‘ವೇದಿಕೆಯಲ್ಲಿ ಮಾತನಾಡುವವರಿಗೆ ಇದು ಗೌರವವಲ್ಲ’; ಸಿಟ್ಟಿನಿಂದ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸುದೀಪ್

ಸುದೀಪ್ ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆಯೇ ಸ್ಪರ್ಧಿಗಳು ಮಧ್ಯೆ ಸಾಕಷ್ಟು ಬಾರಿ ಮಾತನಾಡಿದರು. ಇದು ಸುದೀಪ್ ಕೋಪಕ್ಕೆ ಕಾರಣವಾಗಿದೆ.

‘ವೇದಿಕೆಯಲ್ಲಿ ಮಾತನಾಡುವವರಿಗೆ ಇದು ಗೌರವವಲ್ಲ’; ಸಿಟ್ಟಿನಿಂದ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸುದೀಪ್
ಸುದೀಪ್​

‘ಬಿಗ್ ಬಾಸ್’ನಲ್ಲಿ ಕಿಚ್ಚ ಸುದೀಪ್ ಮಾಡುವ ನಿರೂಪಣೆ ವೀಕ್ಷಕರಿಗೆ ಇಷ್ಟವಾಗುತ್ತದೆ. ಅವರ ನಿರೂಪಣೆಯಲ್ಲಿ ಹಾಸ್ಯ ತುಂಬಿದ ಮಾತು, ಲಘುವಾದ ಎಚ್ಚರಿಕೆ, ಸ್ವಲ್ಪ ಸಿಟ್ಟು, ನಗು ಎಲ್ಲವೂ ಇರುತ್ತದೆ. ಆದರೆ, ಸೀಸನ್ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಸುದೀಪ್ ತುಂಬಾನೇ ಸಿಟ್ಟಾಗಿದ್ದರು. ಮನೆಯವರಿಗೆ ಅವರು ಎಚ್ಚರಿಕೆ ಕೂಡ ನೀಡಿದರು. ಇದಕ್ಕೆ ಕಾರಣ, ಸ್ಪರ್ಧಿಗಳು ನಡೆದುಕೊಂಡ ರೀತಿ.

ವಾರಾಂತ್ಯಾದ ಪಂಚಾಯ್ತಿ ವೇಳೆ ಒಂದು ಚೊಂಬನ್ನು ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳು ಈ ಚೊಂಬಿಗೆ ಯಾರು ಅರ್ಹರು ಎಂದು ಡಿಸೈಡ್ ಮಾಡಿ ಅವರಿಗೆ ನೀಡಬೇಕು. ಸುದೀಪ್ ವೇದಿಕೆಯಿಂದ ಮಾತನಾಡುತ್ತಿದ್ದಂತೆ ಮಧ್ಯೆ ಸಾಕಷ್ಟು ಬಾರಿ ಸ್ಪರ್ಧಿಗಳು ಮಾತನಾಡಿದರು. ಇದು ಸುದೀಪ್ ಕೋಪಕ್ಕೆ ಕಾರಣವಾಗಿದೆ.

‘ಒಬ್ಬರು ಮಾತಾನಾಡುವಾಗ ಮಧ್ಯೆ ಮಾತಾನಾಡಬಾರದು. ಪ್ರತಿಯೊಬ್ಬರಿಗೂ ಮಾತಾಡೋಕೆ ಕೊಟ್ಟಿದೀವಿ. ವೇದಿಕೆಯಲ್ಲಿ ಮಾತನಾಡುವವರಿಗೆ ಇದು ಗೌರವವಲ್ಲ. ಪ್ರತಿಯೊಬ್ಬರಿಗೂ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ನಿಮ್ಮ ವಿವರಣೆ ತೆಗೆದುಕೊಳ್ಳದೆ ಸೆಗ್ಮೆಂಟ್ ಮುಗಿಸಿಲ್ಲ. ಹಾಗಿರುವಾಗ ಒಬ್ಬರು ಮಾತನಾಡುತ್ತಿದ್ದಾರೆ ಎಂದರೆ, ನಾವು ಅವರಿಗೆ ಪ್ರಶ್ನೆ ಕೇಳಿದ್ದೇವೆ ಎಂದರ್ಥ. ಆ ಮಾತಿನಲ್ಲಿ ಅವರು ಯಾರಿಗಾದರೂ ಏನಾದರೂ ಹೇಳಿದ್ದರೆ ಅವರಿಗೂ ಮಾತನಾಡೋಕೆ ಒಂದು ಅವಕಾಶ ಕೊಡ್ತೀವಿ’ ಎಂದು ಮಾತು ಆರಂಭಿಸಿದರು ಸುದೀಪ್.

‘ಎಲ್ಲರೂ ಕೂತು ನೋಡುವಾಗ ವ್ಯಕ್ತಿತ್ವದ ಮೇಲೆ, ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ. ನಿಮಗೆ ತಾಳ್ಮೆ ಇಲ್ಲ. ಯಾರೋ ಮಾತನಾಡುವಾಗ ಮಧ್ಯದಲ್ಲಿ ನೀವು ಮಾತನಾಡುತ್ತಿದ್ದೀರಿ ಎಂದರೆ ಅದು ಎಂತಹ ಸಭ್ಯತೆ? ಇದು ಕ್ಲಾಸ್ ಆಗಿ ತೆಗೆದುಕೊಳ್ಳಬೇಡಿ. ಇದು ವಾರ್ನಿಂಗ್ ಎಂದೇ ಪರಿಗಣಿಸಿ. ಇದು 43 ದಿನ ಗ್ಯಾಪ್ ಆಗಿದ್ದರ ಎಫೆಕ್ಟಾ? 73 ದಿನಗಳಲ್ಲಿ ಇಲ್ಲದ ಸ್ಪರ್ಧಿಗಳಾಗಿ ನೀವು ಬಂದಿದೀರಾ? ತಾಳ್ಮೆ ಇಲ್ಲವೇ? ಇದು ಎಲ್ಲರಿಗೂ ಅನ್ವಯವಾಗುತ್ತದೆ. ಇದು ಮೊದಲ ಬಾರಿ ಆಗಿದೆ. ಮನಸ್ಸಲ್ಲಿ ಸಾವಿರ ವಿಚಾರ ಇಟ್ಕೊಂಡು ಬಂದಿದೀರಾ. ಎಲ್ಲವನ್ನೂ ಹೇಳೋಕಾಗಲ್ಲ. ನಿಮ್ಮ ಉತ್ತರವನ್ನು ನಾವು ಕೇಳ್ತಾ ಇದೀವಿ ಎಂದರೆ ಅದಕ್ಕೆ ಅಗೌರವ ತೋರಿಸಬೇಡಿ’ ಎಂದರು ಸುದೀಪ್.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?