ಪುನೀತ್​ ರಾಜ್​ಕುಮಾರ್​ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ

‘ನೀನಾದೇನಾ...’ ಹಾಡಿಗೆ ಎಸ್. ಥಮನ್​ ಮ್ಯೂಸಿಕ್​ ಕಂಪೋಸ್ ಮಾಡಿದ್ದಾರೆ. ಅರ್ಮಾನ್​ ಮಲಿಕ್​, ಶ್ರೇಯಾ ಘೋಷಾಲ್​ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು.

ಪುನೀತ್​ ರಾಜ್​ಕುಮಾರ್​ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ
ಕನ್ನಡ ಹಾಡನ್ನು ಹಾಡಿದ ಕೊರಿಯಾ ಯುವತಿ
TV9kannada Web Team

| Edited By: Rajesh Duggumane

Jun 27, 2021 | 9:13 PM


ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾದ ‘ನೀನಾದೇನಾ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈಗ ಈ ಹಾಡನ್ನು ಕೊರಿಯಾದ ಯುವತಿಯೊಬ್ಬರು ಹಾಡಿದ್ದು ಸಾಕಷ್ಟು ವೈರಲ್​ ಆಗುತ್ತಿದೆ.

‘ನೀನಾದೇನಾ…’ ಹಾಡಿಗೆ ಎಸ್. ಥಮನ್​ ಮ್ಯೂಸಿಕ್​ ಕಂಪೋಸ್ ಮಾಡಿದ್ದಾರೆ. ಅರ್ಮಾನ್​ ಮಲಿಕ್​, ಶ್ರೇಯಾ ಘೋಷಾಲ್​ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈಗ ಈ ಹಾಡನ್ನು ಕೊರಿಯಾ ಯುವತಿ ಹಾಡಿದ್ದಾರೆ. ಈ ಹಾಡು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಕೊರಿಯಾದ ಯುವತಿಯ ಕನ್ನಡ ಪ್ರೇಮ ಅನೇಕರಿಗೆ ಇಷ್ಟವಾಗಿದೆ. ರಾಕೇಶ್​ ಗಿರೀಶ್​ ಎಂಬುವವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ಚಿತ್ರ ಯುವರತ್ನ. ಧನಂಜಯ್​, ಪ್ರಕಾಶ್​ ರಾಜ್ ಮೊದಲಾದವರು​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಪುನೀತ್​ ನಟನೆಯ ‘ಯುವರತ್ನ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯುವರತ್ನ ಮೊದಲ ದಿನ 7-10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸಿನಿಮಾದಲ್ಲಿ ಮಾಡಿದ ಕೆಲಸವನ್ನು ನಿಜ ಜೀವನದಲ್ಲಿಯೂ ಮಾಡಿ ತೋರಿಸಿದ ಪುನೀತ್ ರಾಜ್​ಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada