ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಪತ್ರಕರ್ತನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಸಿನಿಮಾ ರಂಗದ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ಅವರಿಗೆ ಈಗ ಡಿಕೆ ರವಿ ಪಾತ್ರದ ಆಫರ್ ಸಿಕ್ಕಿದೆ. ಆದರೆ ನಟಿಸಬೇಕೋ ಬೇಡವೋ ಎಂಬ ಬಗ್ಗೆ ಅವರಿನ್ನೂ ತೀರ್ಮಾನ ತೆಗೆದುಕೊಂಡಿಲ್ಲ.
‘ಸಾ ರಾ ಮಹೇಶೂ ಡಿಕೆ ರವಿ ಪಿಕ್ಚರ್ ತಗೀತಾರಂತೆ. ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಹೊಸ ಡೈರೆಕ್ಟರೊಬ್ಬರು ಡಿ.ಕೆ. ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಎರಡು ಕಂಡಿಷನ್ ಹಾಕಿದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ? ಇನ್ನೊಂದು bxjwoaabxಹೊಝಖಿಧಟಿ#*%833 (ದುಡ್ಡಲ್ಲ). ನೋಡಣ.. ಮುಂದಾ…’ ಎಂದು ಚಕ್ರವರ್ತಿ ಚಂದ್ರಚೂಡ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಆ ಎರಡನೇ ಕಂಡೀಷನ್ ಏನು ಎಂಬುದನ್ನು ಅವರು ನಿಗೂಢವಾಗಿ ಇಟ್ಟಿದ್ದಾರೆ. ಸಿನಿಮಾ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಕೂಡ ಜನರಲ್ಲಿ ಮೂಡಿದೆ.
ಚಕ್ರವರ್ತಿ ಚಂದ್ರಚೂಡ್ ಅವರ ಈ ಪೋಸ್ಟ್ ಕಂಡು ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ಸೂಕ್ತ ಆಯ್ಕೆ ಎಂದು ಕೆಲವರು ಹೇಳಿದ್ದಾರೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಈ ಸಿನಿಮಾ ಮಾಡಬೇಡಿ. ರಾಜಕೀಯ ಕೆಸರೆರೆಚಾಟದಲ್ಲಿ ನಿಮ್ಮ ಹೆಸರು ಬೇಡ. ಒಳ್ಳೆಯ ಸಂದೇಶ ಇರುವ ಪಾತ್ರಗಳನ್ನು ಮಾಡಿ. ಆದಷ್ಟು ಜಾಗ್ರತೆ ಇರಲಿ. ಪರಿಸ್ಥಿತಿ ಸರಿಯಿಲ್ಲ’ ಎಂಬಿತ್ಯಾದಿ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ:
Akshatha Pandavapura : ರೋಹಿಣಿ ಸಿಂಧೂರಿ ಬಯೋಪಿಕ್ ಬಗ್ಗೆ ಅಕ್ಷತಾ ಪಾಂಡವರಪುರ ಮಾತು
ರೋಹಿಣಿ ಸಿಂಧೂರಿ ಬಯೋಪಿಕ್ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ