AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಅಂದರೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ತಜ್ಞರು ಹೇಳುವಂತೆ ಇದಕ್ಕೆ ನಾವು ಅನುಸರಿಸುವ ಆಹಾರಕ್ರಮವೇ ಪ್ರಮುಖ ಕಾರಣವಾಗಿರಬಹುದು. ನೀವು ಕೂಡ ಆಹಾರದಲ್ಲಿ ಈ ವಸ್ತುಗಳನ್ನು ಸೇವಿಸಿದರೆ, ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಬಹುದು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ, ಇದು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!
Fatty Liver Disease: Foods to Avoid
ಪ್ರೀತಿ ಭಟ್​, ಗುಣವಂತೆ
|

Updated on: Feb 20, 2026 | 11:10 PM

Share

ಮೊದಲೆಲ್ಲಾ 40 ರಿಂದ 50 ವರ್ಷ ವಯಸ್ಸಿನವರಲ್ಲಿ ಕೊಬ್ಬಿನ ಪಿತ್ತಜನಕಾಂಗದ ಅಥವಾ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಕಂಡುಬರುತ್ತಿತ್ತು, ಆದರೆ ಈಗ, ಯುವಕ, ಯುವತಿಯರು ಜೊತೆಗೆ ಮಕ್ಕಳಲ್ಲಿಯೂ ಕೂಡ ಈ ಕಾಯಿಲೆಗಳು ಕಾಣಸಿಗುತ್ತಿದೆ. ವೈದ್ಯರ ಪ್ರಕಾರ, ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ಏಕೆಂದರೆ ಮದ್ಯಪಾನ ಮಾಡದವರಲ್ಲಿಯೂ ಈ ರೀತಿಯ ಸಮಸ್ಯೆ ಕಂಡುಬರುತ್ತಿದ್ದು ಇದಕ್ಕೆ ನಾವು ಸೇವಿಸುತ್ತಿರುವ ಆಹಾರವೇ ಕಾರಣವಾಗಿದೆ. ತಜ್ಞರ ಪ್ರಕಾರ, ಜನರು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿಯೇ ಫ್ಯಾಟಿ ಲಿವರ್ ಉಂಟುಮಾಡುವ ಕೆಲವು ವಿಷಯಗಳಿರುತ್ತವೆ. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ, ಇದು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ಕೆಲವರು ಪ್ರತಿದಿನ ಹೊರಗಿನ ಆಹಾರ ಸೇವನೆ ಮಾಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಹೊರಗೆ ಸಿಗುವಂತಹ ಬ್ರೆಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಹಿಟ್ಟನ್ನು ಬಳಸಲಾಗುತ್ತದೆ. ಇದನ್ನು ಸೇವನೆ ಮಾಡುವುದು ನೇರವಾಗಿ ಕೊಬ್ಬಿನ ಯಕೃತ್ತಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಜನರು ಹೆಚ್ಚಿನ ಪ್ರಮಾಣದಲ್ಲಿ ತಂಪು ಪಾನೀಯ, ಸಿಹಿತಿಂಡಿ ಮತ್ತು ಕರಿದ ಆಹಾರಗಳನ್ನು ಸೇವಿಸುತ್ತಾರೆ, ಇದು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.

ಫ್ಯಾಟಿ ಲಿವರ್ ಹೇಗೆ ಉಂಟಾಗುತ್ತದೆ?

ಡಾ. ಅಜಯ್ ಹೇಳುವ ಪ್ರಕಾರ, ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ ಫ್ಯಾಟಿ ಲಿವರ್ ಉಂಟಾಗುತ್ತದೆ. ಅದರಲ್ಲಿಯೂ ಕೊಬ್ಬಿನ ಪಿತ್ತಜನಕಾಂಗ ಅಂದರೆ ಫ್ಯಾಟಿ ಲಿವರ್, ಗ್ರೇಡ್ 1, ಗ್ರೇಡ್ 2 ಲಿವರ್ ಫೈಬ್ರೋಸಿಸ್ ಮತ್ತು ಲಿವರ್ ಸಿರೋಸಿಸ್‌ನಂತಹ ಹಲವಾರು ವಿಧಗಳಲ್ಲಿ ಬರುತ್ತದೆ. ಇವುಗಳಲ್ಲಿ, ಲಿವರ್ ಸಿರೋಸಿಸ್ ಅತ್ಯಂತ ಅಪಾಯಕಾರಿ, ಇದಕ್ಕೆ ಲಿವರ್ ಕಸಿ ಅಗತ್ಯವಿರಬಹುದು. ಇನ್ನು, ಆಲ್ಕೋಹಾಲ್ ಕುಡಿಯವವರಲ್ಲಿ, ಫ್ಯಾಟಿ ಲಿವರ್ ಅನ್ನು ಆಲ್ಕೊಹಾಲ್ಯುಕ್ತವಲ್ಲದ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Liver Health: ಲಿವರ್ ಚೆನ್ನಾಗಿರಬೇಕು ಅಂದರೆ ಈ ಹಣ್ಣುಗಳನ್ನು ತಪ್ಪದೆ ತಿನ್ನಿ

ಫ್ಯಾಟಿ ಲಿವರ್ ಆರಂಭಿಕ ಲಕ್ಷಣಗಳು?

ಆರಂಭದಲ್ಲಿ, ಈ ಸಮಸ್ಯೆಯ ಲಕ್ಷಣಗಳು ಅಷ್ಟಾಗಿ ಗೋಚರಿಸುವುದಿಲ್ಲ, ಆದರೆ ಕ್ರಮೇಣ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇವುಗಳಲ್ಲಿ ಆಯಾಸ, ಹೊಟ್ಟೆಯ ಬಲಭಾಗದಲ್ಲಿ ಸಣ್ಣ ನೋವು ಅಥವಾ ತೂಕ ಹೆಚ್ಚಾಗುವಂತಹ ಸಮಸ್ಯೆಗಳು ಸೇರಿವೆ. ಒಬ್ಬ ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಏಕೆಂದರೆ ಕೊಬ್ಬಿನ ಯಕೃತ್ತಿನ ರೋಗ ಅಥವಾ ಫ್ಯಾಟಿ ಲಿವರ್ ಸಮಸ್ಯೆ ಆರಂಭಿಕ ಹಂತಗಳಲ್ಲಿ ಸುಲಭವಾಗಿ ನಿಯಂತ್ರಿಸಬಹುದು, ಆದರೆ ಒಮ್ಮೆ ಯಕೃತ್ತು ಸಿರೋಸಿಸ್ ಉಂಟಾದರೆ, ರೋಗಿಯ ಸ್ಥಿತಿ ಗಮನಾರ್ಹವಾಗಿ ಹದಗೆಡಬಹುದು.

ಫ್ಯಾಟಿ ಲಿವರ್ ತಡೆಯಲು ಸಲಹೆಗಳು:

  • ಆಹಾರದಲ್ಲಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಿ.
  • ಪ್ರತಿದಿನ ವ್ಯಾಯಾಮ ಮಾಡಿ.
  • ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
  • ಸಕ್ಕರೆ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್