AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆ ಮೇಲೆ ರೇಪ್​ ಮಾಡಿದ ಆರೋಪ ಹೊತ್ತ ನಟ ಪರ್ಲ್​ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್​ ಟ್ವಿಸ್ಟ್​

Pearl V Puri Minor Rape Case: ಕೆಲವೇ ದಿನಗಳ ಹಿಂದೆ ಪರ್ಲ್ ವಿ. ಪುರಿ ಅವರನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್​ ದಾಖಲಿಸಲಾಗಿತ್ತು. ತನ್ನ ಮೇಲೆ ಅತ್ಯಾಚಾರ ಆಗಿರುವುದು ನಿಜ ಎಂದು ಬಾಲಕಿ ಕೂಡ ಹೇಳಿಕೆ ನೀಡಿದ್ದಾಳೆ.

ಅಪ್ರಾಪ್ತೆ ಮೇಲೆ ರೇಪ್​ ಮಾಡಿದ ಆರೋಪ ಹೊತ್ತ ನಟ ಪರ್ಲ್​ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್​ ಟ್ವಿಸ್ಟ್​
ಪರ್ಲ್​ ವಿ. ಪುರಿ
ಮದನ್​ ಕುಮಾರ್​
|

Updated on: Jun 12, 2021 | 8:56 AM

Share

ಹಿಂದಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿರುವ ನಟ ಪರ್ಲ್​ ವಿ. ಪುರಿ ಮೇಲೆ ಕೆಲವೇ ದಿನಗಳ ಹಿಂದೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ರೇಪ್​ ಮಾಡಿದ್ದಾರೆ ಎಂದು ಅವರ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದರು. ಟಿವಿ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ, 17 ವರ್ಷ ಬಾಲಕಿ ಮೇಲೆ ಪರ್ಲ್​ ವಿ. ಪುರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣಕ್ಕೆ ಈಗ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಪರ್ಲ್​ ವಿ. ಪುರಿ ನಿರಪರಾಧಿ ಎಂದು ಸಂತ್ರಸ್ಥೆಯ ತಾಯಿ ಹೇಳಿಕೆ ನೀಡಿದ್ದಾರೆ!

ಒಟ್ಟಾರೆ ಈ ಪ್ರಕರಣದ ಹಿಂದೆ ಒಂದು ಕೌಟುಂಬಿಕ ಕಲಹ ಇದೆ. ಬಾಲಕಿಯ ತಾಯಿ ಏಕ್ತಾ ಶರ್ಮಾ ಅವರು ಈಗ ಅದನ್ನು ಬಯಲು ಮಾಡಿದ್ದಾರೆ. ಏಕ್ತಾ ಶರ್ಮಾ ಮತ್ತು ಅವರ ಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳನ್ನು ತಮ್ಮ ಸುಪರ್ದಿಗೆ ಪಡೆಯಬೇಕು ಎಂಬ ಕಾರಣಕ್ಕೆ ಇಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಬಂದಿದೆ. ಅದೇ ಕಾರಣಕ್ಕಾಗಿ ಏಕ್ತಾ ಶರ್ಮಾ ಹೆಸರಿಗೆ ಮಸಿ ಬಳಿಯಲು ಅವರ ಗಂಡ ಈ ಸುಳ್ಳು ಕೇಸ್​ ದಾಖಲಿಸಿದ್ದಾನೆ ಎನ್ನಲಾಗಿದೆ.

ಮಗಳನ್ನು ನೋಡಿಕೊಳ್ಳಲು ಏಕ್ತಾ ಶರ್ಮಾ ಸಮರ್ಥಳಲ್ಲ ಎಂಬುದನ್ನು ಕೋರ್ಟ್​ನಲ್ಲಿ ಸಾಬೀತು ಮಾಡುವುದು ಪತಿಯ ಪ್ಲ್ಯಾನ್ ಆಗಿದೆ​ ಎಂದು ಹೇಳಲಾಗುತ್ತಿದೆ. ಏಕ್ತಾ ಶರ್ಮಾ ಅವರ ಸಂಬಂಧಿ ಆರತಿ ಪುರಿ ಎಂಬುವವರು ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕವೂ ವಿಷಯ ಬಹಿರಂಗ ಪಡಿಸಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ನಿರಪರಾಧಿಯಾದ ಪರ್ಲ್​ ವಿ. ಪುರಿ ಅವರನ್ನು ಅನವಶ್ಯಕವಾಗಿ ಸಿಕ್ಕಿ ಹಾಕಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆ ಪರ್ಲ್ ವಿ. ಪುರಿ ಅವರನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್​ ದಾಖಲಿಸಲಾಗಿತ್ತು. ತಮ್ಮ ಮೇಲೆ ಅತ್ಯಾಚಾರ ಆಗಿರುವುದು ನಿಜ ಎಂದು ಬಾಲಕಿ ಕೂಡ ಹೇಳಿಕೆ ನೀಡಿದ್ದಾಳೆ. ಈ ಎಲ್ಲ ಬೆಳವಣಿಗೆಗಳಿಂದ ಪರ್ಲ್​ ಅವರಿಗೆ ಜಾಮೀನು ಸಿಕ್ಕಿಲ್ಲ. ಜೂನ್​ 18ರವರೆಗೂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕಿ ತಾಯಿ ಈಗ ಈ ರೀತಿ ಹೇಳಿಕೆ ನೀಡಿರುವುದರಿಂದ ತನಿಖೆಯ ಸ್ವರೂಪ ಬದಲಾಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಈ ಕೇಸ್​ಗೆ ಈಗ ದೊಡ್ಡ ಟ್ವಿಸ್ಟ್​​ ಸಿಕ್ಕಂತಾಗಿದೆ.

ಇದನ್ನೂ ಓದಿ:

ಹರಿಯಾಣ: 10 ವರ್ಷದ ಬಾಲಕಿ ಮೇಲೆ 7 ಬಾಲಕರಿಂದ ಅತ್ಯಾಚಾರ, ಅವರಲ್ಲಿ 6 ಜನ 12ಕ್ಕಿಂತ ಕಡಿಮೆ ಪ್ರಾಯದವರು!

ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣ; ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್