‘ಒಳಗೆ ಸೇರಿದರೆ ಗುಂಡು..’ ಹಾಡು ಬರೆದ ಖ್ಯಾತ ಚಲನಚಿತ್ರ ಸಾಹಿತಿ ಶ್ರೀರಂಗ ನಿಧನ

‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು', 'ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ', 'ರಂಭೆ ನೀ ವಯ್ಯಾರದ ಗೊಂಬೆ', 'ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ', 'ಸುಮ್ ಸುಮ್ನೆ ಓಳು ಬಿಡೋ ಸುಂದರಿ' ಸೇರಿ ಸಾಕಷ್ಟು ಹಾಡುಗಳನ್ನು ಶ್ರೀರಂಗ ರಚನೆ ಮಾಡಿದ್ದರು.

'ಒಳಗೆ ಸೇರಿದರೆ ಗುಂಡು..' ಹಾಡು ಬರೆದ ಖ್ಯಾತ ಚಲನಚಿತ್ರ ಸಾಹಿತಿ ಶ್ರೀರಂಗ ನಿಧನ
ಶ್ರೀರಂಗ

 ಖ್ಯಾತ ಚಲಚಿತ್ರ ಸಾಹಿತಿ ಶ್ರೀರಂಗ ಅವರು ಭಾನುವಾರ (ಮೇ 9) ವಿಧಿವಶವರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ನಾಗರಬಾವಿಯ ತಮ್ಮ ನಿವಾಸದಲ್ಲಿ ಶ್ರೀರಂಗ ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 1000ಕ್ಕೂ ಹೆಚ್ಚು ಚಿತ್ರಗೀತೆಗಳನ್ನ ರಚಿಸಿದ ಹೆಚ್ಚುಗಾರಿಕೆ ಶ್ರೀರಂಗ ಅವರದ್ದು.

‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’, ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ‘ರಂಭೆ ನೀ ವಯ್ಯಾರದ ಗೊಂಬೆ’, ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’ ಸೇರಿ ಸಾಕಷ್ಟು ಹಾಡುಗಳನ್ನು ಶ್ರೀರಂಗ ರಚನೆ ಮಾಡಿದ್ದರು.

ಕಳೆದ ಕೆಲ ವರ್ಷಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು. ಹೀಗಾಗಿ, ಅವರಿಗೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಅವರು ಆರ್ಥಿಕ ಸಂಕಷ್ಟಕ್ಕೂ ತುತ್ತಾಗಿದ್ದರು. ಹೀಗಾಗಿ, ಅವರಿಗೆ ಸಹಾಯ ಮಾಡುವಂತೆ ನಟ ಸಂಚಾರಿ ವಿಜಯ್​ ಕರೆ ನೀಡಿದ್ದರು.

ಇದನ್ನೂ ಓದಿ: ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆ: ಬೇಂದ್ರೆಗೆ ಸಮಾನರಾದ ಕವಿ ಯಾರೂ ಇಲ್ಲ -ಸಾಹಿತಿಗಳ ಬಣ್ಣನೆ

ಸಹೃದಯಿ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್​ಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಡಾಕ್ಟರೆಟ್ ಪ್ರದಾನ