AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಾಲಿಟಿ ಶೋ ಸುಳ್ಳು ಅನ್ನೋದಕ್ಕೆ ಮತ್ತೊಂದು ಸಾಕ್ಷಿ? ಹಿಗ್ಗಾಮುಗ್ಗ ಟ್ರೋಲ್​ ಮಾಡಿದ ನೆಟ್ಟಿಗರು

Neha Kakkar | Himesh Reshammiya: ಈ ಹಿಂದೆ ಕೂಡ ಇಂಡಿಯನ್​ ಐಡಲ್​ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಬರುಬರುತ್ತ ಇದು ದೈನಂದಿನ ಧಾರಾವಾಹಿ ಥರ ಆಗುತ್ತಿದೆ. ಬರೀ ಡ್ರಾಮಾ ಹೆಚ್ಚಾಗುತ್ತಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ರಿಯಾಲಿಟಿ ಶೋ ಸುಳ್ಳು ಅನ್ನೋದಕ್ಕೆ ಮತ್ತೊಂದು ಸಾಕ್ಷಿ? ಹಿಗ್ಗಾಮುಗ್ಗ ಟ್ರೋಲ್​ ಮಾಡಿದ ನೆಟ್ಟಿಗರು
ಟ್ರೋಲ್​ಗೆ ಒಳಗಾದ ಇಂಡಿಯನ್​ ಐಡಲ್​ ಶೋ ನಿರ್ಣಾಯಕರು
ಮದನ್​ ಕುಮಾರ್​
|

Updated on: Jun 21, 2021 | 1:46 PM

Share

ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್​ ಐಡಲ್​’ ಸಿಂಗಿಂಗ್​ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್​ ಮಾಡಲಾಗುತ್ತಿದೆ. ಈಗ ‘ಇಂಡಿಯನ್​ ಐಡಲ್​’ ಜಡ್ಜ್​ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ.

ಇತ್ತೀಚೆಗೆ ಫಾದರ್ಸ್​ ಡೇ ಪ್ರಯುಕ್ತ ‘ಇಂಡಿಯನ್​ ಐಡಲ್​’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ ತಂದೆ ಬಗೆಗಿನ ಕಥೆಗಳನ್ನೂ ವೇದಿಕೆ ಮೇಲೆ ಶೇರ್​ ಮಾಡಿಕೊಂಡರು. ಅದನ್ನು ಕೇಳಿದ ನಿರ್ಣಾಯಕರಾದ ಹಿಮೇಶ್​ ರೇಷಮಿಯಾ ಮತ್ತು ನೇಹಾ ಕಕ್ಕರ್​ ಅವರು ಕಣ್ಣೀರು ಹಾಕಿದರು. ಆದರೆ ಅವರು ನಿಜವಾಗಿಯೂ ಅತ್ತಿಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಇದು ಹುಸಿ ಕಣ್ಣೀರು ಎಂದು ಟ್ರೋಲ್​ ಮಾಡಲಾಗುತ್ತಿದೆ.

ಬರುಬರುತ್ತ ಇದು ದೈನಂದಿನ ಧಾರಾವಾಹಿ ಥರ ಆಗುತ್ತಿದೆ. ಬರೀ ಡ್ರಾಮಾ ಹೆಚ್ಚಾಗುತ್ತಿದೆ. ಜಡ್ಜ್​ಗಳು ಓವರ್​ ಆ್ಯಕ್ಟಿಂಗ್​ ಮಾಡುವುದನ್ನು ನಿಲ್ಲಿಸಬೇಕು ಎಂದು ಜನರು ಟ್ರೋಲ್​ ಮಾಡಿದ್ದಾರೆ. ಕೆಲವರು ಈ ಶೋನಿಂದ ನಿರಾಶೆಗೊಂಡಿರುವುದು ಮಾತ್ರವಲ್ಲದೆ ವಿಪರೀತ ಕೋಪವನ್ನೂ ವ್ಯಕ್ತಪಡಿಸಿಕದ್ದಾರೆ. ಒಟ್ಟಾರೆ ಈ ಪ್ರಸಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಹಲವು ಬಗೆಯ ಮೀಮ್​ಗಳು ಹರಿದಾಡುತ್ತಿವೆ.

ಈ ಹಿಂದೆ ಕೂಡ ಇಂಡಿಯನ್​​ ಐಡಲ್​ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಸ್ಪರ್ಧಿಗಳನ್ನು ಹೊಗಳುವಂತೆ ಆಯೋಜಕರು ಒತ್ತಾಯ ಹೇರುತ್ತಾರೆ. ಸ್ಪರ್ಧಿಗಳ ನಡುವೆ ಸುಳ್ಳು ಪ್ರೇಮಕಥೆಯನ್ನು ಸೃಷ್ಟಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗಿತ್ತು. ಈ ಶೋಗೆ ಅತಿಥಿಯಾಗಿ ಹೋಗಿದ್ದ ಕಿಶೋರ್​ ಕುಮಾರ್​ ಪುತ್ರ ಅಮಿತ್​ ಕುಮಾರ್​ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್​ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್​ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್​ ಆಗಿ ಹೋಗುತ್ತಿಲ್ಲ’ ಎಂದು ಇಂಡಿಯನ್​ ಐಡಲ್​ ಐದು ಹಾಗೂ ಆರನೇ ಸೀಸನ್​ ಜಡ್ಜ್​ ಆಗಿದ್ದ ಸುನಿಧಿ ಚೌಹಾಣ್​ ಹೇಳಿದ್ದರು.

ಇದನ್ನೂ ಓದಿ:

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!