ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​; ಬೇಸರಗೊಂಡ ಫ್ಯಾನ್ಸ್​ ಹೇಳಿದ್ದೇನು?

35ರ ಪ್ರಾಯದ ನಟಿ ಶಿಖಾ ಸಿಂಗ್​ ಅವರು ಸದ್ಯ ನಟನೆಯಿಂದ ಸಣ್ಣ ಬ್ರೇಕ್​ ಪಡೆದುಕೊಂಡಿದ್ದಾರೆ. ಮಗುವಿನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​; ಬೇಸರಗೊಂಡ ಫ್ಯಾನ್ಸ್​ ಹೇಳಿದ್ದೇನು?
ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 09, 2021 | 9:33 AM

ತೆರೆ ಮೇಲೆ ಕಾಣಿಸುವ ಕೆಲವು ಪಾತ್ರಗಳನ್ನು ಅಭಿಮಾನಿಗಳು ತುಂಬ ಹಚ್ಚಿಕೊಳ್ಳುತ್ತಾರೆ. ತಮ್ಮ ನಿರೀಕ್ಷೆಯಂತೆಯೇ ಪಾತ್ರಧಾರಿಗಳು ಕೂಡ ಇರಬೇಕು ಎಂದು ವೀಕ್ಷಕರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಅವರ ನಿರೀಕ್ಷೆ ಹುಸಿಯಾಗಿಬಿಡುತ್ತದೆ. ಜನಪ್ರಿಯ ಕಿರುತೆರೆ ನಟಿ ಶಿಖಾ ಸಿಂಗ್​ ವಿಚಾರದಲ್ಲಿ ಇದೇ ರೀತಿ ಆಗಿದೆ. ಇತ್ತೀಚೆಗೆ ಅವರು ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ಅದನ್ನು ಕಂಡು ಫ್ಯಾನ್ಸ್​ಗೆ ತೀವ್ರ ಬೇಸರ ಆಗಿದೆ. ಕಮೆಂಟ್​ಗಳ ಮೂಲಕ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿ ಕಿರುತೆರೆ ಲೋಕದಲ್ಲಿ ನಟಿ ಶಿಖಾ ಸಿಂಗ್​ ಹೆಚ್ಚು ಫೇಮಸ್​. ‘ಕುಂಕುಮ್​ ಭಾಗ್ಯ’ ಸೀರಿಯಲ್​ನಲ್ಲಿ ಅವರು ಮಾಡಿದ ಆಲಿಯಾ ಎಂಬ ಪಾತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಶಿಖಾ ಸಿಂಗ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಟಾಪ್​ಲೆಸ್​ ಆಗಿ ಫೋಟೋಶೂಟ್​ ಮಾಡಿಸಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ.

ಹಾಸಿಗೆಯ ಮೇಲೆ ಮಲಗಿ, ಎದೆ ಭಾಗವನ್ನು ದಿಂಬಿನಿಂದ ಮುಚ್ಚಿಕೊಂಡಿರುವ ಅವರು ಟಾಪ್​ಲೆಸ್ ಆಗಿ ಪೋಸ್​ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು, ‘ನಿಮ್ಮಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಬೇರೆ ನಟಿಯರು ಬಗ್ಗೆ ನಮಗೆ ತಿಳಿದಿಲ್ಲ. ಆದರೆ ನೀವು ಹೀಗೆ ಮಾಡಿರುವುದು ಬೇಸರ ಮೂಡಿಸಿದೆ’ ಎಂದು ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಶಿಖಾ ಸಿಂಗ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ಮೂಡಿದೆ.

ಇನ್ನು, ಈ ಫೋಟೋ ನೋಡಿದ ಅವರ ಸ್ನೇಹಿತರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಗ್ಲಾಮರಸ್​ ಆಗಿ ಕಾಣಿಸಿಕೊಂಡಿರುವ ಅವರಿಗೆ ಕಿರುತೆರೆ ಸೆಲೆಬ್ರಿಟಿಗಳು ಪ್ರೋತ್ಸಾಹ ನೀಡಿದ್ದಾರೆ. ಇತ್ತೀಚೆಗೆ ಮಗುವಿಗೆ ತಾವು ಎದೆಹಾಲು ಕುಡಿಸುತ್ತಿರುವ ಫೋಟೋವನ್ನು ಶಿಖಾ ಸಿಂಗ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಕೂಡ ಸಖತ್ ವೈರಲ್​ ಆಗಿತ್ತು.

35ರ ಪ್ರಾಯದ ಶಿಖಾ ಸಿಂಗ್​ ಅವರು ಸದ್ಯ ನಟನೆಯಿಂದ ಸಣ್ಣ ಬ್ರೇಕ್​ ಪಡೆದುಕೊಂಡಿದ್ದಾರೆ. ಮಗುವಿನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. 2007ರಿಂದಲೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಅವರು ಹಲವು ಧಾರಾವಾಹಿ ಮತ್ತು ಗೇಮ್ ​ಶೋಗಳಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:

ಸ್ಕರ್ಟ್​ ಧರಿಸಿ ಯೋಗ ಮಾಡಿದ ಸ್ಟಾರ್​ ನಟನ ಪತ್ನಿ? ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Sameera Reddy: ಮುದ್ದಾದ ಮಗು ಜನಿಸಿದರೂ ಖುಷಿಪಡುವ ಬದಲು ಡಿಪ್ರೆಷನ್​ಗೆ ಹೋಗಿದ್ದ ವರದನಾಯಕ ನಟಿ ಸಮೀರಾ ರೆಡ್ಡಿ; ಕಾರಣ ಏನು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ