- Kannada News Entertainment Sandalwood Danish Sait: ಸಿಂಪಲ್ ಆಗಿ ಮದುವೆ ಆದ ದಾನಿಶ್ ಸೇಠ್; ಇಲ್ಲಿವೆ ಫೋಟೋಗಳು
Danish Sait: ಸಿಂಪಲ್ ಆಗಿ ಮದುವೆ ಆದ ದಾನಿಶ್ ಸೇಠ್; ಇಲ್ಲಿವೆ ಫೋಟೋಗಳು
ಕಾಮಿಡಿಯನ್ ಹಾಗೂ ನಟ ದಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜತೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಜೂನ್ 9ರಂದು ಮದುವೆ ನೋಂದಣಿ ಮಾಡಿಸಿಕೊಂಡರೆ, ಜೂನ್ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
Updated on: Jun 10, 2021 | 4:55 PM

ಕಾಮಿಡಿಯನ್ ಹಾಗೂ ನಟ ದಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜತೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಜೂನ್ 9ರಂದು ಮದುವೆ ನೋಂದಣಿ ಮಾಡಿಸಿಕೊಂಡರೆ, ಜೂನ್ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಈ ಬಗ್ಗೆ ದಾನಿಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಾನು ಮತ್ತು ಅನ್ಯಾ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್ 9ರಂದು ನಾವು ಮದುವೆ ನೋಂದಣಿ ಮಾಡಿಕೊಂಡಿದ್ದೆವು. ನಮ್ಮನ್ನು ನೀವು ಆಶೀರ್ವದಿಸಿ’ ಎಂದು ದಾನಿಶ್ ಬರೆದುಕೊಂಡಿದ್ದಾರೆ. ಜತೆಗೆ,ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ನಿರ್ದೇಶಕ ಸಾದ್ ಖಾನ್ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ‘ಇಬ್ಬರನ್ನೂ ನೋಡಿ ಖುಷಿ ಆಗುತ್ತಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾನೇ ಇಷ್ಟಪಡುತ್ತಿದ್ದಾರೆ’ ಎಂದು ಸಾದ್ ಹೇಳಿಕೊಂಡಿರುವುದಾಗಿ ಆಂಗ್ಲ ಮಾಧ್ಯಮ ವರದಿ ಮಾಡಿದೆ. ಇನ್ನು, ಈ ಪೋಸ್ಟ್ ನೋಡಿದ ಅನೇಕರು ಈ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಇವರ ವೈವಾಹಿಕ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ.

2020ರ ಡಿಸೆಂಬರ್ 11ರಂದು ದಾನಿಶ್ ತಮ್ಮ ರಿಲೇಶನ್ಶಿಪ್ ಬಗ್ಗೆ ಹೇಳಿಕೊಂಡಿದ್ದರು. ‘ಅವಳು ಯೆಸ್ ಎಂದಳು. ನಿನ್ನ ಉಳಿದ ಜೀವನವನ್ನು ನನ್ನ ಜತೆ ಕಳೆಯೋಕೆ ನಿರ್ಧರಿಸಿದ್ದಕ್ಕೆ ಧನ್ಯವಾದಗಳು’ ಎಂದು ಅನ್ಯಾ ರಾಘವನ್ ಫೋಟೋವನ್ನು ದಾನಿಶ್ ಪೋಸ್ಟ್ ಮಾಡಿದ್ದರು.

ದಾನಿಶ್, ಕನ್ನಡದ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಅವರು ಆರ್ಸಿಬಿ ಇನ್ಸೈಡರ್ ಕೂಡ ಹೌದು.

ಅನ್ಯಾ ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಮುಂಬೈನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.



















