ಬಿಗ್​ ಬಾಸ್​ ಮನೆಗೆ ಹಿರಿಯ ನಟ ಅವಿನಾಶ್​? ಈಡೇರುತ್ತಾ ಸ್ಪರ್ಧಿಗಳ ಬೇಡಿಕೆ?

ಬಿಗ್​ ಬಾಸ್​ ಮನೆಗೆ ಹಿರಿಯ ನಟ ಅವಿನಾಶ್​? ಈಡೇರುತ್ತಾ ಸ್ಪರ್ಧಿಗಳ ಬೇಡಿಕೆ?
ನಟ ಅವಿನಾಶ್

ಪ್ರಶಾಂತ್​ ಸಂಬರಗಿ ಮನೆ ಒಳಗೆ ಬರುತ್ತಿದ್ದಂತೆಯೇ ಯಾರೂ ಅವರನ್ನು ಗಮನಿಸಿಲ್ಲ. ಅವರು ಇದ್ದರೂ ಇಲ್ಲದಂತೆ ಸ್ಪರ್ಧಿಗಳು ನಡೆದುಕೊಂಡಿದ್ದಾರೆ. ಇದನ್ನು ನೋಡಿದ ಪ್ರಶಾಂತ್​ಗೆ ಸಾಕಷ್ಟು ಹಿಂಸೆ ಆಗಿದೆ.

Rajesh Duggumane

| Edited By: Madan Kumar

Jun 29, 2021 | 7:28 AM

ದೊಡ್ಮನೆಗೆ ಯಾರನ್ನು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಡಿಸಬೇಕು ಎಂಬದನ್ನು ನಿರ್ಧಾರ ಮಾಡುವ ಆಯ್ಕೆ ಸ್ಪರ್ಧಿಗಳ ಕೈಯಲ್ಲಿ ಇಲ್ಲ. ಅದನ್ನು, ಬಿಗ್​ ಬಾಸ್​ ನಿರ್ಧರಿಸುತ್ತಾರೆ. ಆದರೆ, ಈಗ ಸ್ಪರ್ಧಿಗಳು ಬಿಗ್​ ಬಾಸ್​ ಎದುರು ಹೊಸ ಬೇಡಿಕೆ ಇಟ್ಟಿದ್ದಾರೆ.  ಹಿರಿಯ ನಟ ಅವಿನಾಶ್​ ಅವರನ್ನು ಮನೆ ಒಳಗೆ ಕಳಿಸುವಂತೆ ಕೋರಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಅವರನ್ನು ಪ್ರ್ಯಾಂಕ್​ ಮಾಡಲಾಗಿದೆ. ಪ್ರಶಾಂತ್ ಅವರನ್ನು ಮೊದಲು ಎಲಿಮಿನೇಟ್​ ಮಾಡಲಾಯಿತು. ಅವರು ಮನೆಯಿಂದ ಹೊರ ಹೋಗುತ್ತಿದ್ದಂತೆಯೇ ಬಿಗ್ ಬಾಸ್​ನ 11 ಸ್ಪರ್ಧಿಗಳಿಗೆ ಸುದೀಪ್ ಸೂಚನೆ ಒಂದನ್ನು ನೀಡಿದ್ದರು. ‘ಪ್ರಶಾಂತ್ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ, ಅವರು ಬಂದ ಕೂಡಲೇ ಪ್ರಶಾಂತ್ ಕಾಣಿಸುತ್ತಿಲ್ಲ ಎಂಬ ರೀತಿಯಲ್ಲಿ ಆ್ಯಕ್ಟ್ ಮಾಡಿ’ ಎಂದು ಕಿಚ್ಚ ಸಲಹೆ ನೀಡಿದರು.

ಪ್ರಶಾಂತ್​ ಮನೆ ಒಳಗೆ ಬರುತ್ತಿದ್ದಂತೆಯೇ ಯಾರೂ ಅವರನ್ನು ಗಮನಿಸಿಲ್ಲ. ಅವರು ಇದ್ದರೂ ಇಲ್ಲದಂತೆ ಸ್ಪರ್ಧಿಗಳು ನಡೆದುಕೊಂಡಿದ್ದಾರೆ. ಇದನ್ನು ನೋಡಿದ ಪ್ರಶಾಂತ್​ಗೆ ಸಾಕಷ್ಟು ಹಿಂಸೆ ಆಗಿದೆ. ತಮ್ಮನ್ನು ಯಾರೂ ಮಾತನಾಡಿಸದೇ ಇದ್ದಿದ್ದನ್ನು ನೋಡಿ ತುಂಬಾನೇ ಬೆಸರಗೊಂಡರು. ಅಲ್ಲದೆ, ಅತ್ತರು ಕೂಡ. ಆದರೂ ಮನೆಯವರು ಸುದೀಪ್​ ಮಾತನ್ನು ಮೀರಿಲ್ಲ.

ಇನ್ನು ರಾತ್ರಿ ವೇಳೆ ಪ್ರಶಾಂತ್​ ಬಂದು ಎಲ್ಲರಿಗೂ ಹಿಂಸೆ ಕೊಡೊಕೇ ಆರಂಭಿಸಿದರು. ಆಗ ಮನೆ ಮಂದಿಯೆಲ್ಲ ‘ಬಿಗ್​ ಬಾಸ್​ ಮನೆಯಲ್ಲಿ ಕೆಟ್ಟ ಶಕ್ತಿ ಇದೆ’  ಕೂಗಿಕೊಂಡರು. ಇದನ್ನು ಕೇಳಿ ಪ್ರಶಾಂತ್​ ಒಮ್ಮೆ ತಲೆಕೆರೆದುಕೊಂಡರು.

ಮರುದಿನ ಗಾರ್ಡನ್​ ಎರಿಯಾದಲ್ಲಿ ಎಲ್ಲರೂ ಕೂತು ಮಾತನಾಡುವಾಗ ಶಮಂತ್​ ಅವರನ್ನು ಪ್ರಶಾಂತ್​ ಟಚ್​ ಮಾಡಿದರು. ‘ನನ್ನನ್ನು ಯಾರೋ ಮುಟ್ಟಿದಂತಾಗುತ್ತಿದೆ. ಆದರೆ, ಯಾರು ಎಂದು ಗೊತ್ತಾಗುತ್ತಿಲ್ಲ’​  ಎಂದು ಶಮಂತ್​ ಕ್ಯಾಮೆರಾ ಮುಂದೆ ಅಳಲು ತೋಡಿಕೊಂಡರು. ಆಗ ಮನೆ ಮಂದಿಯೆಲ್ಲ ‘ಆಪ್ತ ಮಿತ್ರ’ ಸಿನಿಮಾದಲ್ಲಿ ಬರುವ ಹಿರಿಯ ನಟ ಅವಿನಾಶ್​ ಅವರ ಪಾತ್ರವನ್ನು ನೆನೆದರು. ಅಲ್ಲದೆ, ಬಿಗ್​ ಬಾಸ್ ಮನೆ ಒಳಗೂ ಅವರನ್ನು ಕರೆಸುವಂತೆ ಬೇಡಿಕೆ ಇಟ್ಟರು.

ಇದನ್ನೂ ಓದಿ:

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ

Follow us on

Related Stories

Most Read Stories

Click on your DTH Provider to Add TV9 Kannada