ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?

ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?
ಪ್ರಶಾಂತ್​ ನೀಲ್​ - ಪ್ರಭಾಸ್​

ಸಲಾರ್​ ಬಳಿಕ ಮತ್ತೊಂದು ಸಿನಿಮಾದಲ್ಲೂ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಒಂದಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ಹೊಸ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ.

Madan Kumar

|

Jun 10, 2021 | 8:10 AM

ನಿರ್ದೇಶಕ ಪ್ರಶಾಂತ್​ ನೀಲ್​ ಅವರಿಗೆ ದೇಶಾದ್ಯಂತ ಡಿಮ್ಯಾಂಡ್​ ಹೆಚ್ಚಿದೆ. ‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನವೇ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪರಭಾಷೆಯ ಘಟಾನುಘಟಿ ನಟರ ಚಿತ್ರಗಳಿಂದ ಪ್ರಶಾಂತ್ ನೀಲ್​ಗೆ ಬೇಡಿಕೆ ಬಂದಿದೆ. ಈಗಾಗಲೇ ಅವರು ಪ್ರಭಾಸ್​ ಜೊತೆ ‘ಸಲಾರ್​’ ಮಾಡುತ್ತಿದ್ದಾರೆ. ಬಳಿಕ ಜ್ಯೂ. ಎನ್​ಟಿಆರ್​ ಜೊತೆಗೆ ಸಿನಿಮಾ ಮಾಡುವುದು ಕೂಡ ಪಕ್ಕಾ ಆಗಿದೆ. ಈಗ ಇನ್ನೊಂದು ಇಂಟರೆಸ್ಟಿಂಗ್​ ನ್ಯೂಸ್​ ಕೇಳಿಬಂದಿದೆ.

ಸದ್ಯ ಸಲಾರ್​ ಚಿತ್ರದ ಮೇಲೆ ಪ್ರಶಾಂತ್​ ನೀಲ್​ ಅವರ ಗಮನ ಇದೆ. ಅಚ್ಚರಿ ಎಂದರೆ ಸಲಾರ್​ ಮಾತ್ರವಲ್ಲದೆ, ಮತ್ತೊಂದು ಸಿನಿಮಾದಲ್ಲೂ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಒಂದಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ಹೊಸ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ. ಅದು ಪೌರಾಣಿಕ ಸಿನಿಮಾ ಆಗಿರಲಿದೆ ಎಂಬುದು ವಿಶೇಷ.

ಉಗ್ರಂ ಮತ್ತು ಕೆಜಿಎಫ್​ ಚಿತ್ರಗಳಲ್ಲಿ ರಗಡ್​ ಆದಂತಹ ಕಥೆಗಳನ್ನು ಹೇಳಿರುವ ಪ್ರಶಾಂತ್​ ನೀಲ್ ಅವರು ಪೌರಾಣಿಕ ಸಿನಿಮಾವನ್ನೂ ಹ್ಯಾಂಡಲ್​ ಮಾಡಬಲ್ಲರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದರಲ್ಲೂ ನಿರ್ದಿಷ್ಟವಾಗಿ ಅವರು ಯಾವ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಗಮನಿಸಬೇಕಾದ ಅಂಶ ಏನೆಂದರೆ, ಈ ಸಿನಿಮಾ ಬಾಹುಬಲಿಗಿಂತಲೂ ದೊಡ್ಡ ಕ್ಯಾನ್ವಾಸ್​ನಲ್ಲಿ ಮೂಡಿಬರಲಿದೆಯಂತೆ.

ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಪ್ರೀ ಪ್ರೊಡಕ್ಷನ್​ ಕೆಲಸಗಳು ಆಗಬೇಕಿದೆ. ಬೃಹತ್​ ಸೆಟ್​ಗಳು ನಿರ್ಮಾಣ ಆಗಬೇಕಿದೆ. ಆದರೆ ಅದೆಲ್ಲದಕ್ಕೂ ಮುನ್ನ ಪ್ರಭಾಸ್​ ಮತ್ತು ಪ್ರಶಾಂತ್ ನೀಲ್​ ಅವರು ಈಗಿರುವ ಕಮಿಟ್​ಮೆಂಟ್​ಗಳನ್ನು ಮುಗಿಸಿಕೊಳ್ಳಬೇಕಿದೆ. ಸಲಾರ್​, ರಾಧೆ ಶ್ಯಾಮ್​, ಆದಿಪುರುಷ್​ ಸಿನಿಮಾ ಕೆಲಸಗಳಲ್ಲಿ ಪ್ರಭಾಸ್​ ಬ್ಯುಸಿ ಇದ್ದಾರೆ. ಅವರು ಪ್ರಶಾಂತ್ ನೀಲ್​ ಜೊತೆ ಮಾಡಲಿರುವ ಈ ಪೌರಾಣಿಕ ಚಿತ್ರ ಅವರ 25ನೇ ಸಿನಿಮಾ ಆಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಮಾತುಕಥೆಗಳು ನಡೆಯುತ್ತಿದ್ದು, ಚಿತ್ರತಂಡದವರಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

Follow us on

Related Stories

Most Read Stories

Click on your DTH Provider to Add TV9 Kannada