ರಾಜಮೌಳಿ ಸಹವಾಸ ಮಾಡಿದವರಿಗೆ ಸೋಲು ಖಚಿತ; ಟಾಲಿವುಡ್​ನಲ್ಲಿದೆ ದೊಡ್ಡ ಮೂಢನಂಬಿಕೆ

ಒಂದಲ್ಲ ಎರಡಲ್ಲ, ಅನೇಕ ಬಾರಿ ಈ ನಂಬಿಕೆ ನಿಜವಾಗಿದೆ. ಹಾಗಂತ ಒಂದು ಸಿನಿಮಾದ ಸೋಲನ್ನು ಸಂಬಂಧವೇ ಇಲ್ಲದ ರಾಜಮೌಳಿ ತಲೆಗೆ ಕಟ್ಟಿದರೆ ಅದಕ್ಕೆ ಮೂಢನಂಬಿಕೆ ಎನ್ನದೇ ಬೇರೆ ದಾರಿಯಿಲ್ಲ.

ರಾಜಮೌಳಿ ಸಹವಾಸ ಮಾಡಿದವರಿಗೆ ಸೋಲು ಖಚಿತ; ಟಾಲಿವುಡ್​ನಲ್ಲಿದೆ ದೊಡ್ಡ ಮೂಢನಂಬಿಕೆ
ರಾಜಮೌಳಿ ಸಹವಾಸ ಮಾಡಿದವರಿಗೆ ಸೋಲು ಖಚಿತ; ಟಾಲಿವುಡ್​ನಲ್ಲಿದೆ ದೊಡ್ಡ ಮೂಢನಂಬಿಕೆ
Follow us
TV9 Web
| Updated By: ಮದನ್​ ಕುಮಾರ್​

Updated on: Jul 09, 2021 | 11:40 AM

ನಿರ್ದೇಶಕ ರಾಜಮೌಳಿ ಅವರ ಹವಾ ಏನೆಂಬುದು ಎಲ್ಲರಿಗೂ ಗೊತ್ತು. ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಬಾಹುಬಲಿ’ ಮಾಡಿದ ಸಾಧನೆಯನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಹಾಗಾಗಿ ಅವರ ಜೊತೆ ಕೆಲಸ ಮಾಡಬೇಕು ಎಂದು ಅನೇಕ ಕಲಾವಿದರು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ. ಆದರೆ ರಾಜಮೌಳಿ ಜೊತೆ ಸಿನಿಮಾ ಮಾಡಿ ಒಮ್ಮೆ ಗೆಲ್ಲುವ ಸ್ಟಾರ್​ಗಳು, ಮುಂದಿನ ಸಿನಿಮಾದಲ್ಲಿ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಿದರೆ ಹೀನಾಯವಾಗಿ ಸೋಲುತ್ತಾರೆ ಎಂಬ ನಂಬಿಕೆ ಟಾಲಿವುಡ್​ನಲ್ಲಿದೆ. ಅದು ಪದೇಪದೇ ಸಾಬೀತಾಗಿದೆ ಕೂಡ.

2001ರಲ್ಲಿ ರಾಜಮೌಳಿ ನಿರ್ದೇಶಿಸಿದ ‘ಸ್ಟೂಡೆಂಟ್​ ನಂಬರ್​ 1’ ಚಿತ್ರಕ್ಕೆ ಜ್ಯೂ. ಎನ್​ಟಿಆರ್​ ಹೀರೋ ಆಗಿದ್ದರು. ಆ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​​ಗೆ ದೊಡ್ಡ ಗೆಲುವು ಸಿಕ್ಕಿತು. ಆದರೆ ನಂತರ ಅವರು ನಟಿಸಿದ ‘ಸುಬ್ಬ’ ಸಿನಿಮಾ ಫ್ಲಾಪ್​ ಆಯಿತು. ಬಳಿಕ ರಾಜಮೌಳಿ ಮತ್ತು ಜ್ಯೂ. ಎನ್​ಟಿಆರ್ ಜೊತೆಯಾಗಿ ‘ಸಿಂಹಾದ್ರಿ’ ಸಿನಿಮಾ ಮಾಡಿ ಯಶಸ್ಸು ಕಂಡರು. ಆ ಬಳಿಕ ಜ್ಯೂ. ಎನ್​ಟಿಆರ್ ನಟಿಸಿದ ‘ಆಂಧ್ರಾವಾಲ’ ಸೋತು ಸುಣ್ಣವಾಯಿತು.

ರಾಜಮೌಳಿ ಜೊತೆ ‘ಮಗಧೀರ’ ಚಿತ್ರ ಮಾಡಿ ಗೆದ್ದಿದ್ದ ರಾಮ್​ ಚರಣ್​ ಅವರು ನಂತರ ‘ಆರಂಜ್’​ ಸಿನಿಮಾದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದರು. ಪ್ರಭಾಸ್​ ವಿಚಾರದಲ್ಲೂ ಈ ನಂಬಿಕೆ ನಿಜವಾಗಿದೆ. ರಾಜಮೌಳಿ ನಿರ್ದೇಶಿಸಿದ ‘ಚತ್ರಪತಿ’ ಸಿನಿಮಾದಲ್ಲಿ ಪ್ರಭಾಸ್​ಗೆ ಗೆಲುವು ಸಿಕ್ಕಿತ್ತು. ನಂತರ ಮಾಡಿದ ‘ಪೌರ್ಣಮಿ’ ಚಿತ್ರದಲ್ಲಿ ಅವರು ಸೋಲು ಕಂಡರು. ‘ಬಾಹುಬಲಿ’ ಬಳಿಕ ಪ್ರಭಾಸ್​ ನಟಿಸಿದ ‘ಸಾಹೋ’ ಚಿತ್ರ ಫ್ಲಾಪ್ ಆಯಿತು.

ಈ ಇತಿಹಾಸ ಗಮನಿಸಿದ ಬಳಿಕ ರಾಮ್​ ಚರಣ್​ ಮತ್ತು ಜ್ಯೂ ಎನ್​ಟಿಆರ್​ ಫ್ಯಾನ್ಸ್​ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗ ರಾಜಮೌಳಿ ಜೊತೆ ಈ ಸ್ಟಾರ್​ ನಟರಿಬ್ಬರು ‘ಆರ್​ಆರ್​ಆರ್​’ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಖಂಡಿತವಾಗಿ ಗೆಲ್ಲಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಆ ಬಳಿಕ ರಾಮ್​ ಚರಣ್​ ನಟಿಸಲಿರುವ 15ನೇ ಸಿನಿಮಾ ಹಾಗೂ ಜ್ಯೂ. ಎನ್​ಟಿಆರ್​ ನಟಿಸಲಿರುವ 30ನೇ ಚಿತ್ರ ಫ್ಲಾಪ್​ ಆಗಲಿದೆ ಎಂಬ ಭಯ ಈಗಲೇ ಕಾಡಲು ಆರಂಭಿಸಿದೆ.

ಒಂದಲ್ಲ ಎರಡಲ್ಲ, ಅನೇಕ ಬಾರಿ ಈ ನಂಬಿಕೆ ನಿಜವಾಗಿದೆ. ಹಾಗಂತ ಒಂದು ಸಿನಿಮಾದ ಸೋಲನ್ನು ಸಂಬಂಧವೇ ಇಲ್ಲದ ರಾಜಮೌಳಿ ತಲೆಗೆ ಕಟ್ಟಿದರೆ ಅದಕ್ಕೆ ಮೂಢನಂಬಿಕೆ ಎನ್ನಲೇಬೇಕು.

ಇದನ್ನೂ ಓದಿ:

ರಾಜಮೌಳಿ ವಿರುದ್ಧ ಸಿಡಿದೆದ್ದ ಶ್ವಾನಪ್ರಿಯರು; ಅಸಲಿಗೆ ಇಲ್ಲಿ ತಪ್ಪು ಯಾರದ್ದು?

‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ