‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಅವರು ಶಮಂತ್​ ಬ್ರೋ ಗೌಡಗೆ ಸಪೋರ್ಟ್​ ಮಾಡಿದ್ದರು. ಇದು ಮಂಜು ಗಮನಕ್ಕೆ ಬಂದಿದೆ.

‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ
ದಿವ್ಯಾ ಸುರೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 30, 2021 | 10:40 PM

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್​ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ಈ ವಾರ ದಿವ್ಯಾ ಸುರೇಶ್​ ಅವರು ಮನೆಯಿಂದ ಹೊರ ಹೋಗುತ್ತಾರಂತೆ. ಇದಕ್ಕೆ ಮಂಜು ಬೆಂಬಲಿಗರು ವೋಟ್​ ಮಾಡದೇ ಇರೋದೆ ಕಾರಣ. 

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಅವರು ಶಮಂತ್​ ಬ್ರೋ ಗೌಡಗೆ ಸಪೋರ್ಟ್​ ಮಾಡಿದ್ದರು. ಇದು ಮಂಜು ಗಮನಕ್ಕೆ ಬಂದಿದೆ. ನಾಲ್ಕು ದಿನ ಇದನ್ನು ಮಂಜು ಸಹಿಸಿಕೊಂಡಿದ್ದರು. ಆದರೆ, ಹೆಚ್ಚು ದಿನ ಇದನ್ನು ತಡೆದಿಟ್ಟುಕೊಳ್ಳೋಕೆ ಅವರಿಂದ ಆಗಿಲ್ಲ. ಹೀಗಾಗಿ, ದಿವ್ಯಾ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ.

ಮಂಜು ಈ ವಿಚಾರವನ್ನು ಪ್ರಸ್ತಾಪ ಮಾಡಿದ ನಂತರ ದಿವ್ಯಾ ಇದನ್ನು ಒಪ್ಪಿಕೊಂಡಿಲ್ಲ. ಶಮಂತ್​ ಜಾಗದಲ್ಲಿ ಯಾರೇ ಇದ್ದರೂ ಇದೇ ರೀತಿ ಮಾಡುತ್ತಿದ್ದೆ ಎಂದು ಹೇಳಿಕೊಂಡರು. ಕೊನೆಗೆ ‘ಮಂಜು ನಾನು ನಿನ್ನ ಬಳಿ ಕ್ಷಮೆ ಕೇಳುತ್ತಿದ್ದೇನೆ. ಸಾರಿ’ ಎಂದರು ದಿವ್ಯಾ. ಆದರೆ, ಮಂಜು ಕ್ಷಮೆ ಬೇಡ ಎಂದು ನೇರವಾಗಿಯೇ ಹೇಳಿದರು.

‘ನಂಗೆ ಈ ಮನೆ ಸಾಕಾಗಿದೆ. ತುಂಬಾನೇ ಹಿಂಸೆ ಆಗುತ್ತಿದೆ. ನಾಳೆಯಿಂದ ನನ್ನ ಜತೆ ಮಾತನಾಡಬೇಡ. ದಯವಿಟ್ಟು ನನ್ನ ಜತೆಗಿನ ಮಾತು ನಿಲ್ಲಿಸು. ಈ ವಾರ ನಾನೇ ಮನೆಯಿಂದ ಹೊರ ಹೋಗುತ್ತೇನೆ. ನೀನು ಮಾತನಾಡೋದನ್ನು ನಿಲ್ಲಿಸಿದರೆ ನಿನ್ನ ಅಭಿಮಾನಿಗಳು ನನಗೆ ವೋಟ್​ ಮಾಡೋದು ನಿಲ್ಲಿಸುತ್ತಾರೆ’ ಎಂದರು ದಿವ್ಯಾ.

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಬಗ್ಗೆ ದಿವ್ಯಾ ಮಾತನಾಡಿದ್ದರು. ಅವರಿಬ್ಬರು ಸೆಕ್ಯುರಿಟಿ ಗಾರ್ಡ್​ಗಳಂತೆ ನನ್ನ ಹಿಂದೆಯೇ ಇರುತ್ತಿದ್ದರು ಎಂದು ನನ್ನ ಮನೆಯಲ್ಲಿ ಹೇಳಿದ್ದಾರೆ ಎಂಬುದಾಗಿ ದಿವ್ಯಾ ಸುದೀಪ್​ ಎದುರು ಹೇಳಿದ್ದರು. ಇದಾದ ನಂತರದಲ್ಲಿ ಪ್ರಶಾಂತ್​ ಹಾಗೂ ಚಕ್ರವರ್ತಿ ಮಾತಿನ ಮೂಲಕವೇ ದಿವ್ಯಾಗೆ ಚುಚ್ಚಿ ಮಾತನಾಡುತ್ತಿದ್ದಾರೆ. ಹೀಗಾಗಿ, ಮನೆಯಿಂದ ಹೊರ ಹೋಗಬೇಕು ಎಂದು ದಿವ್ಯಾ ಹೇಳೋಕೆ ಇದು ಕೂಡ ಒಂದು ಕಾರಣ.

ಇದನ್ನೂ ಓದಿ: ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು

Published On - 10:34 pm, Wed, 30 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ