ಪ್ರಶಾಂತ್ ನೀಲ್ ಸಂಭಾವನೆ ಎಷ್ಟು? ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಟಾರ್ ಡೈರೆಕ್ಟರ್

Prashanth Neel Remuneration: ಕೆ.ಜಿ.ಎಫ್. ಚಾಪ್ಟರ್ 2 ಇನ್ನೇನು ತೆರೆಕಾಣಲು ಬಹುಪಾಲು ತಯಾರಾಗಿದೆ. ಯಶ್, ಶ್ರೀನಿಧಿ ಶೆಟ್ಟಿ, ರವೀನಾ, ಸಂಜಯ್ ದತ್, ಪ್ರಕಾಶ್ ರಾಜ್ ಸಹಿತ ಹಲವು ಸ್ಟಾರ್​ಗಳು ಸಿನಿಮಾದ ಭಾಗವಾಗಿದ್ದಾರೆ.

ಪ್ರಶಾಂತ್ ನೀಲ್ ಸಂಭಾವನೆ ಎಷ್ಟು? ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಟಾರ್ ಡೈರೆಕ್ಟರ್
ಪ್ರಶಾಂತ್​​ ನೀಲ್​
Follow us
TV9 Web
| Updated By: Digi Tech Desk

Updated on:Jun 09, 2021 | 9:19 AM

ಸೌತ್ ಇಂಡಿಯನ್ ಸಿನಿಮಾದ ಟಾಪ್ ನಿರ್ದೇಶಕರು ಯಾರ್ಯಾರು ಎಂಬ ಪ್ರಶ್ನೆ ಬಂದರೆ ಮೊದಲ ಸಾಲಿನಲ್ಲಿ ಬರುವ ಹೆಸರುಗಳು ಎಸ್.ಎಸ್. ರಾಜಮೌಳಿ, ಶಂಕರ್ ಹಾಗೂ ನಮ್ಮ ಕನ್ನಡದ ಪ್ರಶಾಂತ್ ನೀಲ್. ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಭಾರತದಲ್ಲಿ ಮತ್ರವಲ್ಲ, ವಿದೇಶದಲ್ಲೂ ಖ್ಯಾತರಾಗಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಪಳಗಿಸುವ ಮತ್ತು ಕಥೆಯಲ್ಲೂ ಅದನ್ನು ಅಳವಡಿಸಿ ಮಿಂಚಿದ ಶಂಕರ್ ಎಂದರೆ ಎಲ್ಲರಿಗೂ ಗೌರವವಿದೆ. ಈಗ ಪ್ರಶಾಂತ್ ನೀಲ್ ಕೂಡ ಆ ಸಾಲಿಗೆ ಸೇರಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಾಯಕ ನಟನೆಯ, ಹೊಂಬಾಳೆ ಫಿಲಂಸ್ ನಿರ್ಮಾಣದ ಕೆ.ಜಿ.ಎಫ್. ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೆ.ಜಿ.ಎಫ್. ಸಿನಿಮಾದ ಭಾಗ 2 ಕೂಡ ತೆರೆಕಾಣಲು ತಯಾರಾಗಿದೆ. ಅದರ ಟ್ರೈಲರ್ ಯೂಟ್ಯೂಬ್ ವೀಕ್ಷಣೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಈಗ ಭಾರತೀಯ ಸಿನಿಮಾದ ಹಲವು ಸೂಪರ್ ಸ್ಟಾರ್​ಗಳು ಫಿದಾ ಆಗಿದ್ದಾರೆ. ನೀಲ್ ಖ್ಯಾತಿ ಭಾರತೀಯ ಸಿನಿಮಾ ವಲಯದಲ್ಲಿ ಹಬ್ಬಿದೆ.

ಕೆ.ಜಿ.ಎಫ್. ಚಾಪ್ಟರ್ 2 ಇನ್ನೇನು ತೆರೆಕಾಣಲು ಬಹುಪಾಲು ತಯಾರಾಗಿದೆ. ಯಶ್, ಶ್ರೀನಿಧಿ ಶೆಟ್ಟಿ, ರವೀನಾ, ಸಂಜಯ್ ದತ್, ಪ್ರಕಾಶ್ ರಾಜ್ ಸಹಿತ ಹಲವು ಸ್ಟಾರ್​ಗಳು ಸಿನಿಮಾದ ಭಾಗವಾಗಿದ್ದಾರೆ. ಯಂಗ್ ಅಂಡ್ ಎನರ್ಜಿಟಿಕ್ ನಟ ಪ್ರಭಾಸ್ ಹೀರೋ ಆಗಿ ನಟಿಸುವ ಮತ್ತೊಂದು ಹೊಸ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಸಲಾರ್ ಸಿನಿಮಾ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಜೂನಿಯರ್ ಎನ್​ಟಿಆರ್ ಜೊತೆಗೂ ಹೊಸ ಯೋಜನೆಗೆ ನೀಲ್ ಸಹಿ ಹಾಕಿದ್ದಾರೆ.

ಸಿನಿಮಾ ಇಂಡಸ್ಟ್ರಿಯ ಹೊಸ ಗುಲ್ಲಿನ ಪ್ರಕಾರ, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಪ್ರಶಾಂತ್ ನೀಲ್​ಗೆ ಭರ್ಜರಿ 15 ಕೋಟಿಯ ಚೆಕ್ ನೀಡಿ ಸ್ವಾಗತಿಸಿದೆ. ಈ ಮೂಲಕ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಕಂಡುಬರಲಿದ್ದಾರೆ.

ಇತ್ತೀಚೆಗೆ ಮಾಧ್ಯಮದ ಜೊತೆಗೆ ಮಾತನಾಡಿದ ಪ್ರಶಾಂತ್ ನೀಲ್, ತಮ್ಮ ಸಂಭಾವನೆಯ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ್ದಾರೆ. ಈಗ ನಾನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂದು ನನಗೆ ಅನಿಸುವುದಿಲ್ಲ. ಇದು ಚರ್ಚಿಸಬೇಕಾದ ವಿಚಾರ ಎಂದು ಕೂಡ ನಾನು ಅಂದುಕೊಂಡಿಲ್ಲ. ಅದು ನನ್ನ ವೈಯಕ್ತಿಕ ವಿಚಾರ ಎಂದಷ್ಟೇ ಹೇಳಿದ್ದಾರೆ. ಆದರೆ, ಸೂಪರ್ ಸಿನಿಮಾ ನೀಡಿದ ನಿರ್ದೇಶಕನ ಸಂಭಾವನೆಯ ಬಗ್ಗೆ ಗುಸುಗುಸುವಂತೂ ಸಿನಿಮಾ ವಲಯದಲ್ಲಿ ಸಾಕಷ್ಟು ಓಡಾಡುತ್ತಿದೆ. ಚರ್ಚಗೂ ಕಾರಣವಾಗಿದೆ.

ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇರಲ್ವಾ ನಾಯಕಿಗೆ ಪ್ರಾಮುಖ್ಯತೆ.. ನೋಡಿ ಈ ಸ್ಟೋರಿ

Published On - 9:33 pm, Tue, 8 June 21

ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ