AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

Jr NTR: ಪ್ರಶಾಂತ್​ ನೀಲ್​ ಹುಟ್ಟುಹಬ್ಬದ ಪ್ರಯುಕ್ತ ಟ್ವೀಟ್​ ಮಾಡಿರುವ ಜ್ಯೂ. ಎನ್​ಟಿಆರ್​ ಅವರು ತಮ್ಮ ಎಕ್ಸೈಟ್​ಮೆಂಟ್​ ಹಂಚಿಕೊಂಡಿದ್ದಾರೆ. ಈ ಘಟಾನುಘಟಿಗಳಿಬ್ಬರ ಕಾಂಬಿನೇಷನ್​ನ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ
ಪ್ರಶಾಂತ್​ ನೀಲ್​, ಜ್ಯೂ. ಎನ್​ಟಿಆರ್​
ಮದನ್​ ಕುಮಾರ್​
|

Updated on: Jun 04, 2021 | 12:30 PM

Share

ಕನ್ನಡ ಚಿತ್ರರಂಗಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೊಸ ಮೆರುಗು ತಂದುಕೊಟ್ಟ ನಿರ್ದೇಶಕ ಪ್ರಶಾಂತ್​ ನೀಲ್​ ಅವರಿಗೆ ಇಂದು (ಜೂ.4) ಜನ್ಮದಿನದ ಸಂಭ್ರಮ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಪರಭಾಷೆ ಮಂದಿ ಕೂಡ ಅವರ ಜೊತೆ ಕೆಲಸ ಮಾಡಲು ಕಾದು ಕುಳಿತಿದ್ದಾರೆ. ಸದ್ಯ ಲಾಕ್​ಡೌನ್​ ಇರುವುದರಿಂದ ಪ್ರಶಾಂತ್ ನೀಲ್​ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಸೋಶಿಯಲ್​ ಮೀಡಿಯಾ ಮೂಲಕವೇ ಎಲ್ಲರೂ ಅವರಿಗೆ ಶುಭ ಕೂರುತ್ತಿದ್ದಾರೆ. ಟಾಲಿವುಡ್​ನ ಸ್ಟಾರ್​ ಕಲಾವಿದ ಜ್ಯೂ. ಎನ್​ಟಿಆರ್​ ಕೂಡ ಪ್ರಶಾಂತ್​ ನೀಲ್​ಗೆ ವಿಶ್​ ಮಾಡಿದ್ದಾರೆ.

‘ಕೆಜಿಎಫ್​’ ಸೂಪರ್​ ಹಿಟ್​ ಆದ ಬಳಿಕ ಟಾಲಿವುಡ್​ನಿಂದ ಪ್ರಶಾಂತ್​ ನೀಲ್​ಗೆ ಒಳ್ಳೊಳ್ಳೆಯ ಆಫರ್​ಗಳು ಬರಲು ಆರಂಭಿಸಿದವು. ಈಗಾಗಲೇ ಅವರು ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾ ಮಾಡುತ್ತಿದ್ದಾರೆ. ಪ್ರಶಾಂತ್​ ನೀಲ್​ ಮತ್ತು ಜ್ಯೂ. ಎನ್​ಟಿಆರ್​ ಕಾಂಬಿನೇಷನ್​ನಲ್ಲಿ ಒಂದು ಸಿನಿಮಾ ಸೆಟ್ಟೇರಬೇಕಿದೆ. ಮೈತ್ರಿ ಮೂವೀ ಮೇಕರ್ಸ್​​ ಸಂಸ್ಥೆಯಿಂದ ಆ ಚಿತ್ರ ನಿರ್ಮಾಣ ಆಗಲಿದೆ. ಪ್ರಶಾಂತ್ ನೀಲ್​ ಬಗ್ಗೆ ಅಭಿಮಾನ ಹೊಂದಿರುವ ಜ್ಯೂ. ಎನ್​ಟಿಆರ್​ ಅವರು ಆದಷ್ಟು ಬೇಗ ಸಿನಿಮಾ ಶುರು ಮಾಡಲು ಕಾದಿದ್ದಾರೆ.

ಪ್ರಶಾಂತ್​ ನೀಲ್​ ಜನ್ಮದಿನ ಪ್ರಯುಕ್ತ ಟ್ವೀಟ್​ ಮಾಡಿರುವ ಜ್ಯೂ. ಎನ್​ಟಿಆರ್​ ಅವರು ತಮ್ಮ ಎಕ್ಸೈಟ್​ಮೆಂಟ್​ ಹಂಚಿಕೊಂಡಿದ್ದಾರೆ. ‘ಜನ್ಮದಿನದ ಶುಭಾಶಯಗಳು ಸಹೋದರನೇ. ಎಂದಿನಂತೆ ಅದ್ಭುತವಾಗಿರಿ. ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿದ್ದಾರೆ. ಈ ಘಟಾನುಘಟಿಗಳಿಬ್ಬರ ಕಾಂಬಿನೇಷನ್​ನ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಯಾವಾಗ ಈ ಸಿನಿಮಾ ಸೆಟ್ಟೇರಲಿದೆಯೋ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಪ್ರಶಾಂತ್​ ನೀಲ್​ ಸಿನಿಮಾಗಳು ಎಂದರೆ ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬರುತ್ತವೆ. ಜ್ಯೂ. ಎನ್​ಟಿಆರ್​ ಜೊತೆ ಅವರು ಮಾಡಲಿರುವ ಚಿತ್ರಕ್ಕೆ ಟಾಲಿವುಡ್​ನ ಜನಪ್ರಿಯ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್​ ಬಂಡವಾಳ ಹೂಡಲಿದೆ. ಹಾಗಾಗಿ ಈ ಸಿನಿಮಾ ಕೂಡ ಅದ್ದೂರಿ ಬಜೆಟ್​ನಲ್ಲಿ ತಯಾರಾಗಲಿರುವುದು ಗ್ಯಾರಂಟಿ. ಸದ್ಯ ರಾಕಿಂಗ್​ ಸ್ಟಾರ್​ ಯಶ್​ ಜೊತೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಪ್ರಶಾಂತ್​ ನೀಲ್​ ಬ್ಯುಸಿ ಆಗಿದ್ದಾರೆ. ‘ಸಲಾರ್​’ ಸಿನಿಮಾದ ಕಡೆಗೂ ಅವರು ಗಮನ ನೀಡುತ್ತಿದ್ದಾರೆ.

ಸೆಲೆಬ್ರಿಟಿಗಳು ಮಾತ್ರವಲ್ಲದೇ ಅಭಿಮಾನಿಗಳು, ಸ್ನೇಹಿತರು ಮತ್ತು ನಿರ್ಮಾಣ ಸಂಸ್ಥೆಗಳಿಂದಲೂ ಪ್ರಶಾಂತ್​ ನೀಲ್​ಗೆ ಜನ್ಮದಿನದ ಶುಭಾಶಯಗಳು ಹರಿದುಬರುತ್ತಿವೆ. ‘ಕೆಜಿಎಫ್​’ ಸಿನಿಮಾ ನಿರ್ಮಿಸಿರುವ ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್​ ಹೌಸ ಹೊಂಬಾಳೆ ಫಿಲ್ಮ್ಸ್​ ಕೂಡ ಅವರಿಗೆ ವಿಶ್​ ಮಾಡಿದೆ.

ಇದನ್ನೂ ಓದಿ:

ಬಯಲಾಯ್ತು ಪ್ರಭಾಸ್​-ಪ್ರಶಾಂತ್​ ನೀಲ್​ ‘ಸಲಾರ್’ ಚಿತ್ರದ ಇನ್ನೊಂದು ಸೀಕ್ರೆಟ್​

ಸೆಟ್ಟೇರುವ ಮೊದಲೇ ಪ್ರಶಾಂತ್​ ನೀಲ್- ಜ್ಯೂ. ಎನ್​​ಟಿಆರ್​ ಸಿನಿಮಾದ ಕಥೆ ಲೀಕ್?

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು