ಕೊನೆಯ ಬಾರಿಗೆ ಅವರ ಮುಖ ನೋಡಲೂ ಆಗಿಲ್ಲ; ಆಪ್ತರನ್ನು ಕಳೆದುಕೊಂಡು ಭಾವುಕರಾದ ನೀನಾಸಂ ಸತೀಶ್​

ಅನೇಕರಿಗೆ ರೋಗದ ಲಕ್ಷಣವೇ ಕಾಣಿಸುತ್ತಿಲ್ಲ. ಹೊರಗೆ ಓಡಾಡುವರು ಮಾಸ್ಕ್​ ಧರಿಸಿ ಎಂದು ನೀನಾಸಂ ಸತೀಶ್​ ಮನವಿ ಮಾಡಿಕೊಂಡಿದ್ದಾರೆ.

ಕೊನೆಯ ಬಾರಿಗೆ ಅವರ ಮುಖ ನೋಡಲೂ ಆಗಿಲ್ಲ; ಆಪ್ತರನ್ನು ಕಳೆದುಕೊಂಡು ಭಾವುಕರಾದ ನೀನಾಸಂ ಸತೀಶ್​
Follow us
ರಾಜೇಶ್ ದುಗ್ಗುಮನೆ
|

Updated on: Apr 29, 2021 | 6:52 PM

ಕೊರೊನಾ ವೈರಸ್​ ಸಾಕಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೊರೊನಾ ಬಂದಿದೆ ಎಂದು ಇಂದು ಆಸ್ಪತ್ರೆ ಸೇರಿದವರು ನಾಳೆ ಎನ್ನುವ ವೇಳೆಗೆ ಮೃತಪಟ್ಟ ಸಾಕಷ್ಟು ಉದಾಹರಣೆ ಇದೆ. ಮೊದಲ ಅಲೆಗಿಂತ ಭೀಕರವಾಗಿ ಎರಡನೆ ಅಲೆ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸುವ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ವಿಡಿಯೋ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಟ ನೀನಾಸಂ ಸತೀಶ್​ ಕೂಡ ಈ ಬಗ್ಗೆ ವಿಡಿಯೋ ಮಾಡಿ ಹಾಕಿದ್ದಾರೆ. ಅವರ ದೊಡ್ಡಮ್ಮ ಇತ್ತೀಚೆಗೆ ಮೃತಪಟ್ಟಿದ್ದರಂತೆ. ಅವರ ಮುಖ ನೋಡಲು ಸತೀಶ್​ ಅವರಿಗೆ ಸಾಧ್ಯವಾಗಿಲ್ಲ.

ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿರುವ ನೀನಾಸಂ ಸತೀಶ್​, ಪ್ರತಿಯೊಬ್ಬರೂ ಎಚ್ಚರಿಕೆ ಕೊಡುತ್ತಾ ಇದಾರೆ. ಈ ಪರಿಸ್ಥಿತಿ ಬರೋಕೆ ನಾವೆ ಕಾರಣ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ವೈದ್ಯರು ಹೇಳುತ್ತಲೇ ಬಂದಿದ್ದರು. ಆದರೆ ನಾವು ಅದನ್ನು ಪಾಲನೆ ಮಾಡಿಲ್ಲ. ಈ ವೈರಸ್​ ರೂಪಾಂತರಗೊಂಡಿದೆ. ಅನೇಕರಿಗೆ ರೋಗದ ಲಕ್ಷಣವೇ ಕಾಣಿಸುತ್ತಿಲ್ಲ. ಹೊರಗೆ ಓಡಾಡುವರು ಮಾಸ್ಕ್​ ಧರಿಸಿ ಎಂದು ನೀನಾಸಂ ಸತೀಶ್​ ಮನವಿ ಮಾಡಿಕೊಂಡಿದ್ದಾರೆ.

ನನ್ನ ದೊಡ್ಡಮ್ಮ ಸತ್ತಿದ್ದರು. ಆದರೆ, ಕೊನೆಯ ಬಾರಿ ನನಗೆ ಅವರ ಮುಖ ನೋಡಲೂ ಆಗಲಿಲ್ಲ. ಇದಕ್ಕೆ ಯಾರನ್ನೂ ನಾವು ಬಯ್ಯೋಕೆ ಆಗಲ್ಲ. ನಿಮಗೆ ವೈರಸ್​ ಬಂದಿದ್ದರೆ ಅದು ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಿ. ಅದೇ ನೀವು ಮಾಡುವ ದೊಡ್ಡ ಸಹಾಯ. ನೀವು ಸೇಫ್​ ಆಗಿರಿ, ಬೇರೆಯವರಿಗೂ ಸೇಫ್​ ಆಗಿರೋಕೆ ಸಹಾಯ ಮಾಡಿ ಎಂದು ಸತೀಶ್​ ಮನವಿ ಮಾಡಿದ್ದಾರೆ.

ನೀನಾಸಂ ಸತೀಶ್​ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಕೊರೊನಾ ಕಾರಣದಿಂದ ಸಿನಿಮಾ ಕೆಲಸಗಳು ಮುಂದೂಡಲ್ಪಟ್ಟಿವೆ. ಪರಿಮಳ ಲಾಡ್ಜ್​, ಗೋದನ್ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಇದೆ.

ಇದನ್ನೂ ಓದಿ: 100 ಕೋಟಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಹಾಯ ಮಾಡುವುದರಲ್ಲಿ ಖುಷಿ ಸಿಗುತ್ತೆ : ನಟ ಸೋನು ಸೂದ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ