AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಮಂಜುನಾಥ ಸಿ.
|

Updated on: Feb 20, 2026 | 5:35 PM

Share

Mahesh Babu: ಟಾಲಿವುಡ್ ಸೂಪರ್‌ ಸ್ಟಾರ್ ಮಹೇಶ್ ಬಾಬು ಇಂದು (ಫೆಬ್ರವರಿ 20, 2026) ಬೆಂಗಳೂರಿಗೆ ನೀಡಿದ್ದರು. ತಮ್ಮ ಒಡೆತನದ ನೂತನ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್ ಕಪಾಲಿ’ ಗೆ ಅವರು ಭೇಟಿ ನೀಡಿದ್ದು, ನೆಚ್ಚಿನ ನಟನನ್ನು ನೋಡಲು ಗಾಂಧಿನಗರದ ಚಿತ್ರಮಂದಿರದ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ವಿಡಿಯೋ ನೋಡಿ...

ಟಾಲಿವುಡ್ ಸೂಪರ್‌ ಸ್ಟಾರ್ ಮಹೇಶ್ ಬಾಬು (Mahesh Babu) ಇಂದು (ಫೆಬ್ರವರಿ 20, 2026) ಬೆಂಗಳೂರಿಗೆ ನೀಡಿದ್ದರು. ತಮ್ಮ ಒಡೆತನದ ನೂತನ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್ ಕಪಾಲಿ’ ಗೆ ಅವರು ಭೇಟಿ ನೀಡಿದ್ದು, ನೆಚ್ಚಿನ ನಟನನ್ನು ನೋಡಲು ಗಾಂಧಿನಗರದ ಚಿತ್ರಮಂದಿರದ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ದಕ್ಷಿಣ ಭಾರತದ ಮೊದಲ ‘ಡಾಲ್ಬಿ ಸಿನಿಮಾ’ ತಂತ್ರಜ್ಞಾನವನ್ನು ಹೊಂದಿರುವ ಈ ಚಿತ್ರಮಂದಿರದ ಕಾರ್ಯವೈಖರಿ ಮತ್ತು ಗುಣಮಟ್ಟವನ್ನು ಪರಿಶೀಲಿಸಲು ಮಹೇಶ್ ಬಾಬು ಇಂದು ಖುದ್ದಾಗಿ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ ಅವರನ್ನು ನೋಡಲು ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ