AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

ಟಾಸ್ಕ್​ ವೇಳೆ ದಿವ್ಯಾ ಸುರೇಶ್​ ಕಾಲಿಗೆ ಗಾಯವಾಗಿದೆ. ಅಲ್ಲದೆ, ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ವೈದ್ಯರು ಬಂದು ಬ್ಯಾಂಡೇಜ್​ ಕೂಡ ಹಾಕಿದರು. ಇಷ್ಟಾದರೂ ಮಂಜು ಪಾವಗಡ ಎದ್ದೇಳಲಿಲ್ಲ.

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​
ಮಂಜು ಪಾವಗಡ - ದಿವ್ಯಾ ಸುರೇಶ್​
TV9 Web
| Edited By: |

Updated on: Jun 26, 2021 | 7:31 AM

Share

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಮೊದಲ ಇನ್ನಿಂಗ್ಸ್​ಗಿಂತಲೂ ಈ ಬಾರಿ ಭಿನ್ನವಾಗಿ ಆಡುತ್ತಿದ್ದಾರೆ. ಮಂಜು ಕಳೆದ ಬಾರಿ ಒಂದು ಕಡೆ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆದರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಹಾಗೆ ಆಗುತ್ತಿಲ್ಲ. ದಿವ್ಯಾ ಬಳಿ ಮಂಜು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಮಂಜುಗೆ ದಿವ್ಯಾ ಗುಡ್​ಬೈ​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿದೆ. ಎರಡೂ ತಂಡಗಳಿಗೆ ಟಾಸ್ಕ್​ ನೀಡಲಾಗುತ್ತಿದೆ. ಈ ಟಾಸ್ಕ್​ ವೇಳೆ ದಿವ್ಯಾ ಸುರೇಶ್​ ಕಾಲಿಗೆ ಗಾಯವಾಗಿದೆ. ಅಲ್ಲದೆ, ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ವೈದ್ಯರು ಬಂದು ಬ್ಯಾಂಡೇಜ್​ ಕೂಡ ಹಾಕಿದರು. ಇಷ್ಟಾದರೂ ಮಂಜು ಪಾವಗಡ ಎದ್ದೇಳಲಿಲ್ಲ. ಇದಕ್ಕೆ ಕಾರಣ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​.

ಹೌದು, ಬಿಗ್​ ಬಾಸ್​ ಮನೆಯಲ್ಲಿ 6 ಚೇರ್​ಗಳನ್ನು ಹಾಕಲಾಗಿದೆ. ಈ ಚೇರ್​ನಲ್ಲಿ ಎರಡು ತಂಡದ ತಲಾ ಮೂರು ಸದಸ್ಯರು ಕುಳಿತುಕೊಳ್ಳಬೇಕು. ಒಂದೊಮ್ಮೆ ಚೇರ್​​​ನಿಂದ ಎದ್ದರೆ ಔಟ್​. ಮಂಜು ಕೂಡ ಈ ಟಾಸ್ಕ್​ನಲ್ಲಿ ಕುಳಿತಿದ್ದಾರೆ. ಹೀಗಾಗಿ, ದಿವ್ಯಾಗೆ ಗಾಯವಾದಾಗಲೂ ಅವರು ಎದ್ದಿಲ್ಲ.

ಈ ವೇಳೆ ಅಳುತ್ತಲೇ ಮಂಜು ಬಳಿ ಬಂದರು ದಿವ್ಯಾ ಸುರೇಶ್​. ‘ಮಂಜು ಇಷ್ಟೇ ಅಲ್ವಾ? ಫ್ರೆಂಡ್​ಶಿಪ್​ ಬೆಲೆ ತೋರ್ಸಿದ್ಯಲ. ನಿಂಗೂ ನಿನ್ನ ಫ್ರೆಂಡ್​ಶಿಪ್​ಗೂ ಗುಡ್​ ಬೈ’ ಎಂದರು. ಇದನ್ನು ಮಂಜು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ನಗುತ್ತಲ್ಲೇ ಪರಿಸ್ಥಿತಿಯನ್ನು ನಿಭಾಯಿಸಿದರು.

‘ಬಹುಶಃ ಗಾಯ ಆದ ಕೂಡಲೇ ನಾನು ಕಾಲನ್ನು ಮುಟ್ಟಿದ್ದರೆ ನೋವು ಇಲ್ಲಿವರೆಗೆ ಮಾಯವಾಗುತ್ತಿತ್ತು’ ಎಂದು ಮಂಜು ಹೇಳಿದರು. ಆಗ ಸಿಟ್ಟಲ್ಲಿದ್ದ ದಿವ್ಯಾ, ‘ಸುಮ್ಮನಿರಪ್ಪಾ’ ಎಂದರು.

ಇದನ್ನೂ ಓದಿ: ‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ

Bigg Boss Kannada: ದಿವ್ಯಾ ಸುರೇಶ್​ ಜತೆ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ ಮಂಜು ಪಾವಗಡ

Follow Us
TV9 Web
TV9 Web

TV9 Kannada

Read More
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು