AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

ಪವನ್​ ಅವರ ಹಾಡನ್ನು ಕೇಳಿ ನೇಹಾ ಕೂಡ ನಕ್ಕಿದ್ದರು. ಪವನ್​ ಕೈನಲ್ಲಿ ಹಿಡಿದು ತಂದಿದ್ದ ನೀರನ್ನು ಕುಡಿಯುವಂತೆ ನೇಹಾ ಮನವಿ ಮಾಡಿಕೊಂಡಿದ್ದರು.

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​
ಅನು ಮಲಿಕ್
ರಾಜೇಶ್ ದುಗ್ಗುಮನೆ
|

Updated on: Jun 14, 2021 | 7:26 PM

Share

ಇಂಡಿಯನ್​ ಐಡಲ್​ ಶೋ ಬಗ್ಗೆ ಸಾಕಷ್ಟು ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಟಿಆರ್​ಪಿಗೋಸ್ಕರ ಇಲ್ಲ-ಸಲ್ಲದ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಜಡ್ಜ್​ ಹಾಗೂ ಸ್ಪರ್ಧಿಗಳು ಕಿಡಿಕಾರಿದ್ದರು. ಈಗ ಇಂಡಿಯನ್​ ಐಡಲ್​ನ ಮತ್ತೊಂದು ಹಳೆಯ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಜಡ್ಜ್​ ಅನು ಮಲಿಕ್​ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡಿದ್ದಾರೆ.

ಹೌದು, ಈ ಘಟನೆ ನಡೆದಿದ್ದು ಇಂಡಿಯನ್​ ಐಡಲ್ ಸೀಸನ್ 11ರಲ್ಲಿ. ಅನು ಮಲಿಕ್​, ನೇಹಾ ಕಕ್ಕರ್ ಮತ್ತು ವಿಶಾಲ್ ದಡ್ಲಾನಿ​ ಜಡ್ಜ್​ ಆಗಿದ್ದರು. ಪವನ್​ ಹೆಸರಿನ ವ್ಯಕ್ತಿ ಆಡಿಷನ್​ಗೆ ಆಗಮಿಸಿದ್ದರು. ‘ಯೇ ದಿಲ್​ ಹೈ ಮುಷ್ಕಿಲ್’​ ಚಿತ್ರದ ‘ಬುಲ್ಲೆಯಾ’ ಹಾಡನ್ನು ಕೀರಲು ಧ್ವನಿಯಲ್ಲಿ ಹಾಡಿದ್ದರು. ಇದನ್ನು ಕೇಳುತ್ತಿದ್ದಂತೆಯೇ ಅನು ಮಲಿಕ್ ತಮ್ಮ ಕೆನ್ನೆಗೆ ತಾವು ಜೋರಾಗಿ ಹೊಡೆದುಕೊಳ್ಳಲು ಆರಂಭಿಸಿದ್ದರು. ಇದಕ್ಕೆ ವಾಹಿನಿಯವರು ಸ್ಪೆಷಲ್​ ಏಫೆಕ್ಟ್​ ಕೂಡ ನೀಡಿದ್ದರು.

ಪವನ್​ ಅವರ ಹಾಡನ್ನು ಕೇಳಿ ನೇಹಾ ಕೂಡ ನಕ್ಕಿದ್ದರು. ಪವನ್​ ಕೈನಲ್ಲಿ ಹಿಡಿದು ತಂದಿದ್ದ ನೀರನ್ನು ಕುಡಿಯುವಂತೆ ನೇಹಾ ಮನವಿ ಮಾಡಿಕೊಂಡಿದ್ದರು. ಇದರಿಂದ ಪವನ್ ತೀವ್ರ ಮುಜುಗರಕ್ಕೆ ಒಳಗಾಗಿದ್ದರು.

ಇಂಡಿಯನ್​ ಐಡಲ್ ಬಗ್ಗೆ ಸಾಕಷ್ಟು ಜನರು ಅಸಮಾಧಾನ ಹೊರಹಾಕಿದ್ದಾರೆ. ಇಂಡಿಯನ್​ ಐಡಲ್​ ಐದು ಹಾಗೂ ಆರನೇ ಸೀಸನ್​ ಜಡ್ಜ್​ ಆಗಿದ್ದ ಸುನಿಧಿ ಚೌಹಾಣ್​ ಈ ಶೋನಿಂದ ಹೊರ ಬಂದಿದ್ದರು. ಅಲ್ಲದೆ, ಈ ಶೋ ಸ್ಕ್ರಿಪ್ಟೆಡ್​ ರೂಪದಲ್ಲಿ ನಡೆಯುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್​ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್​ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್​ ಆಗಿ ಹೋಗುತ್ತಿಲ್ಲ ಎಂದು ಸುನಿಧಿ ಹೇಳಿದ್ದರು.

ಇದನ್ನೂ ಓದಿ: ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

ಇಂಡಿಯನ್ ಐಡಲ್​ ಫೇಕ್​ ಎಂದು ಹೊರ ಬಂದ ಜಡ್ಜ್​ ಬಿಚ್ಚಿಟ್ರು ಅಸಲಿ ವಿಚಾರ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More