ಯಶ್ ಜೊತೆ ಆಪ್ತವಾಗಿದ್ದ ನಟಿಯ ಸಂಸಾರದಲ್ಲಿ ಬಿರುಗಾಳಿ; ಆ ಮಗು ನಂದಲ್ಲ ಎಂದ ಪತಿ ನಿಖಿಲ್?
Nusrat Jahan: ಇತ್ತೀಚೆಗೆ ನುಸ್ರತ್ ಅವರು ಗರ್ಭಿಣಿ ಆಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಇದನ್ನು ಕೇಳಿಸಿಕೊಂಡಿರುವ ಪತಿ ನಿಖಿಲ್ ಅವರು, ‘ಆ ಮಗು ನನ್ನದಲ್ಲ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.
ಜನಪ್ರಿಯ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರ ಸಂಸಾರದ ಜಗಳ ಈಗ ಬೀದಿಗೆ ಬಂದಿದೆ. ಪತಿ ನಿಖಿಲ್ ಜೈನ್ ಜೊತೆ ಅವರಿಗೆ ಭಿನ್ನಾಭಿಪ್ರಾಯ ಮೂಡಿದ್ದು, ಆಗಾಗ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಹಾಗಿದ್ದರೂ ಸಂಸಾರದ ಗುಟ್ಟಿನ ಬಗ್ಗೆ ಅವರಿಬ್ಬರು ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಅವರ ಕುಟುಂಬದ ರಂಪಾಟ ಬಯಲಾಗಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತ, ಮದುವೆ ಮುರಿದುಕೊಳ್ಳುವ ಮಟ್ಟಕ್ಕೆ ಬಂದಿದೆ ಈ ಜೋಡಿ.
2019ರ ಜೂನ್ನಲ್ಲಿ ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರು ಟರ್ಕಿಗೆ ತೆರಳಿ ಮದುವೆ ಆಗಿದ್ದರು. ಮದುವೆ ಫೋಟೋಗಳನ್ನು ಕೂಡ ನುಸ್ರತ್ ಹಂಚಿಕೊಂಡಿದ್ದರು. ಆದರೆ ಈಗ ಆ ಮದುವೆಗೆ ಮಾನ್ಯತೆಯೇ ಇಲ್ಲ ಎಂದು ನುಸ್ರತ್ ಹೇಳುತ್ತಿದ್ದಾರೆ. ‘ಮದುವೆ ನಡೆದಿದ್ದು ವಿದೇಶದಲ್ಲಿ. ಟರ್ಕಿ ಕಾನೂನಿನ ಪ್ರಕಾರ ಆ ಮದುವೆಗೆ ಮಾನ್ಯತೆ ಇಲ್ಲ. ಅದಕ್ಕೆ ಭಾರತದ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಪ್ರಕಾರ ಮಾನ್ಯತೆ ಸಿಗಬೇಕಿತ್ತು. ಅದು ಕೂಡ ಆಗಿಲ್ಲ. ಕಾನೂನಿನ ಪ್ರಕಾರ ಅದು ಲಿವ್-ಇನ್-ರಿಲೇಷನ್ಶಿಪ್ ಅಷ್ಟೇ. ಹಾಗಾಗಿ ವಿಚ್ಛೇದನ ಪಡೆಯುವ ಅಗತ್ಯವೇ ಇಲ್ಲ’ ಎಂದು ನುಸ್ರತ್ ಹೇಳಿದ್ದಾರೆ.
ಇತ್ತೀಚೆಗೆ ನುಸ್ರತ್ ಅವರು ಗರ್ಭಿಣಿ ಆಗಿದ್ದಾರೆ ಎಂದು ಸುದ್ದಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಸುದ್ದಿ ಕೇಳಿಸಿಕೊಂಡಿರುವ ನಿಖಿಲ್ ಅವರು, ‘ಆ ಮಗು ನನ್ನದಲ್ಲ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ. ಮೂಲಗಳ ಪ್ರಕಾರ ನುಸ್ರತ್ ಮತ್ತು ನಿಖಿಲ್ ಕಳೆದ ಆರು ತಿಂಗಳಿಂದ ಜೊತೆಯಲ್ಲಿ ವಾಸಿಸುತ್ತಿಲ್ಲ!
ಇನ್ನು, ನುಸ್ರತ್ ಮತ್ತು ನಿಖಿಲ್ ಸಂಸಾರದಲ್ಲಿ ಬಿರುಗಾಳಿ ಬೀಸಲು ನಟ ಯಶ್ ದಾಸಗುಪ್ತ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಾಲಿ ಚಿತ್ರರಂಗದಲ್ಲಿ ಯಶ್ ದಾಸಗುಪ್ತ ಮಿಂಚುತ್ತಿದ್ದಾರೆ. ‘ಒನ್’ ಸಿನಿಮಾದಲ್ಲಿ ಯಶ್ ಮತ್ತು ನುಸ್ರತ್ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಮತ್ತೊಂದು ಸಿನಿಮಾದಲ್ಲಿ ಅವರು ಜೊತೆಯಾಗಿ ನಟಿಸುತ್ತಾರೆ ಎಂದು ಕೂಡ ಹೇಳಲಾಗಿತ್ತು. ಇಬ್ಬರೂ ಜೊತೆಯಾಗಿರುವ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಗಾಸಿಪ್ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
Shilpa Shetty Birthday: ವಿವಾಹಿತ ಪುರುಷ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?
ಕಮಲ್ ಹಾಸನ್ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್; ಕಾರಣ ಏನು?
Published On - 9:53 am, Thu, 10 June 21