AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕರ್ಟ್​ ಧರಿಸಿ ಯೋಗ ಮಾಡಿದ ಸ್ಟಾರ್​ ನಟನ ಪತ್ನಿ? ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

ಮೀರಾ ರಜಪೂತ್​ ಅವರು ಯೋಗ ಮಾಡಲು ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋಗಳಿವು ಎಂದು ಹೇಳಲಾಗಿದೆ. ಅದಕ್ಕೆ ಬಂದಿರುವ ಕಮೆಂಟ್​ಗಳನ್ನು ನೋಡಿದರೆ, ನೆಟ್ಟಿಗರಿಗೆ ಮೀರಾ ಮೇಲೆ ಯಾಕಿಷ್ಟು ಕೋಪ ಎಂಬ ಪ್ರಶ್ನೆ ಮೂಡುತ್ತದೆ.

ಸ್ಕರ್ಟ್​ ಧರಿಸಿ ಯೋಗ ಮಾಡಿದ ಸ್ಟಾರ್​ ನಟನ ಪತ್ನಿ? ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​
ಸ್ಕರ್ಟ್​ ಧರಿಸಿ ಯೋಗ ಮಾಡಿದ ಸ್ಟಾರ್​ ನಟನ ಪತ್ನಿ
TV9 Web
| Edited By: |

Updated on: Jul 09, 2021 | 8:26 AM

Share

ಸೆಲೆಬ್ರಿಟಿ ಆಗಿರುವುದು ಅಷ್ಟು ಸುಲಭದ ಕೆಲಸ ಅಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಅವರನ್ನು ಜನರು ಆಗಾಗ ಟ್ರೋಲ್​ ಮಾಡುತ್ತಿರುತ್ತಾರೆ. ಸೆಲೆಬ್ರಿಟಿಗಳ ಕುಟುಂಬದ ಸದಸ್ಯರಿಗೂ ಈ ಕಾಟ ತಪ್ಪಿದ್ದಲ್ಲ. ಬಾಲಿವುಡ್​ನ ಸ್ಟಾರ್​ ನಟ ಶಾಹಿದ್​ ಕಪೂರ್​ ಅವರ ಪತ್ನಿ ಮೀರಾ ರಜಪೂತ್​ ಅವರು ಹಲವು ಬಾರಿ ಟ್ರೋಲ್​ಗೆ ಒಳಗಾದ ಉದಾಹರಣೆಗಳು ಇವೆ. ಈಗ ಅವರು ತಮ್ಮ ಬಟ್ಟೆಯ ಕಾರಣಕ್ಕಾಗಿ ಮತ್ತೆ ಟ್ರೋಲ್​ ಆಗುತ್ತಿದ್ದಾರೆ. ಯೋಗ ಮಾಡಲು ತೆರಳುವಾಗ ಅವರು ಸ್ಕರ್ಟ್​ ಧರಿಸಿದ್ದರು ಎಂಬುದನ್ನೇ ಗುರಿಯಾಗಿಸಿಕೊಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಇತ್ತೀಚೆಗೆ ಮೀರಾ ರಜಪೂತ್​ ಅವರು ಮುಂಬೈನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಅವರ ಫೋಟೋಗಳು ಇಂಟರ್​ನೆಟ್​ನಲ್ಲಿ ಹರಿದಾಡುತ್ತಿವೆ. ಮೀರಾ ಯೋಗ ಮಾಡಲು ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋಗಳಿವು ಎಂದು ಹೇಳಲಾಗಿದೆ. ಅದಕ್ಕೆ ಬಂದಿರುವ ಕಮೆಂಟ್​ಗಳನ್ನು ನೋಡಿದರೆ, ನೆಟ್ಟಿಗರಿಗೆ ಮೀರಾ ಮೇಲೆ ಯಾಕಿಷ್ಟು ಕೋಪ ಎಂಬ ಪ್ರಶ್ನೆ ಮೂಡುವುದು ಸಹಜ.

‘ಇಂಥ ಸ್ಕರ್ಟ್​ ಧರಿಸಿ ಯಾರಾದರೂ ಯೋಗ ಮಾಡುತ್ತಾರಾ? ಯಾರು ಈಕೆ? ನಟಿ ಅಲ್ಲ, ಗಾಯಕಿಯೂ ಅಲ್ಲ. ಒಬ್ಬ ನಟನನ್ನು ಮದುವೆ ಆಗಿದ್ದಾಳೆ ಎಂಬುದಷ್ಟೇ ನಮಗೆ ಗೊತ್ತು. ಇಂಥವರನ್ನೆಲ್ಲ ಯಾಕೆ ಸುಮ್ಮನೆ ಫೇಮಸ್​ ಮಾಡುತ್ತೀರಿ?’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ‘ಪಾಪ ಅವರು ತುಂಬ ಉದ್ದನೆಯ ಸ್ಕರ್ಟ್​ ಧರಿಸಿದ್ದಾರೆ’ ಎಂದು ವ್ಯಂಗ್ಯವಾಗಿಯೂ ಕಮೆಂಟ್​ ಮಾಡಲಾಗಿದೆ.

ಅಂದಹಾಗೆ, ಮೀರಾ ರಜಪೂತ್​ ಟ್ರೋಲ್​ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ತಮ್ಮ ಫೋಟೋವೊಂದಕ್ಕೆ split personality ಎಂದು ಕ್ಯಾಪ್ಷನ್​ ನೀಡಿದ್ದರು. ಆಗಲೂ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಈ ರೀತಿ ಕ್ಯಾಪ್ಷನ್​ಗಳನ್ನು ಬಳಸುವುದು ಮಾನಸಿಕ ರೋಗಿಗಳಿಗೆ ಅವಮಾನ ಮಾಡಿದಂತೆ ಎಂದು ಒಂದಷ್ಟು ಮಂದಿ ವಾದ ಮಾಡಿದ್ದರು. ಟ್ರೋಲ್ ಕಾಟ ಏನೇ ಇರಲಿ, ಮೀರಾ ರಜಪೂತ್​ ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್​ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 27 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

ಬಾಲಿವುಡ್​ನ ಸ್ಟಾರ್​ ನಟ ಶಾಹಿದ್​ ಕಪೂರ್​ ಜೊತೆ 2015ರಲ್ಲಿ ಮೀರಾ ರಜಪೂತ್​ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುವ ಮೀರಾ ಫಿಟ್ನೆಸ್​, ಸೌಂದರ್ಯಾ, ಮಕ್ಕಳ ಪಾಲನೆ ಮುಂತಾದ ವಿಚಾರಗಳ ಬಗ್ಗೆ ಆಗಾಗ ಟಿಪ್ಸ್​ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ:

ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ

ರಿಯಾಲಿಟಿ ಶೋ ಸುಳ್ಳು ಅನ್ನೋದಕ್ಕೆ ಮತ್ತೊಂದು ಸಾಕ್ಷಿ? ಹಿಗ್ಗಾಮುಗ್ಗ ಟ್ರೋಲ್​ ಮಾಡಿದ ನೆಟ್ಟಿಗರು

Follow Us
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ