ಡೇಟಿಂಗ್​ ಆ್ಯಪ್​ನಲ್ಲಿ ಖ್ಯಾತ ನಿರ್ದೇಶಕನ ಮಗಳ ಫೇಕ್​ ಖಾತೆ; ತಪ್ಪಾಗಿ ತಿಳಿದ ಅಭಿಮಾನಿಗಳು ಮಾಡಿದ್ದೇನು?

TV9kannada Web Team

TV9kannada Web Team | Edited By: Rajesh Duggumane

Updated on: Jun 09, 2021 | 7:28 PM

ಡೇಟಿಂಗ್​ ಆ್ಯಪ್​ ಒಂದರಲ್ಲಿ ಆಲಿಯಾ ಕಶ್ಯಪ್​ ಅವರ ಫೇಕ್​ ಖಾತೆಯನ್ನು ತೆರೆಯಲಾಗಿದೆ. ಇದನ್ನು ನೋಡಿದ ಅನೇಕರು ಇದು ಆಲಿಯಾ ಅವರದ್ದೇ ಖಾತೆ ಎಂದು ತಪ್ಪಾಗಿ ಭಾವಿಸಿ ರಿಕ್ವೆಸ್ಟ್​ ಹಾಕಿದ್ದಾರೆ

ಡೇಟಿಂಗ್​ ಆ್ಯಪ್​ನಲ್ಲಿ ಖ್ಯಾತ ನಿರ್ದೇಶಕನ ಮಗಳ ಫೇಕ್​ ಖಾತೆ; ತಪ್ಪಾಗಿ ತಿಳಿದ ಅಭಿಮಾನಿಗಳು ಮಾಡಿದ್ದೇನು?
ಆಲಿಯಾ ಕಶ್ಯಪ್

ಬಾಲಿವುಡ್​ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಮಗಳು ಆಲಿಯಾ ಕಶ್ಯಪ್​ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್​​ಸ್ಟಾಗ್ರಾಂನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಅವರು, ಫೋಟೋ ಹಾಗೂ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೆ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಡೇಟಿಂಗ್​ ಆ್ಯಪ್.

ಡೇಟಿಂಗ್​ ಆ್ಯಪ್​ ಒಂದರಲ್ಲಿ ಆಲಿಯಾ ಕಶ್ಯಪ್​ ಅವರ ಫೇಕ್​ ಖಾತೆಯನ್ನು ತೆರೆಯಲಾಗಿದೆ. ಇದನ್ನು ನೋಡಿದ ಅನೇಕರು ಇದು ಆಲಿಯಾ ಅವರದ್ದೇ ಖಾತೆ ಎಂದು ತಪ್ಪಾಗಿ ಭಾವಿಸಿ ರಿಕ್ವೆಸ್ಟ್​ ಹಾಕಿದ್ದಾರೆ. ಇದು ಆಲಿಯಾ ಅವರ ಗಮನಕ್ಕೂ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ, ಈ ಬಗ್ಗೆ ಅಭಿಮಾನಿಗಳಿಗೆ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿ

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಆಲಿಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. OkCupid ಡೇಟಿಂಗ್​ ಆ್ಯಪ್​ನಲ್ಲಿ ನನ್ನ ನಕಲಿ ಖಾತೆ ತೆರಯಲಾಗಿದೆ. ಇದರ ಬಗ್ಗೆ ಸಾಕಷ್ಟು ಜನರು ನನಗೆ ಮಾಹಿತಿ ನೀಡಿದ್ದರು. ಹೀಗಾಗಿ, ಎಲ್ಲರೂ ಈ ಅಕೌಂಟ್​ ರಿಪೋರ್ಟ್​ ಮಾಡಿ ಎಂದು ಮನವಿ ಮಾಡಿದ್ದಾರೆ.

ಶೇನ್ ಗ್ರೆಗೊಯಿರ್​ ಜತೆ ಆಲಿಯಾ ಕಶ್ಯಪ್​ ರಿಲೇಶನ್​ಶಿಪ್​ನಲ್ಲಿದ್ದಾರೆ. ಅಮೆರಿಕದಲ್ಲಿ ಆಲಿಯಾ ಉದ್ಯಮ ಹೊಂದಿದ್ದಾರೆ. ಯೂಟ್ಯೂಬ್​ನಲ್ಲಿ ಇತ್ತೀಚೆಗೆ ವಿಡಿಯೋ ಅಪ್​ಲೋಡ್​ ಮಾಡಿದ್ದ ಆಲಿಯಾ ರಿಲೇಶನ್​ಶಿಪ್​ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೆ, ಮೊದಲ ಬಾರಿಗೆ ಶೇನ್ ಜತೆ ಕಿಸ್​ ಮಾಡುವಾಗ ತುಂಬಾನೇ ನರ್ವಸ್​ ಆಗಿದ್ದೆ ಎಂದಿದ್ದರು.

ಸ್ಟಾರ್​ ನಿರ್ದೇಶಕರು ಹಾಗೂ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದಲ್ಲ. ಬಾಲಿವುಡ್​ನಲ್ಲಿ ಸಾಕಷ್ಟು ಸ್ಟಾರ್​ ಕಿಡ್​ಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೇ ರೀತಿ ಆಲಿಯಾ ಕೂಡ ಚಿತ್ರರಂಗಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ಅನುರಾಗ್ ಕಶ್ಯಪ್​​, ಆಲಿಯಾ ಚಿತ್ರರಂಗಕ್ಕೆ ಬರುತ್ತಾರೆ ಎಂದರೆ ನನ್ನ ವಿರೋಧ ಇಲ್ಲ ಎಂದಿದ್ದರು.

ಇದನ್ನೂ ಓದಿ: ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆಗಳ ಐಟಿ ದಾಳಿ ವೇಳೆ ₹ 350 ಕೋಟಿ ತೆರಿಗೆ ವಂಚನೆ ಪತ್ತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada