ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆ: ಬೇಂದ್ರೆಗೆ ಸಮಾನರಾದ ಕವಿ ಯಾರೂ ಇಲ್ಲ -ಸಾಹಿತಿಗಳ ಬಣ್ಣನೆ

ಬೇಂದ್ರೆಯವರ ಹೆಸರನ್ನು ಬೆಳೆಸುತ್ತೇವೆ ಎಂದು ಬಳಸಿಕೊಳ್ಳುವವರು ಬಹಳ ಜನ ಇದ್ದಾರೆ. ಬೇಂದ್ರೆ ಪುಸ್ತಕಗಳನ್ನು ಅನಂತ ಕಾಲ ಪ್ರಕಟಿಸಿದ ಹಾಗೂ ಇನ್ನೂ ಅನೇಕ ವರ್ಷ ಪ್ರಕಟಿಸುವ ಶಕ್ತಿವುಳ್ಳವರು ನಮ್ಮಲ್ಲಿದ್ದಾರೆ. ಅಂಥವರ್ಯಾರು ಇಂತಹ ಪುಸ್ತಕ ಪ್ರಕಟಿಸುತ್ತೇವೆ ಬನ್ನಿ ಎಂದು ಆಹ್ವಾನ ನೀಡದೇ ಇರುವುದು ಬೇಸರದ ಸಂಗತಿ ಎಂದರು.

ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆ: ಬೇಂದ್ರೆಗೆ ಸಮಾನರಾದ ಕವಿ ಯಾರೂ ಇಲ್ಲ -ಸಾಹಿತಿಗಳ ಬಣ್ಣನೆ
ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Mar 08, 2021 | 12:58 PM

ಧಾರವಾಡ: ತಾವು ಆಡುವ ಪ್ರತಿ ಮಾತನ್ನು ಕಾವ್ಯವನ್ನಾಗಿ ಪರಿವರ್ತಿಸುವ ವ್ಯಕ್ತಿತ್ವ ಬೇಂದ್ರೆಯವರಿಗಿತ್ತು. ಏಕೆಂದರೆ ಬೇಂದ್ರೆಯಂತಹ ಅದ್ಭುತ ಮಾತುಗಾರ, ಸಾಹಿತಿ ಬೇರೊಬ್ಬರು ಸಿಗುವುದೇ ಇಲ್ಲ ಎಂದು ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಬಣ್ಣಿಸಿದರು. ಜಿಲ್ಲೆಯ ಕೆಸಿಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆಯವರ 125ನೇ ಜನ್ಮದಿನದ ಪ್ರಯುಕ್ತ ನಾಡಿನ 65 ಜನ ಹಿರಿಯ ಮತ್ತು ಕಿರಿಯ ಸಾಹಿತಿಗಳು ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆಗೊಳಿಸಿ ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿದರು.

ತಮ್ಮ ಕಣ್ಣಿಗೆ, ಮನಸ್ಸಿಗೆ ಏನು ಕಾಣುತ್ತದೆಯೋ ಅದನ್ನು ಅಭಿವ್ಯಕ್ತಗೊಳಿಸುವ ಮಹಾಶಕ್ತಿ ಬೇಂದ್ರೆಯವರಿಗಿತ್ತು. ಇಂತಹ ಬೇಂದ್ರೆಯವರ ಹೆಸರನ್ನು ಬೆಳೆಸುತ್ತೇವೆ ಎಂದು ಬಳಸಿಕೊಳ್ಳುವವರು ಬಹಳ ಜನ ಇದ್ದಾರೆ. ಬೇಂದ್ರೆ ಪುಸ್ತಕಗಳನ್ನು ಅನಂತ ಕಾಲ ಪ್ರಕಟಿಸಿದ ಹಾಗೂ ಇನ್ನೂ ಅನೇಕ ವರ್ಷ ಪ್ರಕಟಿಸುವ ಶಕ್ತಿವುಳ್ಳವರು ನಮ್ಮಲ್ಲಿದ್ದಾರೆ. ಅಂಥವರ್ಯಾರು ಇಂತಹ ಪುಸ್ತಕ ಪ್ರಕಟಿಸುತ್ತೇವೆ ಬನ್ನಿ ಎಂದು ಆಹ್ವಾನ ನೀಡದೇ ಇರುವುದು ಬೇಸರದ ಸಂಗತಿ ಎಂದರು.

ಬೇಂದ್ರೆ ಓರ್ವ ಭಕ್ತ ಕವಿ: ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ್ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ ಭಾರತೀಯ ಪರಂಪರೆ ಪ್ರಕಾರ ಯಾರೂ 125ನೇ ಜನ್ಮದಿನದ ನಂತರ ನೆನಪಿನಲ್ಲಿ ಉಳಿಯುತ್ತಾರೋ ಅವರು ಚಿರಂಜೀವಿ ಆಗುತ್ತಾರೆ. ಹಾಗೆಯೇ ಬೇಂದ್ರೆಯವರು ಈಗ ಚಿರಂಜೀವಿ ಆಗಿದ್ದಾರೆ. ಬೇಂದ್ರೆ ಓರ್ವ ಭಕ್ತ ಕವಿ ಆಗಿದ್ದರು. ಅವರಲ್ಲಿ ದೊಡ್ಡ ಪ್ರಮಾಣದ ಭಕ್ತಿ ಇತ್ತು. ವೇದವನ್ನು ತುಂಬಾ ಚೆನ್ನಾಗಿ ಅನುಸರಿಸಿಕೊಂಡು ಬಂದಿದ್ದರು. ಅವರನ್ನು ಕಾವ್ಯ ಮತ್ತು ಶಾಸ್ತ್ರದ ದೃಷ್ಟಿಯಿಂದ ತುಂಬಾ ಕಡಿಮೆ ಅರ್ಥೈಸಿಕೊಂಡಿದ್ದೇವೆ. ಅವರನ್ನು ಅರ್ಥೈಸಿಕೊಳ್ಳಲು ಇನ್ನೂ ದೂರದ ದಾರಿ ಬೇಕು. ನಾವು ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಮ್ಮತನದ ಬೇರು, ಪರಂಪರೆಗಳನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಅವುಗಳನ್ನು ಪುನಃ ಪಡೆದುಕೊಳ್ಳಬೇಕಾದರೆ ಅದಕ್ಕೆ ಬೇಂದ್ರೆಯವರ ಕಾವ್ಯಗಳೇ ದಾರಿಯಾಗಬಲ್ಲವು ಎಂದರು.

ಬೇಂದ್ರೆಯವರ ಸರಿಸಮಾನರಾದ ಕವಿ ಯಾರೂ ಇಲ್ಲ: ಸಾಹಿತಿ ಡಾ.ಗುರುಲಿಂಗ ಕಾಪಸೆ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಅಗಾಧ ಶಕ್ತಿ ಇದ್ದಂತೆ. ಅವರ ಸಮಾನರಾದ ಕವಿ ಮತೊಬ್ಬರಿಲ್ಲ. ಹಿಂದಿ, ಇಂಗ್ಲೀಷ್‌ನಲ್ಲಿಯೂ ಬೇಂದ್ರೆಯವರ ಮಾದರಿಯಲ್ಲಿ ಬರೆಯುವ ಕವಿಗಳ ಕಾವ್ಯಗಳನ್ನು ನಾನು ಓದಿದ್ದೇನೆ. ಆದರೆ ಯಾರು ಸಹ ಬೇಂದ್ರೆಯವರಿಗೆ ಸಮಾನರಾಗುವುದೇ ಇಲ್ಲ ಎಂದರು.

ಲಾಭವನ್ನು ಬೇಂದ್ರೆ ಟ್ರಸ್ಟ್​ಗೆ ಕೊಡುತ್ತೇವೆ: ರಾಜಕುಮಾರ ಮಡಿವಾಳರ ಕೃತಿಯ ಸಂಪಾದಕ ರಾಜಕುಮಾರ ಮಡಿವಾಳರ ಕಾರ್ಯಕ್ರಮದಲ್ಲಿ ಮಾತನಾಡಿ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಅಂಬಿಕಾತನಯದತ್ತ ಪ್ರಶಸ್ತಿಯ ಮೊತ್ತವನ್ನು ಕಳೆದ ಸಲ ಸರ್ಕಾರ ಏಕಾಏಕಿ ಕಡಿಮೆ ಮಾಡಿತ್ತು. ಆಗ ಅನೇಕ ಹೋರಾಟಗಳು ನಡೆದಿದ್ದವು. ಆಗ ನಾವೆಲ್ಲ ಸೇರಿ ಏನಾದರೂ ಮಾಡಬೇಕು ಎಂದಾಗ ಈ ಪುಸ್ತಕದ ಪರಿಕಲ್ಪನೆ ಬಂದಿತ್ತು. ಕುವೆಂಪು ಟ್ರಸ್ಟ್​​ನವರು ಸ್ವಂತ ಪ್ರಶಸ್ತಿಗೆ ಮೊತ್ತ ಹಾಕುತ್ತಾರೆ. ಹಾಗೆಯೇ ನಮ್ಮ ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಬಲಗೊಳಿಸಬೇಕು ಎನ್ನುವುದಕ್ಕೆ ಈ ಪುಸ್ತಕ ಮಾಡಿದ್ದೇವೆ. ಈ ಪುಸ್ತಕ ಮಾರಾಟದಿಂದ ಬಂದ ಲಾಭವನೆಲ್ಲ ನಾವು ಬೇಂದ್ರೆ ಟ್ರಸ್ಟ್​ಗೆ ಕೊಡುತ್ತೇವೆ ಎಂದು ಹೇಳಿದರು.

ಇನ್ನೋರ್ವ ಸಂಪಾದಕಿ ಡಾ. ಗೀತಾ ವಸಂತ ಮಾತನಾಡಿ ಬೇಂದ್ರೆಯವರ ಕುರಿತು ಒಂದು ಸಂಗ್ರಹ ಯೋಗ್ಯ ಕೃತಿ ತರುವ ವಿಚಾರದಲ್ಲಿ ಈ ಪುಸ್ತಕ ಮಾಡಿದ್ದೇವೆ. ಈ ಪರಿಕಲ್ಪನೆ ಬಂದಾಗ ಕೇಳಿದ ಎಲ್ಲ ಹಿರಿಯರು ಲೇಖನ ಕೊಟ್ಟು ತುಂಬಾ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಇದನ್ನೂ ಓದಿ

Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ

ಗರ್ಭಿಣಿಯರ ಕಾಳಜಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ಕೋಲಾರದ ದರ್ಗಾ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ

ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ