ನಮ್ಮದು ಮದುವೆಯೇ ಅಲ್ಲ ಎಂದಿದ್ದ ನಟಿ ಈಗ ಪ್ರೆಗ್ನೆಂಟ್; ಸಾಕ್ಷಿ ಒದಗಿಸಿದ ಫೋಟೋ ವೈರಲ್
Nusrat Jahan: ನಿಖಿಲ್ ಜೈನ್ ಮತ್ತು ನುಸ್ರತ್ ಜಹಾನ್ ನಡುವೆ ಪದೇಪದೇ ಜಗಳ ಆಗುತ್ತಿದೆ ಎಂಬ ಗುಸುಗುಸು ಹಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದನ್ನು ಈ ದಂಪತಿ ಒಪ್ಪಿಕೊಂಡಿರಲಿಲ್ಲ.
ಸೆಲೆಬ್ರಿಟಿಗಳ ಕುಟುಂಬದ ಜಗಳ ಬೀದಿಗೆ ಬಂದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಸದ್ಯ ಜನಪ್ರಿಯ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರ ಸಂಸಾರದ ವಿಚಾರದಲ್ಲಿ ಹಾಗೆಯೇ ಆಗಿದೆ. ಪತಿ ನಿಖಿಲ್ ಜೈನ್ ಜೊತೆ ಅವರಿಗೆ ಮನಸ್ತಾಪ ಆಗಿದೆ. ಹಲವು ದಿನಗಳಿಂದ ಅವರು ಜೊತೆಯಾಗಿ ವಾಸಿಸುತ್ತಿಲ್ಲ. ಅಲ್ಲದೆ, ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮ್ಮಿಬ್ಬರ ಮದುವೆಗೆ ಭಾರತದಲ್ಲಿ ಮಾನ್ಯತೆಯೇ ಇಲ್ಲ. ಹಾಗಾಗಿ ಅದು ಮದುವೆಯೇ ಅಲ್ಲ ಎಂದು ಹೇಳಿದ್ದ ನುಸ್ರತ್ ಈಗ ಗರ್ಭಿಣಿ ಎಂಬ ಸುದ್ದಿ ಹರಡಿದೆ. ಅದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ.
ಬೆಂಗಾಳಿ ಚಿತ್ರರಂಗದ ಇತರೆ ಸ್ನೇಹಿತೆಯರ ಜೊತೆ ನುಸ್ರತ್ ಪೋಸ್ ನೀಡಿರುವ ಫೋಟೋವೊಂದು ವೈರಲ್ ಆಗಿದೆ. ಆ ಫೋಟೋ ನೋಡಿದವರೆಲ್ಲರೂ ನುಸ್ರತ್ ಪ್ರಗ್ನೆಂಟ್ ಎಂಬುದನ್ನು ಹೇಳಿದ್ದಾರೆ. ಅವರ ಹೊಟ್ಟೆ ಗಮನಿಸಿದರೆ ಅವರು ಗರ್ಭಿಣಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ನುಸ್ರತ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಖಿಲ್ ಜೈನ್ ಮತ್ತು ನುಸ್ರತ್ ನಡುವೆ ಪದೇಪದೇ ಜಗಳ ಆಗುತ್ತಿದೆ ಎಂಬ ಗುಸಗುಸು ಹಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದನ್ನು ಈ ದಂಪತಿ ಒಪ್ಪಿಕೊಂಡಿರಲಿಲ್ಲ. ಈಗ ಇಬ್ಬರ ನಡುವೆ ಕಿರಿಕ್ ಜಗಜ್ಜಾಹೀರಾಗಿದೆ. ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ನುಸ್ರತ್ ಜಹಾನ್ ಡಿಲೀಟ್ ಮಾಡಿದ್ದಾರೆ. ಇಬ್ಬರ ಮದುವೆ ಮುರಿದು ಬಿದ್ದಿರುವುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ.
ನುಸ್ರತ್ ಗರ್ಭಿಣಿ ಆಗಿದ್ದಾರೆ ಎನ್ನುವ ಮಾತು ಪತಿ ನಿಖಿಲ್ ಕಿವಿಗೂ ಬಿದ್ದಿದೆಯಂತೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಆ ಮಗು ನನ್ನದಲ್ಲ. ನಾವಿಬ್ಬರು ಜೊತೆಯಾಗಿ ವಾಸಿಸದೇ ಆರು ತಿಂಗಳು ಕಳೆದಿದೆ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.
2019ರ ಜೂನ್ನಲ್ಲಿ ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರು ಟರ್ಕಿಗೆ ತೆರಳಿ ಮದುವೆ ಆಗಿದ್ದರು. ‘ಆ ಮದುವೆ ನಡೆದಿದ್ದು ವಿದೇಶದಲ್ಲಿ. ಟರ್ಕಿ ಕಾನೂನಿನ ಪ್ರಕಾರ ಆ ಮದುವೆಗೆ ಮಾನ್ಯತೆ ಇಲ್ಲ. ಅದಕ್ಕೆ ಭಾರತದ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಪ್ರಕಾರ ಮಾನ್ಯತೆ ಸಿಗಬೇಕಿತ್ತು. ಅದು ಕೂಡ ಆಗಿಲ್ಲ. ಕಾನೂನಿನ ಪ್ರಕಾರ ಅದು ಲಿವ್-ಇನ್-ರಿಲೇಷನ್ಶಿಪ್ ಅಷ್ಟೇ. ಹಾಗಾಗಿ ವಿಚ್ಛೇದನ ಪಡೆಯುವ ಅಗತ್ಯವೇ ಇಲ್ಲ’ ಎಂದು ನುಸ್ರತ್ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ:
ಯಶ್ ಜೊತೆ ಆಪ್ತವಾಗಿದ್ದ ನಟಿಯ ಸಂಸಾರದಲ್ಲಿ ಬಿರುಗಾಳಿ; ಆ ಮಗು ನಂದಲ್ಲ ಎಂದ ಪತಿ ನಿಖಿಲ್?