‘ನನಗೆ ವಿವರಣೆ ಬೇಡ. ಉತ್ತರ ಬೇಕು’ ಎಂದು ಸುದೀಪ್​ ಖಡಕ್​ ಆಗಿ ಹೇಳಿದರು.

ಆಗ ದಿವ್ಯಾ ಅವರಿಗೆ ಅನಿವಾರ್ಯ ಆಯಿತು. ‘ನಾನೇ ಉಳಿದುಕೊಳ್ಳುತ್ತೇನೆ’ ಎಂದು ಅವರು ಉತ್ತರಿಸಿದರು. ಅದೇ ಪ್ರಶ್ನೆಯನ್ನು ಅರವಿಂದ್​ಗೆ ಕೇಳಲಾಯಿತು. ಅವರು ನೇರವಾಗಿ ಉತ್ತರ ನೀಡಿದರು. ‘ನಾನು ಹೋಗ್ತೀನಿ ಸರ್​. ನಾನು ಬಿಟ್ಟುಕೊಡ್ತೀನಿ. ಅವರು ಇರಲಿ’ ಎಂದು ಹೇಳುವ ಮೂಲಕ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈ ಉತ್ತರ ಕೇಳಿಸಿಕೊಂಡ ದಿವ್ಯಾ ಎಮೋಷನಲ್​ ಆದರು.

ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆಪಿ ನಡುವಿನ ಆಪ್ತತೆ ಕಂಡು ಎಲ್ಲರಿಗೂ ಕೆಲವು ಅನುಮಾನಗಳು ಮೂಡಿವೆ. ಅವರಿಬ್ಬರು ನಿಜಜೀವನದಲ್ಲಿ ಮದುವೆ ಆಗುತ್ತಾರೇನೋ ಎಂಬ ಗುಮಾನಿ ಕೂಡ ಹರಡಿದೆ. ಬಿಗ್​ ಬಾಸ್​ ಮನೆಯೊಳಗೆ ಈ ಬಗ್ಗೆ ಅನೇಕ ಬಾರಿ ಚರ್ಚೆ ಕೂಡ ನಡೆದಿದ್ದುಂಟು. ಆದರೆ ಈ ಕುರಿತು ಅವರಿಬ್ಬರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. 42 ದಿನಗಳ ಕಾಲ ಬಿಗ್​ ಬಾಸ್​ನಿಂದ ಹೊರಗಿದ್ದು ಬಂದ ಬಳಿಕವೂ ಅವರ ನಡುವಿನ ಆಪ್ತತೆ ಕಮ್ಮಿ ಆಗಿಲ್ಲ.

ಇದನ್ನೂ ಓದಿ:

Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ

Published On - 8:52 am, Sun, 27 June 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ