Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ

Kamaal R Khan: ಸದಾ ಒಂದಿಲ್ಲೊಂದು ವಿಚಾರಗಳ ಬಗ್ಗೆ ಕಮೆಂಟ್​ ಮಾಡುತ್ತ, ವಿವಾದ ಸೃಷ್ಟಿಸಿಕೊಳ್ಳುವಲ್ಲಿ ಕಮಾಲ್​ ಆರ್​. ಖಾನ್​ ಫೇಮಸ್​. ಈಗ ಅವರು ಕಂಗನಾ ರಣಾವತ್​ ತಂಟೆಗೆ ಬಂದಿದ್ದಾರೆ.

Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ
ಕಂಗನಾ ರಣಾವತ್​
Follow us
ಮದನ್​ ಕುಮಾರ್​
|

Updated on: Jun 27, 2021 | 1:45 PM

ನಟಿ ಕಂಗನಾ ರಣಾವತ್​ ಅವರು ವಿವಾದ ಮಾಡಿಕೊಳ್ಳುವುದರಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅದರ ನಡುವೆಯೇ ಹೊಸ ಹೊಸ ಸಿನಿಮಾ ಅನೌನ್ಸ್​ ಮಾಡುತ್ತಿರುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡುವುದಾಗಿ ಅವರು ಕೆಲವೇ ದಿನಗಳ ಹಿಂದೆ ಘೋಷಿಸಿದರು. ಆ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಅಚ್ಚರಿ ಎಂದರೆ ಚಿತ್ರಕ್ಕೆ ‘ಎಮರ್ಜೆನ್ಸಿ’ ಎಂದು ಹೆಸರು ಇಡಲಾಗಿದ್ದು, ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಸ್ವತಃ ಕಂಗನಾ ಮಾಡಲಿದ್ದಾರೆ. ಆದರೆ ಆ ಸಿನಿಮಾ ಖಂಡಿತವಾಗಿ ಸೋಲಲಿದೆ ಎಂದು ಕಮಾಲ್​ ಆರ್​. ಖಾನ್ ಭವಿಷ್ಯ ನುಡಿದಿದ್ದಾರೆ.

‘ಇಂದಿರಾ ಗಾಂಧಿ ಮತ್ತು ಎಮರ್ಜೆನ್ಸಿ ಕುರಿತು ನಿರ್ದೇಶಕ ಮಧುರ್​ ಭಂಡಾರ್ಕರ್​ ಅವರು ‘ಇಂದೂ ಸರ್ಕಾರ್’ ಸಿನಿಮಾ ಮಾಡಿದ್ದರು. ನಾಯಿ ಕೂಡ ಆ ಸಿನಿಮಾ ನೋಡಲು ​ಹೋಗಿರಲಿಲ್ಲ. ಈಗ ಅಕ್ಕ ಕಂಗನಾ ರಣಾವತ್​ ಅವರು ಅದೇ ವಿಷಯದ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಅಂದರೆ ಆಕೆ ಸತತ 12ನೇ ಸಿನಿಮಾದಲ್ಲೂ ಸೋಲಬೇಕು ಅಂತ ಅಂದುಕೊಂಡಿದ್ದಾರೆ. ಅವರು ನಟಿಸಿದ 11 ಸಿನಿಮಾಗಳು ಈಗಾಗಲೇ ಫ್ಲಾಪ್​ ಆಗಿವೆ’ ಎಂದು ಕಮಾಲ್​ ಆರ್​. ಖಾನ್​ ವ್ಯಂಗ್ಯ ಮಾಡಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರಗಳ ಬಗ್ಗೆ ಕಮೆಂಟ್​ ಮಾಡುತ್ತ, ವಿವಾದ ಸೃಷ್ಟಿಸಿಕೊಳ್ಳುವಲ್ಲಿ ಕಮಾಲ್​ ಆರ್​. ಖಾನ್​ ಫೇಮಸ್​. ಈಗ ಅವರು ಕಂಗನಾ ತಂಟೆಗೆ ಬಂದಿದ್ದಾರೆ. ಕಂಗನಾ ಎಂಥ ಕಿರಿಕ್​ ಪಾರ್ಟಿ ಎಂಬುದು ಗೊತ್ತಿದ್ದರೂ ಕೂಡ ಅವರು ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಅಪಶಕುನ ನುಡಿದಿದ್ದಾರೆ. ಇದು ಈಗ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಕಂಗನಾ ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬುದನ್ನು ನೋಡಲು ನೆಟ್ಟಿಗರು ಕಾಯುತ್ತಿದ್ದಾರೆ.

‘ಎಮರ್ಜೆನ್ಸಿ’ ಸಿನಿಮಾ ಮೇಲೆ ಕಂಗನಾ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಮತ್ತೊಮ್ಮೆ ನಿರ್ದೇಶಕಿಯ ಕ್ಯಾಪ್​ ಧರಿಸಲು ಖುಷಿ ಎನಿಸುತ್ತದೆ. ಈ ಚಿತ್ರಕ್ಕಾಗಿ 2 ವರ್ಷಕ್ಕೂ ಅಧಿಕ ಸಮಯ ಕೆಲಸ ಮಾಡಿದ ಬಳಿಕ ಅನಿಸುತ್ತಿರುವುದು ಏನೆಂದರೆ, ಈ ಚಿತ್ರಕ್ಕೆ ನನ್ನ ಹೊರತಾಗಿ ಬೇರೆ ಯಾರೂ ಕೂಡ ಚೆನ್ನಾಗಿ ನಿರ್ದೇಶನ ಮಾಡಲು ಸಾಧ್ಯವಿಲ್ಲ. ಈ ಸಿನಿಮಾಗಾಗಿ ನನ್ನ ನಟನೆಯ ಕೆಲವು ಬೇರೆ ಪ್ರಾಜೆಕ್ಟ್​ಗಳನ್ನು ತ್ಯಾಗ ಮಾಡಬೇಕಾಗಿದೆ. ಆದರೂ ನಾನು ಈ ಚಿತ್ರ ಮಾಡಲು ನಿರ್ಧರಿಸಿದ್ದೇನೆ. ತುಂಬ ಎಗ್ಸೈಟ್​ ಆಗಿದ್ದೇನೆ. ಇದು ಒಂದು ಅದ್ಭುತ ಜರ್ನಿ ಆಗಿರಲಿದೆ’ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.

ಇದನ್ನೂ ಓದಿ:

‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ