AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯರ ಫೋಟೋ ನೋಡಿ ಯಾಮಾರಬೇಡಿ; ಇಲ್ಲಿದೆ ‘ವರದನಾಯಕ’ ಹೀರೋಯಿನ್​ ಅಸಲಿ ಕಥೆ

ಸೋಶಿಯಲ್​ ಮೀಡಿಯಾದಲ್ಲಿ ಫೇಕ್​ ಫೋಟೋ ಹಾಕುವುದು ನಟಿ ಸಮೀರಾ ರೆಡ್ಡಿ ಅವರಿಗೆ ಇಷ್ಟವಿಲ್ಲ. ಫೋಟೋಗಳು ಹೇಗೆ ಜನರನ್ನು ಯಾಮಾರಿಸುತ್ತವೆ ಎಂಬುದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದಾರೆ.

ನಟಿಯರ ಫೋಟೋ ನೋಡಿ ಯಾಮಾರಬೇಡಿ; ಇಲ್ಲಿದೆ ‘ವರದನಾಯಕ’ ಹೀರೋಯಿನ್​ ಅಸಲಿ ಕಥೆ
ಸಮೀರಾ ರೆಡ್ಡಿ
ಮದನ್​ ಕುಮಾರ್​
|

Updated on: Jun 27, 2021 | 9:49 AM

Share

ನಟಿ ಸಮೀರಾ ರೆಡ್ಡಿ ಅವರು ಸಿನಿಮಾಗಳಿಂದ ದೂರ ಇದ್ದರೂ ಕೂಡ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸದ್ಯ ಅವರು ಮಕ್ಕಳ ಪಾಲನೆ ಮತ್ತು ಕುಟುಂಬದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಅದರ ಜೊತೆಗೆ ಅವರು ತಮ್ಮ ಫಿಟ್ನೆಸ್​​​ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಈ ನಡುವೆ ಅವರು ತೋರಿಕೆಗಿಂತಲೂ ನೈಜತೆಗೆ ಹೆಚ್ಚು ಬೆಲೆ ನೀಡುತ್ತಿದ್ದಾರೆ. ಅದೇ ರೀತಿ ಇರುವಂತೆ ಇತರೆ ಮಹಿಳೆಯರಿಗೂ ಸ್ಫೂರ್ತಿ ತುಂಬುತ್ತಿದ್ದಾರೆ. ಈಗ ಸಮೀರಾ ರೆಡ್ಡಿ ಹಂಚಿಕೊಂಡಿರುವ ಒಂದು ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ.

ಮದುವೆ, ಮಕ್ಕಳು ಆದ ಬಳಿಕ ಸಮೀರಾ ಅವರ ದೇಹದ ತೂಕ ಹೆಚ್ಚಾಯಿತು. ಆರಂಭದಲ್ಲಿ ಅದರ ಬಗ್ಗೆ ಹೆಚ್ಚು ಚಿಂತೆಗೆ ಒಳಗಾದ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದರು. ಆದರೆ, ನಂತರದಲ್ಲಿ ಅವರು ಪಾಸಿಟಿವಿಟಿ ಕಡೆಗೆ ಮನಸ್ಸು ಹರಿಸಿದರು. ತಮ್ಮ ದೇಹ ಹೇಗಿದೆಯೋ ಹಾಗೆಯೇ ಅದನ್ನು ಒಪ್ಪಿಕೊಳ್ಳಲು ಅವರು ಆರಂಭಿಸಿದರು. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹಾಗಂತ ಅವರು ಬೇಜವಾಬ್ದಾರಿಯಿಂದ ಜೀವಿಸುತ್ತಿಲ್ಲ. ತೂಕ ಇಳಿಸಿಕೊಳ್ಳಲು ಶಿಸ್ತಿನ ಜೀವನ ನಡೆಸುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಫೇಕ್​ ಫೋಟೋ ಹಾಕುವುದು ಅವರಿಗೆ ಇಷ್ಟವಿಲ್ಲ. ಫೋಟೋಗಳು ಹೇಗೆ ಜನರನ್ನು ಯಾಮಾರಿಸುತ್ತವೆ ಎಂಬುದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದಾರೆ. ತಮ್ಮದೇ ಎರಡು ಬೇರೆ ಬೇರೆ ಫೋಟೋಗಳನ್ನು ಸಮೀರಾ ಶೇರ್​ ಮಾಡಿಕೊಂಡಿದ್ದಾರೆ. ಒಂದರಲ್ಲಿ ಹೊಟ್ಟೆಯ ಬೊಜ್ಜು ಎದ್ದು ಕಾಣುತ್ತದೆ. ಇನ್ನೊಂದರಲ್ಲಿ ಅವರು ಸ್ಲಿಮ್​ ಆಗಿ ಕಾಣುತ್ತಾರೆ. ‘ಫೋಟೋಗಳು ನಮ್ಮನ್ನು ಯಾಮಾರಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಈ ದಿನ ನನಗೆ ನಾನೇ ಮತ್ತೊಮ್ಮೆ ಹೇಳಿಕೊಳ್ಳುವುದು ಏನೆಂದರೆ, ನಾವು ಏನು ನೋಡುತ್ತೇವೋ ಅದೇ ನಿಜವಾಗಿರುವುದಿಲ್ಲ. ನಾನು ವರ್ಕೌಟ್​ ಮಾಡುತ್ತಿದ್ದೇನೆ. ರಿಸಲ್ಟ್​ ಕೂಡ ಕಾಣುತ್ತಿದ್ದೇನೆ. ಆದರೂ ನನಗೆ ಹೊಟ್ಟೆಯ ಫ್ಯಾಟ್​ ಇದೆ. ಕೆಲವೇ ತಿಂಗಳಲ್ಲಿ ಅದು ಹೋಗಲಿದೆ. ನಿಜವಾದ ದೇಹಗಳು ಮತ್ತು ನಿಜವಾದ ಫೋಟೋಗಳನ್ನು ನೋಡಿದಾಗ ನನಗೆ ಪ್ರೇರಣೆ ಸಿಗುತ್ತದೆ. ಅದೇ ನನ್ನನ್ನು ಇನ್ನಷ್ಟು ಪರಿಶ್ರಮ ಪಡುವಂತೆ ಮಾಡುತ್ತದೆ’ ಎಂದು ಸಮೀರಾ ಬರೆದುಕೊಂಡಿದ್ದಾರೆ.

‘ಈ ವಾರ ಒಂದು ಇಂಚು ಫ್ಯಾಟ್​ ಕಡಿಮೆ ಮಾಡಿದ್ದೇನೆ. ಇಂಟರ್​ಮಿಟೆಂಟ್​ ಫಾಸ್ಟಿಂಗ್​, ಬದ್ಧತೆಯಿಂದ ಯೋಗ ಮಾಡುವುದು, ಸಕ್ಕರೆ ಸೇವನೆ ಕಡಿಮೆ ಮಾಡಿರುವುದು ಹಾಗೂ ವಾರದಲ್ಲಿ ನಾಲ್ಕು ಬಾರಿ ಬ್ಯಾಡ್ಮಿಂಟನ್​ ಆಡುವುದರಿಂದ ಇದು ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ. ಈ ವರ್ಷ ದೀಪಾವಳಿ ಹಬ್ಬ ಬರುವುದರೊಳಗೆ ತಾವು ಅಂದುಕೊಂಡಿದ್ದನ್ನು ಸಾಧಿಸಲು ಗುರಿ ಇಟ್ಟುಕೊಂಡಿದ್ದಾರೆ.

ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ‘ವರದನಾಯಕ’ ಚಿತ್ರದಲ್ಲಿ ಸಮೀರಾ ರೆಡ್ಡಿ ನಟಿಸಿದ್ದರು. 2013ರಲ್ಲಿ ತೆರೆಕಂಡ ಆ ಸಿನಿಮಾದ ಬಳಿಕ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ.

ಇದನ್ನೂ ಓದಿ:

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

Sameera Reddy: ಮುದ್ದಾದ ಮಗು ಜನಿಸಿದರೂ ಖುಷಿಪಡುವ ಬದಲು ಡಿಪ್ರೆಷನ್​ಗೆ ಹೋಗಿದ್ದ ವರದನಾಯಕ ನಟಿ ಸಮೀರಾ ರೆಡ್ಡಿ; ಕಾರಣ ಏನು?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?