Sameera Reddy: ಮುದ್ದಾದ ಮಗು ಜನಿಸಿದರೂ ಖುಷಿಪಡುವ ಬದಲು ಡಿಪ್ರೆಷನ್​ಗೆ ಹೋಗಿದ್ದ ವರದನಾಯಕ ನಟಿ ಸಮೀರಾ ರೆಡ್ಡಿ; ಕಾರಣ ಏನು?

ತಾಯಿ ಆದ ಬಳಿಕ ಒಂದು ವರ್ಷ ಸಮೀರಾ ರೆಡ್ಡಿ ಆಗಾಗ ಡಿಪ್ರೆಷನ್​ಗೆ ಹೋಗುತ್ತಿದ್ದರು. ಚಿತ್ರರಂಗದಿಂದ ಅವರು ಅಂತರ ಕಾಯ್ದುಕೊಂಡರು. 2 ವರ್ಷಗಳ ಕಾಲ ಕಣ್ಮರೆಯಾಗಿಬಿಟ್ಟರು. ಅಂತಿಮವಾಗಿ ಅವರಿಗೆ ಎಲ್ಲವೂ ಅರಿವಾಯಿತು.

Sameera Reddy: ಮುದ್ದಾದ ಮಗು ಜನಿಸಿದರೂ ಖುಷಿಪಡುವ ಬದಲು ಡಿಪ್ರೆಷನ್​ಗೆ ಹೋಗಿದ್ದ ವರದನಾಯಕ ನಟಿ ಸಮೀರಾ ರೆಡ್ಡಿ; ಕಾರಣ ಏನು?
ಸಮೀರಾ ರೆಡ್ಡಿ
Follow us
ಮದನ್​ ಕುಮಾರ್​
|

Updated on: May 10, 2021 | 1:57 PM

ಸುದೀಪ್​ ನಟನೆಯ ವರದನಾಯಕ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಿತರಾದವರು ನಟಿ ಸಮೀರಾ ರೆಡ್ಡಿ. ಆ ಸಿನಿಮಾ ಬಳಿಕ ಅವರ ಚಿತ್ರರಂಗದಿಂದ ದೂರ ಸರಿದರು. ಮದುವೆ-ಮಕ್ಕಳು ಅಂತ ಸಂಸಾರದಲ್ಲಿ ಬ್ಯುಸಿ ಆದರು. ಸಮೀರಾ ಈಗ ಎರಡು ಮಕ್ಕಳ ತಾಯಿ. ಸೋಶಿಯಲ್​ ಮೀಡಿಯಾದಲ್ಲೂ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿ ಇರುತ್ತಾರೆ. ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2015ರಲ್ಲಿ ಸಮೀರಾ ರೆಡ್ಡಿ ಮೊದಲ ಮಗುವಿಗೆ ಜನ್ಮ ನೀಡಿದರು. ಅವರಿಗೆ ಮುದ್ದಾದ ಗಂಡು ಮಗು ಜನಿಸಿತು. ಆ ಸಂದರ್ಭದಲ್ಲಿ ಅವರಿಗೆ ಖುಷಿ ಆಗುವುದರ ಬದಲು ಬೇಸರ ಆಗಿತ್ತು. ಮಗು ಜನಿಸಿದ ಬಳಿಕ ಅವರು ಖಿನ್ನತೆಗೆ ಹೋಗಿದ್ದರು. ಮಗನನ್ನು ನೋಡಿಕೊಳ್ಳುವ ಬದಲು ಬೇರೆ ಚಿಂತೆಯಲ್ಲೇ ಅವರು ಮುಳುಗಿ ಹೋಗಿದ್ದರು. ಮೇ 9ರಂದು ವಿಶ್ವ ತಾಯಂದಿರ ದಿನದ ಹಿನ್ನೆಲೆಯಲ್ಲಿ ಈ ವಿಷಯಗಳ ಬಗ್ಗೆ ಸಮೀರಾ ಮಾತನಾಡಿದ್ದಾರೆ.

‘ನಾನು ಗರ್ಭಿಣಿ ಆದಾಗ ಬೇರೆ ನಟಿಯರ ರೀತಿ ಸುಂದರವಾಗಿ ಕ್ಯಾಮರಾಗೆ ಪೋಸ್​ ಕೊಡುತ್ತೇನೆ ಎಂದುಕೊಂಡಿದ್ದೆ. ಆದರೆ ಆ ಸಮಯದಲ್ಲಿ ನನ್ನ ದೇಹದ ತೂಕ 105 ಕೆಜಿ ಆಗಿತ್ತು. ಹಾಗಾಗಿ ಮಗು ಜನಿಸಿದ ಬಳಿಕ ನಾನು ಖಿನ್ನತೆಗೆ ಒಳಗಾದೆ. ಆ ಸಮಯದಲ್ಲಿ ಮಗುವನ್ನು ಗಂಡ ಅಕ್ಷಯ್​ ಅವರೇ ನೋಡಿಕೊಂಡರು. ಬೇರೆ ನಟಿಯರು ತಾಯಿ ಆದ ಬಳಿಕ ಕೆಲವೇ ತಿಂಗಳಲ್ಲಿ ಹಳೆಯ ಶೇಪ್​ಗೆ ಮರಳುತ್ತಾರಲ್ಲ ಅದು ಹೇಗೆ ಎಂಬುದನ್ನೇ ನಾನು ದಿನವಿಡೀ ಯೋಚಿಸುತ್ತಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಜೋರಾಗಿ ಅತ್ತೆ. ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ಪಾಪಪ್ರಜ್ಞೆ ನನ್ನನ್ನು ಕಾಡಿತು’ ಎಂದು ಸಮೀರಾ ಹೇಳಿದ್ದಾರೆ.

ನಂತರ ಒಂದು ವರ್ಷದ ತನಕವೂ ಸಮೀರಾ ರೆಡ್ಡಿ ಆಗಾಗ ಡಿಪ್ರೆಷನ್​ಗೆ ಹೋಗುತ್ತಿದ್ದರು. ಆಗಲೂ ಅವರ ದೇಹದ ತೂಕ 105 ಕೆಜಿ ಇತ್ತು. ಚಿತ್ರರಂಗದಿಂದ ಅವರು ಅಂತರ ಕಾಯ್ದುಕೊಂಡರು. 2 ವರ್ಷಗಳ ಕಾಲ ಕಣ್ಮರೆಯಾಗಿಬಿಟ್ಟರು. ಅಂತಿಮವಾಗಿ ಅವರಿಗೆ ಎಲ್ಲವೂ ಅರಿವಾಯಿತು. ನಂತರ ಸೋಶಿಯಲ್​ ಮೀಡಿಯಾಗೆ ಕಾಲಿಟ್ಟರು. ಸೌಂದರ್ಯದ ಬಗ್ಗೆ ಇದ್ದ ಎಲ್ಲ ಸುಳ್ಳು ಪರಿಕಲ್ಪನೆಗಳನ್ನು ತಳ್ಳಿಹಾಕಿ ತಮ್ಮದೇ ಹಾದಿಯಲ್ಲಿ ಜೀವನ ಸಾಗಿಸಲು ಆರಂಭಿಸಿದರು.

2018ರಲ್ಲಿ ಎರಡನೇ ಬಾರಿಗೆ ಗರ್ಭಿಣಿಯಾದ ಸಮೀರಾ ರೆಡ್ಡಿ ಯಾವುದಕ್ಕೂ ಅಂಜಲಿಲ್ಲ. ಆಗ ಅವರಿಗೆ 40 ವರ್ಷ ಆಗಿತ್ತು. ತಮ್ಮದೇ ಶೈಲಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿದರು. ಇಂದು ಅವರು ಗ್ಲಾಮರ್​ಗೆ ಬೆಲೆ ನೀಡುತ್ತಿಲ್ಲ. ಅದು ಅನೇಕ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಿದೆ.

ಇದನ್ನೂ ಓದಿ:

Sameera Reddy: ಕೊರೊನಾ ಸೋಂಕಿತ ‘ವರದನಾಯಕ’ ನಟಿ ಸಮೀರಾ ರೆಡ್ಡಿಗೆ ಕೆಟ್ಟ ಕಮೆಂಟ್​

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್