ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ

ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ
ರಣವೀರ್​ ಸಿಂಗ್​

ಉದ್ದನೆಯ ಕೂದಲು. ವಿಚಿತ್ರ ಬಟ್ಟೆ, ಅದಕ್ಕೂ ವಿಚಿತ್ರವಾದ ಕನ್ನಡಕ,​ ಬ್ಯಾಗ್​. ಕತ್ತಿಗೆ ಒಂದಷ್ಟು ಚಿನ್ನ. ಒಮ್ಮೆ ನೋಡಿದವರಿಗೆ ಇದು ರಣವೀರ್​ ಸಿಂಗ್​ ಅವರೇನಾ ಎಂದು ಅನುಮಾನ ಮೂಡುವಷ್ಟು ವಿಚಿತ್ರವಾಗಿ ಉಡುಗೆ ತೊಟ್ಟು ​ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Jun 30, 2021 | 8:14 PM

ನಟ ರಣವೀರ್​ ಸಿಂಗ್​ ಆಗಾಗ ವಿಚಿತ್ರ ಉಡುಗೆ ತೊಟ್ಟು ಸುದ್ದಿಯಾಗುತ್ತಾರೆ. ಈ ಮೊದಲು ಅನೇಕ ಬಾರಿ ಚಿತ್ರವಿಚಿತ್ರ ಬಟ್ಟೆಗಳನ್ನು ತೊಟ್ಟು ಚರ್ಚೆಯಾಗಿದ್ದರು. ಈಗ ಅವರು ಮತ್ತೆ ಅಂತಹುದೇ ವಿಚಾರಕ್ಕೆ ಚರ್ಚೆಗೆ ಒಳಗಾಗಿದ್ದಾರೆ. ಅವರು ಭಿನ್ನ ರೀತಿಯ ಬಟ್ಟೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದ ಅನೇಕರು ನಕ್ಕಿದ್ದಾರೆ. ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉದ್ದನೆಯ ಕೂದಲು. ವಿಚಿತ್ರ ಬಟ್ಟೆ, ಅದಕ್ಕೂ ವಿಚಿತ್ರವಾದ ಕನ್ನಡಕ,​ ಬ್ಯಾಗ್​. ಕತ್ತಿಗೆ ಒಂದಷ್ಟು ಚಿನ್ನ. ಒಮ್ಮೆ ನೋಡಿದವರಿಗೆ ಇದು ರಣವೀರ್​ ಸಿಂಗ್​ ಅವರೇನಾ ಎಂದು ಅನುಮಾನ ಮೂಡುವಷ್ಟು ವಿಚಿತ್ರವಾಗಿ ಉಡುಗೆ ತೊಟ್ಟು ​ಕಾಣಿಸಿಕೊಂಡಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

ಬ್ರ್ಯಾಂಡ್ ಒಂದರ ಪ್ರಮೋಷನ್​ಗೆ ರಣವೀರ್​ ಸಿಂಗ್​ ಈ ಅವತಾರ ತಾಳಿದ್ದಾರೆ. ಈ ಫೋಟೋ ನೋಡಿದ ನಟಿ ಆಲಿಯಾ ಭಟ್​, ಗಾಯಕ ಹಿಮೇಶ್​ ರೇಷಮಿಯಾ, ಜೋಯಾ ಅಖ್ತರ್​ ಸೇರಿ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ರಣವೀರ್​ ತಲೆಯ ಮೇಲಿರುವ ಕೂದಲು ಹಾಗೂ ಕತ್ತಿನ ಮೇಲಿರುವ ಚಿನ್ನ ಅಸಲಿಯೋ ಅಥವಾ ನಕಲಿಯೋ ಎಂದು ಪ್ರಶ್ನೆ ಮಾಡಿದ್ದಾರೆ. ರಣವೀರ್​ ಸಿಂಗ್​ ಈ ಫೋಟೋ ಸಾಕಷ್ಟು ಟ್ರೋಲ್​ ಆಗುತ್ತಿದೆ.

ಇನ್ನು, ಅಡ್ವೆಂಚರ್​​ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಬೇರ್​ ಗ್ರಿಲ್ಸ್​ ಜತೆ ರಣವೀರ್​ ಸಿಂಗ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬೇರ್​ ಗ್ರಿಲ್ಸ್​ ನಡೆಸುವ ಸಾಹಸ ಶೋಗಳಲ್ಲಿ ಈ ಮೊದಲು ನಟ ಅಕ್ಷಯ್​ ಕುಮಾರ್​, ರಜನಿಕಾಂತ್​ ಮತ್ತು ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು. ಈ ಬಾರಿ ರಣವೀರ್​ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಅಂದುಕೊಳ್ಳೋದು ಒಂದು, ಆಗೋದೇ ಇನ್ನೊಂದು’; ದೀಪಿಕಾ ಪಡುಕೋಣೆ ಹೊಸ ಪೋಸ್ಟ್​ ನೋಡಿ

ನಟ ರಣವೀರ್ ಸಿಂಗ್​ಗೆ​ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!

Follow us on

Related Stories

Most Read Stories

Click on your DTH Provider to Add TV9 Kannada