ರೇಪ್​ ಆರೋಪ, ತಂದೆ ಸಾವು, ತಾಯಿಗೆ ಕ್ಯಾನ್ಸರ್​, ಜೈಲು ವಾಸ; ಒಂದೇ ತಿಂಗಳಲ್ಲಿ ನಟನ ಬದುಕು ಛಿದ್ರ

Pearl V Puri Rape Case: ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪರ್ಲ್​ ವಿ. ಪುರಿ ಮೇಲೆ ಕೇಸ್​ ದಾಖಲಾಗಿತ್ತು. ಜಾಮೀನು ಪಡೆದ ಬಳಿಕ ಅವರು ಮೌನ ಮುರಿದಿದ್ದಾರೆ.

ರೇಪ್​ ಆರೋಪ, ತಂದೆ ಸಾವು, ತಾಯಿಗೆ ಕ್ಯಾನ್ಸರ್​, ಜೈಲು ವಾಸ; ಒಂದೇ ತಿಂಗಳಲ್ಲಿ ನಟನ ಬದುಕು ಛಿದ್ರ
ನಟ ಪರ್ಲ್​ ವಿ. ಪುರಿ
Follow us
ಮದನ್​ ಕುಮಾರ್​
|

Updated on: Jun 29, 2021 | 8:18 AM

ಕಿರುತೆರೆ ನಟ ಪರ್ಲ್​ ವಿ. ಪುರಿ ಅವರು ತಮ್ಮ ಪಾಡಿಗೆ ತಾವು ಹಾಯಾಗಿದ್ದರು. ಆದರೆ ಕಳೆದ ಕೆಲವೇ ದಿನಗಳಲ್ಲಿ ಅವರು ಪಡಬಾರದ ಕಷ್ಟವನ್ನೆಲ್ಲ ಅನುಭವಿಸುವಂತಾಯಿತು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಅವರು ಜೈಲಿಗೂ ಹೋಗಿಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಬದುಕು ಹೇಗೆ ಛಿದ್ರವಾಗಿದೆ ಎಂಬುದನ್ನು ಪರ್ಲ್​ ವಿ. ಪುರಿ ವಿವರಿಸಿದ್ದಾರೆ.

‘ಜನರನ್ನು ಪರೀಕ್ಷಿಸಲು ಬದುಕಿಗೆ ತನ್ನದೇ ಆದ ಮಾರ್ಗಗಳಿವೆ. ಇತ್ತೀಚಿಗೆ ನಾನು ಅಜ್ಜಿಯನ್ನು ಕಳೆದುಕೊಂಡಿದ್ದೆ. ಅವರು ನಿಧನರಾಗಿ 17ನೇ ದಿನಕ್ಕೆ ನನ್ನ ತಂದೆ ಕೂಡ ಮೃತರಾದರು. ಆನಂತರ ನನ್ನ ತಾಯಿಗೆ ಕ್ಯಾನ್ಸರ್​ ಇರುವುದು ಗೊತ್ತಾಯಿತು. ಬಳಿಕ ನನ್ನ ಮೇಲೆ ಇಂಥ ಕೆಟ್ಟ ಆರೋಪ ಬಂತು. ಕಳೆದ ಕೆಲವು ದಿನಗಳು ನನ್ನ ಪಾಲಿಗೆ ದುಸ್ವಪ್ನವಾಗಿವೆ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪರ್ಲ್​ ವಿ. ಪುರಿ ಬರೆದುಕೊಂಡಿದ್ದಾರೆ.

‘ರಾತ್ರೋರಾತ್ರಿ ನನ್ನನ್ನು ಒಬ್ಬ ಕ್ರಿಮಿನಲ್​ ರೀತಿಯಲ್ಲಿ ಆಲೋಚಿಸುವಂತೆ ಮಾಡಲಾಯಿತು. ಇದೆಲ್ಲವೂ ಆಗಿದ್ದು ನನ್ನ ತಾಯಿಗೆ ಕ್ಯಾನ್ಸರ್​ ಚಿಕಿತ್ಸೆ ನಡೆಯುತ್ತಿರುವ ಮಧ್ಯದಲ್ಲೇ. ಇದು ನನ್ನ ಭದ್ರತೆಯ ಭಾವವನ್ನೇ ಛಿದ್ರಗೊಳಿಸಿತು. ತುಂಬ ಅಸಹಾಯಕತೆ ಕಾಡಿತು. ಈಗಲೂ ನಾನು ಮರಗಟ್ಟಿದವನಂತೆ ಇದ್ದೇನೆ. ಆದರೆ ಈಗ ನನಗೆ ಪ್ರೀತಿ, ಬೆಂಬಲ ತೋರಿದ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳನ್ನು ಭೇಟಿಯಾಗುವ ಸಮಯ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಧನ್ಯವಾದಗಳು. ಸತ್ಯ ಮೇವ ಜಯತೆ ಎಂಬುದನ್ನು ಬಲವಾಗಿ ನಂಬಿದವನು ನಾನು. ದೇಶದ ಕಾನೂನು, ನ್ಯಾಯಾಂಗ ಮತ್ತು ದೇವರಲ್ಲಿ ನನಗೆ ಭರವಸೆ ಇದೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಇರಲಿ’ ಎಂದು ಪರ್ಲ್​ ವಿ. ಪುರಿ ಬರೆದುಕೊಂಡಿದ್ದಾರೆ.

View this post on Instagram

A post shared by Pearl V Puri (@pearlvpuri)

ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪರ್ಲ್​ ವಿ. ಪುರಿ ಮೇಲೆ ಕೇಸ್​ ದಾಖಲಾಗಿತ್ತು. ಆದರೆ ಬಾಲಕಿಯ ತಂದೆಯ ದುರುದ್ದೇಶದಿಂದ ಈ ಆರೋಪ ಮಾಡಲಾಗಿತ್ತು ಎಂದು ಸ್ವತಃ ಬಾಲಕಿಯ ಕುಟುಂದವರು ಹೇಳಿದ್ದರು. ಬಳಿಕ ಪರ್ಲ್​ ವಿ. ಪುರಿಗೆ ಜಾಮೀನು ಸಿಗುವಂತಾಯಿತು.

ಇದನ್ನೂ ಓದಿ:

ಅಪ್ರಾಪ್ತೆ ಮೇಲೆ ರೇಪ್​ ಮಾಡಿದ ಆರೋಪ ಹೊತ್ತ ನಟ ಪರ್ಲ್​ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್​ ಟ್ವಿಸ್ಟ್​

Pearl V Puri: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಕಿರುತೆರೆ ನಟ ಪರ್ಲ್​ ವಿ. ಪುರಿಗೆ ಸಿಕ್ತು ರಿಲೀಫ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ