ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

ನಿರ್ದೇಶಕ ಪ್ರಶಾಂತ್​ ನೀಲ್​ ಅವರು ವ್ಯಾಕ್ಸಿನ್​ ಪಡೆಯುತ್ತಿರುವ ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವರ ಪೋಸ್​ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ
ಕೊರೊನಾ ಲಸಿಕೆ ಪಡೆದ ಪ್ರಶಾಂತ್​ ನೀಲ್​ ಫೋಟೋ ವೈರಲ್​
Follow us
ಮದನ್​ ಕುಮಾರ್​
|

Updated on: Jun 08, 2021 | 5:23 PM

ಭಾರತೀಯ ಚಿತ್ರರಂಗದ ಸೆನ್ಸೇಷನಲ್​ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್​ ನೀಲ್​ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ‘ಕೆಜಿಎಫ್​’ ಚಿತ್ರದ ಯಶಸ್ಸಿನ ನಂತರ ಅವರಿಗೆ ದೇಶಾದ್ಯಂತ ಖ್ಯಾತಿ ಹೆಚ್ಚಿದೆ. ಈಗ ಅವರು ಸಿನಿಮಾಗೆ ಸಂಬಂಧವೇ ಇಲ್ಲದ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಕೊರೊನಾ ಲಸಿಕೆ ಪಡೆಯುತ್ತಿರುವ ಪ್ರಶಾಂತ್​ ನೀಲ್​ ಅವರ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಪ್ರಶಾಂತ್​ ನೀಲ್​ ಅವರ ಇನ್ನೊಂದು ಮುಖ ಕಂಡ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ದೇಶದೆಲ್ಲೆಡೆ ವ್ಯಾಪಿಸಿರುವ ಕೊರೊನಾ ವೈರಸ್​ ಹಿಮ್ಮೆಟ್ಟಿಸಲು ವ್ಯಾಕ್ಸಿನ್​ ಪಡೆಯುವುದೇ ಸೂಕ್ತ ಅಸ್ತ್ರ. ಹಾಗಾಗಿ ಎಲ್ಲರೂ ಮುಗಿಬಿದ್ದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವುದು ಒಂದು ಬಗೆಯ ಟ್ರೆಂಡ್​ ಆಗಿದೆ. ಪ್ರಶಾಂತ್​ ನೀಲ್​ ಕೂಡ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಫೋಟೋ ಹಂಚಿಕೊಂಡರು. ಆದರೆ ಆ ಫೋಟೋದಲ್ಲಿ ಅವರ ಪೋಸ್​ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಲಸಿಕೆ ಪಡೆಯುವಾಗ ನರ್ಸ್​ ಮುಖವನ್ನೇ ನೋಡುತ್ತಿದ್ದ ಯುವಕನೊಬ್ಬನ ಫೋಟೋ ಇತ್ತೀಚೆಗೆ ವೈರಲ್​ ಆಗಿತ್ತು. ಅದೇ ರೀತಿ ಈಗ ಪ್ರಶಾಂತ್​ ನೀಲ್​ ಫೋಟೋ ಸಹ ವೈರಲ್​ ಆಗಿದೆ.

ನರ್ಸ್​ ಲಸಿಕೆ ಚುಚ್ಚುತ್ತಿದ್ದರೆ, ಪ್ರಶಾಂತ್​ ನೀಲ್​ ಮುಖ ಮುಚ್ಚಿಕೊಂಡಿದ್ದಾರೆ. ಇಷ್ಟು ಚಿಕ್ಕ ಇಂಜೆಕ್ಷನ್​ಗೆ ಹೆದರಿಕೊಂಡು ಪ್ರಶಾಂತ್​ ನೀಲ್​ ಹೀಗೆ ಮಾಡಿದ್ದಾರಾ ಅಥವಾ ನರ್ಸ್​ ಕಂಡು ಅವರು ನಾಚಿ ನೀರಾಗಿದ್ದಾರಾ? ಇಂಥ ಹಲವು ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಫೋಟೋಗೆ ಕಮೆಂಟ್​ ಮಾಡುತ್ತಿರುವ ಜನರು ತಮಾಷೆಗೆ ಪ್ರಶಾಂತ್​ ನೀಲ್​ ಕಾಲೆಳೆಯುತ್ತಿದ್ದಾರೆ.

‘ಕೆಜಿಎಫ್​’ ಸಿನಿಮಾದಲ್ಲಿ ಅಷ್ಟೆಲ್ಲ ಕ್ರೌರ್ಯ ತೋರಿಸುವ ನೀವು ಇಂಜೆಕ್ಷನ್​ಗೆ ಭಯಪಡುತ್ತೀರಲ್ಲ. ಸಿನಿಮಾದಲ್ಲಿ ವಿಲನ್​ಗಳನ್ನು ಚಚ್ಚಿಹಾಕಿದ್ದೇನೆ ಎಂದು ಬೀಗಬೇಡ. ವ್ಯಾಕ್ಸಿನ್​ ಪಡೆಯುವಾಗ ಹೆದರಿಕೊಂಡಿದ್ದನ್ನು ನಾನು ನೋಡಿದ್ದೇನೆ ಎಂಬಿತ್ಯಾದಿ ಕಮೆಂಟ್​ಗಳು ಬರುತ್ತಿವೆ. ಅಲ್ಲದೆ, ಈ ಫೋಟೋ ಇಟ್ಟುಕೊಂಡು ಹಲವು ಮೀಮ್​ಗಳನ್ನು ಮಾಡಲಾಗುತ್ತಿದೆ.

‘ಕೊನೆಗೂ ವಾಕ್ಸಿನ್​ ಪಡೆದುಕೊಂಡೆ. ನೀವು ಇನ್ನೂ ಪಡೆದುಕೊಳ್ಳದೇ ಇದ್ದರೆ ದಯವಿಟ್ಟು ಸ್ಲಾಟ್​ ಬುಕ್​ ಮಾಡಿಕೊಂಡು ಫ್ಯಾಮಿಲಿ ಜೊತೆ ಲಸಿಕೆ ಹಾಕಿಸಿಕೊಳ್ಳಿ’ ಎಂದು ಎಲ್ಲರಲ್ಲೂ ಪ್ರಶಾಂತ್​ ನೀಲ್​ ಮನವಿ ಮಾಡಿದ್ದಾರೆ. ಸದ್ಯ ಅವರು ‘ಕೆಜಿಎಫ್: ಚಾಪ್ಟರ್​​ 2’ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಲಾರ್​ ಸಿನಿಮಾದ ಮೇಲೂ ಗಮನ ಹರಿಸಿದ್ದಾರೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ