‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು

ಇತ್ತೀಚೆಗೆ ಬಿಗ್​ ಬಾಸ್​ ಮನೆ ರಣರಂಗವಾಗಿತ್ತು. ಚಕ್ರವರ್ತಿ ಚಂದ್ರಚೂಡ್​ ಅವರು ತಮ್ಮ ಮಾತಿನ ಮೂಲಕ ಮಂಜು ಹಾಗೂ ದಿವ್ಯಾರನ್ನು ತಿವಿದಿದ್ದರು. ಇದರಿಂದ ಇಬ್ಬರೂ ಮಂಕಾಗಿದ್ದಾರೆ.

‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು
ಮಂಜು ಪಾವಗಡ - ದಿವ್ಯಾ ಸುರೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 30, 2021 | 2:54 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಮೊದಲ ಇನ್ನಿಂಗ್ಸ್​ನಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಪ್ರೀತಿಯ ನಾಟಕವಾಡಿದ್ದರು. ಇದರಿಂದ ಮಂಜು ವೈಯಕ್ತಿಕವಾಗಿ ಡಲ್​ ಆದಂತೆ ಕಂಡುಬಂತು. ಈ ಕಾರಣಕ್ಕೆ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅವರು ಬದಲಾಗಿದ್ದು, ಮೊದಲಾದ ತಪ್ಪನ್ನು ತಿದ್ದುಕೊಂಡಿದ್ದಾರೆ. ಇದು ದಿವ್ಯಾ ಸುರೇಶ್​ಗೆ ಆಘಾತ ನೀಡಿದೆ.

ಇತ್ತೀಚೆಗೆ ಬಿಗ್​ ಬಾಸ್​ ಮನೆ ರಣರಂಗವಾಗಿತ್ತು. ಚಕ್ರವರ್ತಿ ಚಂದ್ರಚೂಡ್​ ಅವರು ತಮ್ಮ ಮಾತಿನ ಮೂಲಕ ಮಂಜು ಹಾಗೂ ದಿವ್ಯಾರನ್ನು ತಿವಿದಿದ್ದರು. ಇದರಿಂದ ಇಬ್ಬರೂ ಮಂಕಾಗಿದ್ದಾರೆ. ಇನ್ನು, ಪ್ರಶಾಂತ್​ ಸಂಬರಗಿ ಮಾತಿನ ಮೂಲಕ ಪದೇಪದೇ ದಿವ್ಯಾ ಅವರನ್ನು ಚುಚ್ಚುತ್ತಿದ್ದಾರೆ. ಹೀಗಾಗಿ, ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾಗೆ ಗೆಳೆಯರ ಸಂಖ್ಯೆ ಕಡಿಮೆ ಆಗುತ್ತಿದೆ. ಈಗ ಮಂಜು ಕೂಡ ದಿವ್ಯಾ ಜತೆ ಮಾತನಾಡದಿರಲು ನಿರ್ಧರಿಸಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಮಂಜು ಹಾಗೂ ದಿವ್ಯಾ ಮಧ್ಯೆ ಶಮಂತ್​ ವಿಚಾರ ಚರ್ಚೆ ಆಗಿದೆ. ‘ನೀನು ಅವನಿಗೆ ಆ ರೀತಿ ಮಾಡಿದಾಗ ನನಗೆ ಹೇಗಾಗಬೇಡ’ ಎಂದು ಮಂಜು ಪ್ರಶ್ನೆ ಮಾಡಿದ್ದಾರೆ. ‘ಶಮಂತ್​ ಬದಲು ಪ್ರಿಯಾಂಕಾ ಇಂದ ಶುರುವಾದರೂ ನಾನು ಅದೇ ರೀತಿ ಮಾಡುತ್ತಿದ್ದೆ’ ಎಂದು ದಿವ್ಯಾ ಸಮಜಾಯಿಶಿ ನೀಡಿದ್ದಾರೆ.

ಈ ವಿಚಾರಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ಕೊನೆಯಲ್ಲಿ ದಿವ್ಯಾ, ‘ನೀನು ಮೊದಲಿನಂತೆ ಇಲ್ಲ ಎಂದು ಮಂಜುಗೆ ನೇರವಾಗಿ’ ಹೇಳಿದ್ದಾರೆ. ‘ನಾನು ಮೊದಲಿನಂತೆ ಇರೋಕೆ ಸಾಧ್ಯವೇ ಇಲ್ಲ. ನನ್ನ ಜತೆ ಮಾತನಾಡುವುದೇ ಬೇಡ’ ಎಂದು ಕಠೋರವಾಗಿಯೇ ಮಂಜು ಹೇಳಿದ್ದಾರೆ. ಇದು ದಿವ್ಯಾಗೆ ಮತ್ತಷ್ಟು ನೋವು ತರಿಸಿದೆ. ಅಷ್ಟಕ್ಕೂ ಇಬ್ಬರ ಮಧ್ಯೆ ಈ ಜಗಳ ಏರ್ಪಡೋಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಇಂದಿನ (ಜೂನ್​ 30) ಎಪಿಸೋಡ್​ ನೋಡಬೇಕು.

ಬಿಗ್​ ಬಾಸ್​ ಮನೆ ಒಳ ಸೇರುವಾಗಲೇ ಮಂಜು ಪಾವಗಡ ಒಂದು ಕಠಿಣ ನಿರ್ಧಾರ ಮಾಡಿದ್ದರು. ತಾವು ಬಿಗ್​ ಬಾಸ್​ ಮನೆಗೆ ಬಂದಿರೋದು ಎಂಟರ್​ಟೇನ್​ ಮಾಡೋಕೆ. ಹೀಗಾಗಿ, ಅದನ್ನು ಮಾಡಿಯೇ ಮಾಡುತ್ತೇನೆ. ಈ ಮನೆಯಲ್ಲಿ ನನ್ನದು ಸಿಂಗಲ್​ ರೈಡಿಂಗ್​ ಎಂದಿದ್ದರು. ಈಗ ಅವರು ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಹಿರಿಯ ನಟ ಅವಿನಾಶ್​? ಈಡೇರುತ್ತಾ ಸ್ಪರ್ಧಿಗಳ ಬೇಡಿಕೆ?

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ