AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sameera Reddy: ಕೊರೊನಾ ಸೋಂಕಿತ ‘ವರದನಾಯಕ’ ನಟಿ ಸಮೀರಾ ರೆಡ್ಡಿಗೆ ಕೆಟ್ಟ ಕಮೆಂಟ್​

ಕೆಟ್ಟ ಕಮೆಂಟ್​ ಮಾಡುವವರಿಗೆಲ್ಲ ನಟಿ ಸಮೀರಾ ರೆಟ್ಟಿ ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಖಾರದ ಮಾತುಗಳನ್ನು ಉಪಯೋಗಿಸದೆಯೂ ಚೆನ್ನಾಗಿ ತಿವಿದಿದ್ದಾರೆ.

Sameera Reddy: ಕೊರೊನಾ ಸೋಂಕಿತ ‘ವರದನಾಯಕ’ ನಟಿ ಸಮೀರಾ ರೆಡ್ಡಿಗೆ ಕೆಟ್ಟ ಕಮೆಂಟ್​
ಮಕ್ಕಳ ಜೊತೆ ನಟಿ ಸಮೀರಾ ರೆಡ್ಡಿ
ಮದನ್​ ಕುಮಾರ್​
| Updated By: Digi Tech Desk|

Updated on:Apr 29, 2021 | 9:14 AM

Share

ಕನ್ನಡ ಸಿನಿಪ್ರಿಯರಿಗೆ ‘ವರದನಾಯಕ’ ಚಿತ್ರದ ಮೂಲಕ ನಟಿ ಸಮೀರಾ ರೆಡ್ಡಿ ಪರಿಚಿತರಾಗಿದ್ದರು. ಆ ಸಿನಿಮಾದಲ್ಲಿ ಅವರು ಕಿಚ್ಚ ಸುದೀಪ್​ಗೆ ಜೋಡಿ ಆಗಿದ್ದರು. ಆ ಬಳಿಕ ಅವರು ಯಾವುದೇ ಸಿನಿಮಾ ಮಾಡಲಿಲ್ಲ. ಸಂಸಾರ, ಮನೆ, ಮಕ್ಕಳು ಅಂತ ಬ್ಯುಸಿ ಆಗಿಬಿಟ್ಟರು. ಕೆಲವೇ ದಿನಗಳ ಹಿಂದೆ ಸಮೀರಾ ರೆಡ್ಡಿ ಮತ್ತು ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್​ ಸೋಂಕು ತಗುಲಿತ್ತು. ಈ ಸಂದರ್ಭದಲ್ಲಿಯೂ ಅವರಿಗೆ ನೆಗೆಟಿವ್​​ ಕಮೆಂಟ್​ಗಳ ಕಾಟ ತಪ್ಪಿಲ್ಲ. ಅವುಗಳಿಗೆ ಸಮೀರಾ ಸರಿಯಾಗಿಯೇ ಉತ್ತರ ನೀಡಿದ್ದಾರೆ.

ಚಿತ್ರರಂಗದಿಂದ ದೂರು ಉಳಿದುಕೊಂಡಿರುವ ಸಮೀರಾ ಅವರು ಗ್ಲಾಮರ್​ ಕಡೆಗೆ ಗಮನ ನೀಡುತ್ತಿಲ್ಲ. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹಾಗಾಗಿ ಯಾವುದೇ ಮೇಕಪ್​ ಮೊರೆಹೋಗದೇ ಅವರು ಸೋಶಿಯಲ್ ಮೀಡಿಯಾ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದನ್ನು ಕಂಡ ಕೆಲವರು ಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಸಮೀರಾ ರೆಡ್ಡಿಗೆ ಈಗ 42 ವರ್ಷ ವಯಸ್ಸು. ಸಹಜವಾಗಿಯೇ ಅವರಿಗೆ ಬಿಳಿ ಕೂದಲು ಆಗಿದೆ. ಹಾಗಂತ ಅವುಗಳನ್ನು ಮರೆಮಾಚುವ ಕೆಲಸಕ್ಕೆ ಅವರು ಕೈ ಹಾಕಿಲ್ಲ. ಆದರೆ ಅದನ್ನೇ ಇಟ್ಟುಕೊಂಡು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕೆಟ್ಟ ಕಮೆಂಟ್​ ಮಾಡುತ್ತಿದ್ದಾರೆ. ಅದು ಸಮೀರಾ ಗಮನಕ್ಕೂ ಬಂದಿದೆ. ಅಂಥವರಿಗೆಲ್ಲ ಅವರು ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಖಾರದ ಮಾತುಗಳನ್ನು ಉಪಯೋಗಿಸದೇ ಚೆನ್ನಾಗಿ ತಿವಿದಿದ್ದಾರೆ.

ವೈರಲ್​ ಡೈಲಾಗ್​ಗಳಿಗೆ ಸಂಗೀತದ ಸ್ಪರ್ಶ ನೀಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಯಶ್​ರಾಜ್​ ಮುಖಾಟೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ಅವರು ಒಂದು ಲೇಟೆಸ್ಟ್​ ಹಾಡನ್ನು ಬಳಸಿಕೊಂಡು ಸಮೀರಾ ರೆಡ್ಡಿ ಎಲ್ಲ ಹೇಟರ್​ಗಳಿಗೆ ಛಾಟಿ ಬೀಸಿದ್ದಾರೆ. ‘ಕಮೆಂಟ್​ ಮಾಡುವವರೆಲ್ಲ ನೆನಪಿಟ್ಟುಕೊಳ್ಳಿ. ಇದು ನನ್ನ ಜೀವನ. ಹೇಗಾದರೂ ಜೀವಿಸುತ್ತೇನೆ. ನಿಮಗೆ ಏನಾಗಬೇಕು? ನೀವು ನಿಮ್ಮ ಜೀವನ ನೋಡಿಕೊಳ್ಳಿ’ ಎಂದು ರ್ಯಾಪ್​ ಹಾಡಿನ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ಕಮೆಂಟ್​ ಮಾಡುವವರ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ನೀವೂ ತಲೆ ಕೆಡಿಸಿಕೊಳ್ಳಬೇಡಿ. ಬಿಳಿ ಕೂದಲಿಗೆ ಡೋಂಟ್​ ಕೇರ್​. ಬೈಯ್ಗುಳ ಇಲ್ಲ, ಬರೀ ಚಪ್ಪಾಳೆ. ಈ ಹಾಡಿನ ಮೂಲಕ ನನ್ನನ್ನು ಹುರಿದುಂಬಿಸುತ್ತಿರುವ ಯಶ್​ರಾಜ್​ ಮುಖಾಟೆ ಅವರಿಗೆ ಧನ್ಯವಾದಗಳು’ ಎಂದು ಆ ವಿಡಿಯೋಗೆ ಸಮೀರಾ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಬಾಲಿವುಡ್​ನ ‘ಕರಾಳ ಮುಖ’ ಬಿಚ್ಚಿಟ್ಟ ಕೃಷ್ಣ ಸುಂದರಿ ಸಮೀರಾ ರೆಡ್ಡಿ!

Published On - 8:15 am, Thu, 29 April 21

ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ