ಕೋಲಾರದಲ್ಲೊಂದು ಜೀವ ಸಂಜೀವಿನಿ.. ಹಲವು ಕಾಯಿಲೆಗಳಿಗೆ ಔಷಧಿಗಳೇ ಇಲ್ಲದೆ ಕೇವಲ ಆಹಾರ ಪದ್ಧತಿಯಿಂದಲೆ ವಾಸಿ

ಕೇವಲ ಸೊಪ್ಪು, ಹಣ್ಣು, ತರಕಾರಿಗಳ ನಿಯಮಿತ ಸೇವನೆಯಿಂದ ಬಿಪಿ, ಶುಗರ್, ಸ್ಥೂಲಕಾಯ ದೇಹವನ್ನು ಕಡಿಮೆ ಮಾಡುವ ಜೊತೆಗೆ ಹತ್ತು ಹಲವು ಮಾರಕ ಕಾಯಿಲೆಗಳನ್ನು ವಾಸಿ ಮಾಡುವ ಜೀವ ಸಂಜೀವಿನಿ ಎಂಬ ಸಂಸ್ಥೆಯೊಂದು ಕೋಲಾರದ ಬಳಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಕೋಲಾರದಲ್ಲೊಂದು ಜೀವ ಸಂಜೀವಿನಿ..  ಹಲವು ಕಾಯಿಲೆಗಳಿಗೆ ಔಷಧಿಗಳೇ ಇಲ್ಲದೆ ಕೇವಲ ಆಹಾರ ಪದ್ಧತಿಯಿಂದಲೆ ವಾಸಿ
ಸೂರ್ಯನ ಕಿರಣಗಳಿಂದ ನರಮಂಡಲದ ಚೇತರಿಕೆ, ಆಹಾರ ಪದ್ಧತಿ
Follow us
sandhya thejappa
|

Updated on: Mar 08, 2021 | 11:30 AM

ಕೋಲಾರ: ಬದುಕಿನ ಜಂಜಾಟದಲ್ಲಿ ವ್ಯವಸ್ಥಿತವಾಗಿ ಜೀವನ ಮಾಡೋದನ್ನೆ ಮರೆತಿದ್ದೇವೆ. ಅನಾರೋಗ್ಯ ಸಮಸ್ಯೆಗಳಿಗೆ ಪದೇ ಪದೇ ವೈದ್ಯರ ಬಳಿ ಹೋಗುವುದು, ಜಿಮ್, ಯೋಗ, ಡಯಟ್ ಮಾಡಿ ಆರೋಗ್ಯಕ್ಕಾಗಿ ಪರದಾಟ ನಡೆಸುತ್ತೇವೆ. ಆದರೆ ಯಾವುದೇ ಔಷಧಿಯಿಲ್ಲದೆ ಕೇವಲ ಕ್ರಮಬದ್ಧ ಜೀವನ ಶೈಲಿಯಿಂದಲೇ ಹತ್ತಾರು ಕಾಯಿಲೆಗಳು ವಾಸಿ ಮಾಡುತ್ತಾ ಇಲ್ಲೊಂದು ಸಂಸ್ಥೆ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಕೇವಲ ಸೊಪ್ಪು, ಹಣ್ಣು, ತರಕಾರಿಗಳ ನಿಯಮಿತ ಸೇವನೆಯಿಂದ ಬಿಪಿ, ಶುಗರ್, ಸ್ಥೂಲಕಾಯ ದೇಹವನ್ನು ಕಡಿಮೆ ಮಾಡುವ ಜೊತೆಗೆ ಹತ್ತು ಹಲವು ಕಾಯಿಲೆಗಳನ್ನು ವಾಸಿ ಮಾಡುವ ಜೀವ ಸಂಜೀವಿನಿ ಎಂಬ ಸಂಸ್ಥೆಯೊಂದು ಕೋಲಾರದ ಬಳಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಕೋಲಾರ ನಗರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಚಾಮರಹಳ್ಳಿ ಗ್ರಾಮದ ಬಳಿ ರಾಜಶೇಖರ್ ಎಂಬುವರು ಜೀವ ಸಂಜೀವಿನಿ ಎಂಬ ಸಂಸ್ಥೆಯೊಂದನ್ನು ಕಟ್ಟಿದ್ದಾರೆ. ನಲವತ್ತು ಎಕರೆ ವಿಶಾಲವಾದ ಹಾಗೂ ಆರೋಗ್ಯ ವೃದ್ಧಿಗೆ ಪೂರಕವಾದ ವಾತಾವರಣದಲ್ಲಿ ನಿರ್ಮಾಣವಾಗಿರುವ ಈ ಸಂಸ್ಥೆ ಹಲವು ಕಾಯಿಲೆಗಳಿಗೆ ಯಾವುದೇ ಔಷಧಿಗಳಿಲ್ಲದೆ ಕೇವಲ ಆಹಾರ ಪದ್ಧತಿಯಿಂದಲೆ ವಾಸಿ ಮಾಡುತ್ತಿದೆ.

ಪ್ರಕೃತಿಯೊಂದಿಗೆ ಬದುಕುವ ವಿಧಾನವೇ ಚಿಕಿತ್ಸೆ ಜೀವ ಸಂಜೀವಿನಿ ನ್ಯಾಚುರಲ್ ಲೈಫ್ ಕೇಂದ್ರ ಹಲವು ಬಗೆಯ ಮರಗಳಿಂದ ಈ ನಲವತ್ತು ಎಕರೆ ಪ್ರದೇಶದಲ್ಲಿ ಮಲೆನಾಡಿನ ಹಿತಕರವಾದ ವಾತಾವರಣದಲ್ಲಿ ನಿರ್ಮಾಣವಾಗಿದೆ. ಬರದ ನಾಡಿನ ಮಧ್ಯೆ ಒಂದು ಕುಟೀರ. ಆ ಕುಟೀರದಲ್ಲಿ ಪ್ರತಿದಿನ ಜೀವನ ಶೈಲಿಯ ಕುರಿತು ಪಾಠ ಪ್ರವಚನಗಳು ನಡೆಯುತ್ತಿವೆ. ಮೂಲತಃ ಇಂಜಿನಿಯರಿಂಗ್ ಮುಗಿಸಿ ರಾಜ್ಯದ ಆರ್​ಟಿಓ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ನಂತರ ಸ್ವಯಂ ನಿವೃತ್ತಿ ಪಡೆದಿರುವ ರಾಜಶೇಖರ್ ಈ ಕೇಂದ್ರದ ರೂವಾರಿ.

ದೈನಂದಿನ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆ ನಾವು ಪಾಲಿಸುವ ಅನಾವಶ್ಯಕ ಆಚಾರ ವಿಚಾರಗಳಿಂದ ನಮಗಾಗುವ ದೈಹಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುತ್ತಾ, ಹೊಸದಾಗಿ ತಮ್ಮ ದೈನಂದಿನ ಜೀವನ ಶೈಲಿ ಹೇಗಿರಬೇಕು, ಆಹಾರ ಏನಾಗಿರಬೇಕು, ಯಾವ ರೀತಿಯ ಆಹಾರ ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದನ್ನು ಇಲ್ಲಿ ತಿಳಿಸಿಕೊಡಲಾಗುತ್ತಿದೆ.

ದೈಹಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುತ್ತಿರವ ರಾಜಶೇಖರ್

ಅರಳಿಕಟ್ಟೆ ಕೆಳಗೆ ಕುಳಿತು ಧ್ಯಾನ

ಕೈತುಂಬ ಆದಾಯ ಬರುತ್ತಿದ್ದ ಕೆಲಸವನ್ನೇ ಬಿಟ್ಟು ಬಂದಿರುವ ರಾಜಶೇಖರ್ ಸೂರ್ಯನ ಕಿರಣಗಳಿಂದ ನಮ್ಮ ನರಮಂಡಲದ ಚೇತರಿಕೆ ಹೇಗೆ, ಯೋಗ ನಿದ್ರೆ, ಸಂಯಮದ ಧ್ಯಾನ ಹೀಗೆ ಹಲವು ವಿಚಾರಗಳ ಬಗ್ಗೆ ರಾಜಶೇಖರ್ ತಿಳಿ ಹೇಳುತ್ತಾರೆ. ಇನ್ನೂ ಆರ್​ಟಿಓ ಅಧಿಕಾರಿಯಾಗಿ ತಮ್ಮ ಜೀವನವನ್ನು ಅಚ್ಚುಕಟ್ಟಾಗಿ ಸಾಗಿಸಬಹುದಾಗಿದ್ದ ರಾಜಶೇಖರ್ ಸಮಾಜಕ್ಕೆ ಏನಾದರು ಮಾಡಬೇಕು ಎನ್ನುವ ತುಡಿತದಿಂದ ತಮ್ಮ ಕೆಲಸಕ್ಕೆ ಕೈಮುಗಿದ ಇವರು ನ್ಯಾಚುರಲ್ ಲೈಫ್ ಎಂಬ ಕೇಂದ್ರವನ್ನು ಸ್ಥಾಪಿಸಿದರು.

ನಲವತ್ತು ಎಕರೆಯಲ್ಲಿ ಸುಂದರ ಪ್ರಕೃತಿ ನಿರ್ಮಾಣ ತಮ್ಮದೇ ಮಾಲೀಕತ್ವದ ನಲವತ್ತು ಎಕರೆಯಲ್ಲಿ ಹಣ್ಣು ಹಂಪಲು ವಿವಿಧ ಪ್ರಭೇದಗಳ ಮರ-ಗಿಡಗಳು, ಔಷಧಿ ಗುಣಗಳ ಸಾವಯವ ಕೃಷಿಯ ಮರ ಗಿಡಗಳನ್ನು ಬೆಳೆಸಿದ್ದಾರೆ. ಅತಿ ಹೆಚ್ಚು ಆಕ್ಸಿಜನ್ ಉತ್ಪಾದಿಸುವ ಅರಳಿ ಮರ ಸೇರಿದಂತೆ ಹಲವು ಔಷಧಿಯ ಗುಣ ಹೊಂದಿರುವ ಮರಗಳನ್ನು ಇಲ್ಲಿ ಬೆಳೆಸಲಾಗಿದೆ. ಅರಳಿಕಟ್ಟೆ ನಿರ್ಮಿಸಿ, ಕಲ್ಲು ಹಾಸುಗಳನ್ನು ಬಳಸಿ ಪ್ರಕೃತಿದತ್ತ ವಾತಾವರಣದಲ್ಲಿ ತಮ್ಮ ಕೇಂದ್ರಕ್ಕೆ ಬರುವರಿಗೆ ಚಿಕಿತ್ಸಾ ಶೈಲಿಯ ಕುರಿತು ಪಾಠ ಮಾಡುತ್ತಾರೆ. ಅರಳಿಕಟ್ಟೆ ಮೇಲೆ ಕುಳಿತು ಧ್ಯಾನ ಮಾಡಿದರೆ ಆಗುವ ಪ್ರಭಾವ, ಮರ ಗಿಡಗಳ ನಡುವೆ ವಾಕ್ ಮಾಡುವುದರಿಂದ ದೇಹಕ್ಕೆ ಸಿಗುವ ಲಾಭಗಳು, ಪ್ರತಿದಿನದ ಆಹಾರಗಳಲ್ಲಿ ನಾವು ಏನನ್ನು ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಯಾವ ತರಕಾರಿಗಳು ದೇಹಕ್ಕೆ ಹಿತಕರ, ಮಾಂಸಾಹಾರ ಸೇವನೆ ಹೇಗಿರಬೇಕು, ಸರಳವಾದ ಯೋಗಾಸನ ಏಕೆ ಮತ್ತು ಹೇಗೆ ಮಾಡಬೇಕು, ಸೂರ್ಯ ನೋಟ ಚಿಕಿತ್ಸೆ ಪಡೆಯುವುದು ಹೇಗೆ ಅದು ನಮ್ಮ ದೇಹಕ್ಕೆ ಮತ್ತು ನರಮಂಡಲದ ಚೇತರಿಕೆಗೆ ಹೇಗೆ ಸಹಕಾರಿ. ಹೀಗೆ ನೂರಾರು ವಿಚಾರಗಳ ಬಗ್ಗೆ ರಾಜಶೇಖರ ತಿಳಿಸಿಕೊಡುತ್ತಾರೆ. ಇಲ್ಲಿಗೆ ಬರುವವರಿಗೆ ಇಲ್ಲಿಯೇ ತಂಗಲು ಬೇಕಾದ ವಸತಿ, ವಿಶೇಷವಾದ ತಿಂಡಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಐದು ದಿನಗಳ ಒಂದು ಕೋರ್ಸ್ ಇಲ್ಲಿದ್ದು, ಕನಿಷ್ಠ ದರ ನಿಗದಿ ಮಾಡಿ ಕಲಿಸಿಕೊಡಲಾಗುತ್ತಿದೆ.

ಜೀವ ಸಂಜೀವಿನಿ ಕೇಂದ್ರಕ್ಕೆ ಆಗಮಿಸುತ್ತಿರುವ ಮಹಿಳೆಯರು

ಜೀವ ಸಂಜೀವಿನಿ ನ್ಯಾಚುರಲ್ ಲೈಫ್ ಕೇಂದ್ರ

ನನಗೆ ಒಳ್ಳೆಯ ಆದಾಯ ತರುವ ಕೆಲಸ ಕೈನಲ್ಲಿತ್ತು. ಆದರೆ ನಾನು ಸಾಕಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೆ. ಕೇವಲ ಆಹಾರ ಚಿಕಿತ್ಸೆಯಿಂದಲೇ ಹಲವು ಕಾಯಿಲೆಗಳಿಂದ ಗುಣಮುಖನಾದೆ. ಹಾಗಾಗಿ ನನ್ನಂತ ಹತ್ತಾರು ಜನರಿಗೆ ಅನುಕೂಲವಾಗಲೆಂದು ಇಂಥಹದೊಂದು ಸಂಸ್ಥೆ ನಿರ್ಮಾಣ ಮಾಡಿ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪ್ರಕೃತಿಯೊಂದಿಗೆ ಬದುಕಿ ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ರಾಜಶೇಖರ್ ತಿಳಿಸಿದರು.

ಯಾವುದೇ ಔಷಧಿ ಪಡೆಯದೆ ಸಕ್ಕರೆ ಕಾಯಿಲೆ ಹಾಗೂ ಬಿಪಿಯಂತ ಕಾಯಿಲೆಗಳು ವಾಸಿಯಾಗುತ್ತಿವೆ. ಸಕ್ಕರೆ ಕಾಯಿಲೆಗೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದವರು ಇಲ್ಲಿಗೆ ಬಂದು ಜೀವನ ಶೈಲಿಯನ್ನು, ಆಹಾರ ವಿಧಾನವನ್ನು ಬಳಸಿಕೊಂಡ ನಂತರ ಕಾಯಿಲೆ ವಾಸಿ ಮಾಡಿಕೊಂಡಿರುವ ಹತ್ತಾರು ಉದಾಹರಣೆಗಳು ಸಿಗುತ್ತವೆ. ಸಕ್ಕರೆ ಕಾಯಿಲೆ ಬಂದ ಮೇಲೆ ಬದುಕುವುದೇ ಇಲ್ಲಾ ಎಂದುಕೊಂಡಿದ್ದ ನನಗೆ ಈಗ ಗುಣ ಮುಖಿಯಾಗಿ ಎಲ್ಲರಂತೆ ಬದುಕುವಂತಾಗಿದೆ ಎನ್ನುತ್ತಾರೆ ಇಲ್ಲಿ ಆಹಾರ ಚಿಕಿತ್ಸೆ ಪಡೆದ ಪಾವಗಡದ ನಾಗಮಣಿ.

ಇದನ್ನೂ ಓದಿ

ಆಹಾರ ಇಲಾಖೆ ವೆಬ್​ಸೈಟ್​ ದುರ್ಬಳಕೆ ಪ್ರಕರಣ: ಟಿವಿ9 ವರದಿಯಿಂದ ಎಚ್ಚೆತ್ತ ಆಹಾರ ಇಲಾಖೆ, ಸಮಗ್ರ ತನಿಖೆಗೆ ಆದೇಶ

ತಡರಾತ್ರಿ ಆಹಾರವ ಹುಡುಕಿ ಬಂದ ಕಾಡಾನೆ.. ಟ್ರಾನ್ಸ್​​ಫಾರ್ಮರ್​​ ಮೂಲಕ ವಿದ್ಯುತ್ ಪ್ರವಹಿಸಿ ಸಾವು

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ