Mayuri Kyatari: ಮೊದಲ ಬಾರಿಗೆ ಮಗುವಿನ ಕ್ಯೂಟ್ ಫೋಟೋ ಹಂಚಿಕೊಂಡ ನಟಿ ಮಯೂರಿ
ಕಿರುತೆರೆಯ ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಹೆಚ್ಚು ಖ್ಯಾತಿ ಪಡೆದ ಮಯೂರಿ, ನಂತರ ಸಿನಿಮಾಗೂ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದರು.
ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಪಡೆದಿರುವ ನಟಿ ಮಯೂರಿ ಮಾ.15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಇದೇ ಮೊದಲ ಬಾರಿಗೆ ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಖುಷಿಪಟ್ಟಿದ್ದಾರೆ.
15/03/2021 ನನ್ನ ಮಗ ಜನಿಸಿದ. ಅಂದು ನನ್ನ ಬದುಕೇ ಬದಲಾಗಿ ಹೋಯಿತು. ನನ್ನ ಮಗನೇ ಈಗ ನನಗೆ ಹೊಸ ಪ್ರಪಂಚ. ನನ್ನ ಮುದ್ದುಕಂದ ಆರವ್. ಆತ ಹುಟ್ಟಿ 15 ದಿನಗಳ ನಂತರ ತೆಗೆದ ಫೋಟೊಗಳು ಇವು ಎಂದು ಮಯೂರಿ ಬರೆದುಕೊಂಡಿದ್ದಾರೆ.
View this post on Instagram
ಸೆಲೆಬ್ರಿಟಿಗಳ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗುವುದು ಸಹಜ. ಮಯೂರಿ ಮಗನೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮಗನಿಗಾಗಿ ಮಯೂರಿ ಒಂದು ಹೊಸ ಇನ್ಸ್ಟಾಗ್ರಾಮ್ ಖಾತೆ ತೆರದಿದ್ದಾರೆ. starboii_1111 ಹೆಸರಿನ ಖಾತೆಯಲ್ಲಿ ಮಗನ ಕೈ ಬೆರಳಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಖಾತೆಯನ್ನು ಈಗಾಗಲೇ ಸಾವಿರಾರು ಜನರು ಫಾಲೋ ಮಾಡುತ್ತಿದ್ದಾರೆ.
ಕಿರುತೆರೆಯ ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಹೆಚ್ಚು ಖ್ಯಾತಿ ಪಡೆದ ಮಯೂರಿ, ನಂತರ ಸಿನಿಮಾಗೂ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದರು. ಇತ್ತೀಚೆಗೆ ಬಿಡುಗಡೆಯಾದ ‘ಪೊಗರು’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ತಂಗಿಯಾಗಿ ಅವರು ನಟಿಸಿದ್ದಾರೆ. 2020ರ ಜೂನ್ನಲ್ಲಿ ತಮ್ಮ ಬಹುಕಾಲದ ಗೆಳಯ ಅರುಣ್ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ಮಯೂರಿ ಹಸೆಮಣೆ ಏರಿದ್ದರು. ಈಗ ಅವರು ತಾಯಿಯಾದ ಸಂಭ್ರಮದಲ್ಲಿದ್ದಾರೆ. ಹಲವು ಸಿನಿಮಾ ಆಫರ್ಗಳು ಅವರ ಕೈಯಲ್ಲಿವೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ; ಮೊದಲ ದಿನವೇ ಮಗನಿಗೆ ಆಕರ್ಷಕ ಗಿಫ್ಟ್!
Published On - 5:12 pm, Wed, 9 June 21