AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು’; ವಿಶೇಷ ಘೋಷಣೆಗೆ ರೆಡಿ ಆದ ಹೊಂಬಾಳೆ ಫಿಲ್ಮ್ಸ್​

ಪುನೀತ್​ ರಾಜ್​ಕುಮಾರ್​ ನಟನೆಯ ಮುಂದಿನ ಚಿತ್ರಕ್ಕೆ ‘ಲೂಸಿಯಾ’ ಪವನ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಪವನ್​ ಇತ್ತೀಚೆಗೆ ಘೋಷಣೆ ಮಾಡಿದ್ದರು.

‘ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು’; ವಿಶೇಷ ಘೋಷಣೆಗೆ ರೆಡಿ ಆದ ಹೊಂಬಾಳೆ ಫಿಲ್ಮ್ಸ್​
ವಿಜಯ್ ಕಿರಗಂದೂರು
ರಾಜೇಶ್ ದುಗ್ಗುಮನೆ
|

Updated on:Jun 30, 2021 | 6:42 PM

Share

‘ಕೆಜಿಎಫ್’​ ಸಿನಿಮಾ ನಿರ್ಮಾಣ ಮಾಡಿದ ನಂತರದಲ್ಲಿ ಹೊಂಬಾಳೆ ಫಿಲ್ಮ್ಸ್​ ಖ್ಯಾತಿ ದೇಶದಾದ್ಯಂತ ಹಬ್ಬಿದೆ. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರರಂಗಕ್ಕೂ ಹೊಂಬಾಳೆ ಫಿಲ್ಮ್ಸ್ ಕಾಲಿಟ್ಟಿದೆ. ಈಗ ಈ ನಿರ್ಮಾಣ ಸಂಸ್ಥೆ ಹೊಸ ಆರಂಭಕ್ಕೆ ನಾಂದಿ ಹಾಡೋಕೆ ರೆಡಿ ಆಗಿದೆ. ಪುನೀತ್​ ರಾಜ್​ಕುಮಾರ್​ ನಟನೆಯ ಮುಂದಿನ ಚಿತ್ರಕ್ಕೆ ‘ಲೂಸಿಯಾ’ ಪವನ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಪವನ್​ ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ಚಿತ್ರದ ​ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ. ಈ ಚಿತ್ರದ ಟೈಟಲ್​ ನಾಳೆ (ಜುಲೈ 1) ಲಾಂಚ್​ ಆಗಲಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಹೊಂಬಾಳೆ ಫಿಲ್ಮ್ಸ್​, ‘ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು. ನಾಳೆ ಬೆಳಿಗ್ಗೆ 11:46ಕ್ಕೆ #HombaleFilms9 ಟೈಟಲ್ ಅನಾವರಣ’ ಎಂದಿದೆ.

ಪವನ್​ ಕುಮಾರ್​ ಈಗಾಗಲೇ ‘ಲೂಸಿಯಾ’, ‘ಯು-ಟರ್ನ್​’ನಂಥ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ಚಿತ್ರಗಳು ತುಂಬಾನೇ ಭಿನ್ನ ಕಥೆ ಹೊಂದಿರುತ್ತವೆ ಅನ್ನೋದು ವಿಶೇಷ. ಈಗ ಪುನೀತ್​ ಚಿತ್ರಕ್ಕೆ ಪವನ್​ ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಸಹಜವಾಗಿಯೇ ಹೆಚ್ಚಿದೆ.

ಸದ್ಯ ಹೊಂಬಾಳೆ ಸಿನಿಮಾ ಮೂರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ‘ಕೆಜಿಎಫ್​ 2’ ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಪ್ರಭಾಸ್​ ನಟಿಸುತ್ತಿರುವ ‘ಸಲಾರ್’ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್​ ಹೊತ್ತುಕೊಂಡಿದೆ. ಶ್ರೀಮುರಳಿ ನಟನೆಯ ‘ಭಗೀರ’ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಈಗ ಈ ಸಾಲಿಗೆ ಪುನೀತ್​ ಸಿನಿಮಾ ಕೂಡ ಸೇರಿಕೊಂಡಿದೆ.

ಇದನ್ನೂ ಓದಿ: ಸಿನಿಮಾದಲ್ಲಿ ಮಾಡಿದ ಕೆಲಸವನ್ನು ನಿಜ ಜೀವನದಲ್ಲಿಯೂ ಮಾಡಿ ತೋರಿಸಿದ ಪುನೀತ್ ರಾಜ್​ಕುಮಾರ್

‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​

Published On - 6:11 pm, Wed, 30 June 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?