ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

Chakravarthy Chandrachud | Manju Pavagada: ‘ಹೆಣ್ಣಿನ ಬಗ್ಗೆ ಕಾಳಜಿ ತೋರಿಸುತ್ತ ಇಷ್ಟೆಲ್ಲ ಮಾತನಾಡುವ ಇವರು ಎಲ್ಲಿಂದ ಬಂದಿದ್ದಾರೆ ಅಂತ ಎಲ್ಲರಿಗೂ ಗೊತ್ತು’ ಎಂದು ಚಕ್ರವರ್ತಿ ಚಂದ್ರಚೂಡ್​ಗೆ ಮಂಜು ಪಾವಗಡ ತಿವಿದರು. ಅದು ಚಕ್ರವರ್ತಿಯನ್ನು ಇನ್ನಷ್ಟು ಕೆರಳಿಸಿತು.

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ
ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 28, 2021 | 3:26 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಯುದ್ಧವೇ ನಡೆದುಹೋಗಿದೆ. ಮಂಜು ಪಾವಗಡ ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರ ನಡುವೆ ದೊಡ್ಡ ಸಂಘರ್ಷ ಆಗಿದೆ. ಇದೆಲ್ಲವೂ ನಡೆದಿರುವುದು ಕಿಚ್ಚ ಸುದೀಪ್​ ಅವರ ಎದುರಿನಲ್ಲೇ! ಜೂ.27ರ ‘ವೀಕೆಂಡ್​ ವಿಥ್​ ಸುದೀಪ’ ಎಪಿಸೋಡ್​ನಲ್ಲಿ ಎಲ್ಲರನ್ನೂ ಸುದೀಪ್​ ಮಾತನಾಡಿಸುತ್ತಿದ್ದರು. ಆಗ ಚಕ್ರವರ್ತಿ ಚಂದ್ರಚೂಡ್​ ಯಾಕೋ ಮಂಕಾಗಿ ಇರುವಂತೆ​ ಕಂಡರು. ಏನು ಸಮಾಚಾರ ಎಂದು ವಿಚಾರಿಸಿದಾಗ ದೊಡ್ಡ ಆಕ್ರೋಶ ಸ್ಫೋಟವಾಯಿತು.

ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಫೇಕ್​ ಲವ್​ಸ್ಟೋರಿ ಚಕ್ರವರ್ತಿಗೆ ಇಷ್ಟವಾಗಿಲ್ಲ. ಅದನ್ನು ವಿರೋಧಿಸಿರುವ ಅವರು ತುಂಬ ಕಟುವಾದ ಪದಗಳಿಂದ ಟೀಕೆ ಮಾಡಿದ್ದಾರೆ. ಇದನ್ನು ಕೇಳಿಸಿಕೊಂಡು ಮಂಜು ಕೂಡ ಪ್ರತ್ಯುತ್ತರ ನೀಡಿದ್ದಾರೆ. ‘ಇಷ್ಟೆಲ್ಲ ಮಾತನಾಡುವ ಇವರು ಎಲ್ಲಿಂದ ಬಂದಿದ್ದಾರೆ ಅಂತ ಎಲ್ಲರಿಗೂ ಗೊತ್ತು’ ಮಂಜು ಎಂದು ತಿವಿದರು. ಅದು ಚಕ್ರವರ್ತಿಯನ್ನು ಇನ್ನಷ್ಟು ಕೆರಳಿಸಿತು.

‘ಹೆಣ್ಣಿನ ಬಗ್ಗೆ ಬಹಳ ಕಾಳಜಿ ತೋರುವಂತೆ ಮಾತನಾಡುವ ಇವರು ಹೆಂಗಿದ್ದಾರೆ? ಇಲ್ಲಿಗೆ ಹೇಗೆ ಬಂದಿದ್ದಾರೆ ಎಂಬುದು ಎಲ್ಲರಿಗೋ ಗೊತ್ತು’ ಎಂದು ಚಕ್ರವರ್ತಿಯನ್ನು ಮಂಜು ಕೆರಳಿದರು. ‘ಈ ಮಾತಿನ ಅರ್ಥ ಏನು’ ಎಂದು ಸುದೀಪ್​ ಕೂಡ ಮಂಜುಗೆ ಪ್ರಶ್ನೆ ಕೇಳಿದರು. ‘ಚಕ್ರವರ್ತಿ ಯಾರು ಎಂಬುದು ಮಾತ್ರ ನೆನಪಿತ್ತು. ಇವರ ಮದುವೆಯಿಂದ ಮಾತ್ರ ಇವರ ಬಗ್ಗೆ ನನಗೆ ಗೊತ್ತಾಗಿದ್ದು’ ಎಂದು ಮಂಜು ಸಮರ್ಥನೆ ನೀಡಿದರು.

‘ನನ್ನ ಜೀವನವನ್ನು ಈ ಮನುಷ್ಯ ಏನು ನೋಡಿದಾನೆ? ನನಗೆ ಎರಡು ಡಿವೋರ್ಸ್​ ಆಗಿದೆ. 11 ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀನಿ. ಒಬ್ಬರು ಖ್ಯಾತ ನಟಿಗೆ (ಶ್ರುತಿ) ಡಿವೋರ್ಸ್​​ ನೀಡಿದ್ದೇನೆ. ಅವರು ‘ಮಜಾ ಭಾರತ’ದಲ್ಲಿ ಇದ್ದರು. ಭಾರತದ ಸಂವಿಧಾನದ ಪ್ರಕಾರ ವಿಚ್ಛೇದನ ಪಡೆದಿದ್ದೇನೆ. ನಾನು ನಾಟಕ ಮಾಡಿ ಡಿವೋರ್ಸ್​ ಪಡೆದಿಲ್ಲ. ಇದಕ್ಕೆ ನಾನು ಬೇರೆ ಬೇರೆ ಕಡೆ ಉತ್ತರ ಕೊಡುತ್ತೇನೆ’ ಎಂದು ಚಕ್ರವರ್ತಿ ಕೂಗಾಡಿದರು. ಮಾತಿನ ನಡುವಿನ ಬ್ರೇಕ್​ನಲ್ಲಿ ‘ನನ್ನ ಹೆಂಡತಿಯರ ಬಗ್ಗೆ ಮಾತಾಡ್ತಾನೆ’ ಎಂದು ಮಂಜು ವಿರುದ್ಧ ಚಕ್ರವರ್ತಿ ಹಲ್ಲು ಕಡಿದರು.

ಇದನ್ನೂ ಓದಿ:

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

Published On - 8:31 am, Mon, 28 June 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್