ಸೆಟ್ಟೇರುವ ಮೊದಲೇ ಪ್ರಶಾಂತ್​ ನೀಲ್- ಜ್ಯೂ. ಎನ್​​ಟಿಆರ್​ ಸಿನಿಮಾದ ಕಥೆ ಲೀಕ್?

ಸೆಟ್ಟೇರುವ ಮೊದಲೇ ಪ್ರಶಾಂತ್​ ನೀಲ್- ಜ್ಯೂ. ಎನ್​​ಟಿಆರ್​ ಸಿನಿಮಾದ ಕಥೆ ಲೀಕ್?
ಜ್ಯೂ. ಎನ್​ಟಿಆರ್​-ಪ್ರಶಾಂತ್​ ನೀಲ್

ಟಾಲಿವುಡ್​ ಸ್ಟಾರ್​ ನಟ ಜ್ಯೂ. ಎನ್​ಟಿಆರ್​ ಮೇ 26ರಂದು 38ನೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ವಿಶೇಷ ದಿನದಂದು ಅವರ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಿತ್ತು.

Rajesh Duggumane

|

Jun 01, 2021 | 8:25 PM

‘ಕೆಜಿಎಫ್​’ ಸರಣಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಪ್ರಶಾಂತ್​ ನೀಲ್​ಗೆ ಬೇಡಿಕೆ ಹೆಚ್ಚಿದೆ.  ಪರಭಾಷೆಯ ಸ್ಟಾರ್​ ಹೀರೋಗಳು ಹಾಗೂ ನಿರ್ಮಾಪಕರು ಪ್ರಶಾಂತ್​ ಜತೆ ಕೆಲಸ ಮಾಡೋಕೆ ಕಾದು ಕೂತಿದ್ದಾರೆ. ಈಗಾಗಲೇ ಅವರು ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸಲಾರ್’​ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೀಗಿರುವಾಗಲೇ ಅವರು ಜ್ಯೂ.ಎನ್​ಟಿಆರ್​ ಜತೆ ಕೈ ಜೋಡಿಸಿದ್ದಾರೆ. ಅಚ್ಚರಿ ಎಂದರೆ ಸಿನಿಮಾದ ಒಂದೆಳೆ ಈಗ ಲೀಕ್​ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಟಾಲಿವುಡ್​ ಸ್ಟಾರ್​ ನಟ ಜ್ಯೂ. ಎನ್​ಟಿಆರ್​ ಮೇ 26ರಂದು 38ನೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ವಿಶೇಷ ದಿನದಂದು ಅವರ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಿತ್ತು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಬಗ್ಗೆ ಟ್ವೀಟ್​ ಮಾಡಿ ಪ್ರಶಾಂತ್​ ನೀಲ್​-ಜ್ಯೂ. ಎನ್​ಟಿಆರ್ ಒಟ್ಟಿಗೆ ಕೆಲಸ ಮಾಡುವ ವಿಚಾರವನ್ನು ಅಧಿಕೃತ ಮಾಡಿತ್ತು.

ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಪ್ರಕಾರ, ಜ್ಯೂ. ಎನ್​ಟಿಆರ್​ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾದ ಕಥೆ ಭಾರತ-ಪಾಕ್​ ಗಡಿ​ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್​ಗೆ ಚಿತ್ರತಂಡ ಗಡಿ ಭಾಗಕ್ಕೆ ತೆರಳಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಈ ರೀತಿಯ ಕಥೆಯಲ್ಲಿ ಜ್ಯೂ.ಎನ್​ಟಿಆರ್​ ಈ ಮೊದಲು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಅವರ ಹೊಸ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅಂದಹಾಗೆ, ಸಿನಿಮಾ ಕೆಲಸಗಳು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಜ್ಯೂ. ಎನ್​ಟಿಆರ್​ ಸದ್ಯ, ಆರ್​ಆರ್​ಆರ್​ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಎಸ್​.ಎಸ್​. ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು, ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​-2 ರಿಲೀಸ್​ಗೆ ರೆಡಿ ಇದೆ. ಸಲಾರ್ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ.

ಇದನ್ನೂ ಓದಿ: ಎನ್​ಟಿಆರ್​ಗೆ ಭಾರತ ರತ್ನ ಕೊಡಿ; ಲೆಜೆಂಡರಿ ನಟನ ಜನ್ಮದಿನದಂದು ಬೇಡಿಕೆಯಿಟ್ಟ ಮೆಗಾಸ್ಟಾರ್​ ಚಿರಂಜೀವಿ

Follow us on

Related Stories

Most Read Stories

Click on your DTH Provider to Add TV9 Kannada