AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?

Shruti Haasan: ಸಾಮಾನ್ಯವಾಗಿ ಅಪ್ಪ-ಅಮ್ಮ ಬೇರಾದರೆ ಮಕ್ಕಳಿಗೆ ನೋವಾಗುತ್ತದೆ. ಆದರೆ ಶ್ರುತಿ ಹಾಸನ್​ ವಿಚಾರದಲ್ಲಿ ಅದು ಉಲ್ಟಾ ಆಯಿತು. ಯಾಕೆಂದರೆ, ತಂದೆ-ತಾಯಿ ಡಿವೋರ್ಸ್​ ಆಗಬೇಕು ಎಂಬುದೇ ಅವರ ಬಯಕೆ ಆಗಿತ್ತು.

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?
ಸಾರಿಕಾ, ಕಮಲ್​ ಹಾಸನ್​, ಶ್ರುತಿ ಹಾಸನ್​
ಮದನ್​ ಕುಮಾರ್​
|

Updated on: May 25, 2021 | 9:22 AM

Share

ಭಾರತೀಯ ಚಿತ್ರರಂಗದಲ್ಲಿ ನಟಿ ಶ್ರುತಿ ಹಾಸನ್​ ಯಶಸ್ವಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ನಟರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಈಗಲೂ ಅವರಿಗೆ ದೊಡ್ಡ ಮಟ್ಟದ ಡಿಮ್ಯಾಂಡ್​ ಇದೆ. ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸಲಾರ್​ ಚಿತ್ರಕ್ಕೆ ಅವರೇ ನಾಯಕಿ. ವೃತ್ತಿಜೀವನದಲ್ಲಿ ಇಷ್ಟೆಲ್ಲ ಯಶಸ್ಸು ಕಂಡಿರುವ ಅವರು ವೈಯಕ್ತಿಕ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಎದುರಿಸಿದ್ದಾರೆ. ಅವರ ತಂದೆ ಕಮಲ್​ ಹಾಸನ್​ ಕೂಡ ಸಂಸಾರದ ತಾಪತ್ರಯಕ್ಕೆ ಸಿಲುಕಿದ್ದರು. ತಂದೆ-ತಾಯಿ ಡಿವೋರ್ಸ್​ ಪಡೆದುಕೊಂಡಾಗ ಶ್ರುತಿ ಹಾಸನ್​ ಹೆಚ್ಚು ಸಂತಸಪಟ್ಟಿದ್ದರು!

ಅಪ್ಪ-ಅಮ್ಮನ ವಿಚ್ಛೇದನದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಶ್ರುತಿ ಹಾಸನ್​ ಈಗ ಬಾಯಿ ಬಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಸಲಾರ್​’ ನಟಿ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. 1988ರಲ್ಲಿ ನಟಿ ಸಾರಿಕಾ ಜೊತೆ ಕಮಲ್​ ಹಾಸನ್​ ಮದುವೆ ನಡೆಯಿತು. ಹಲವು ವರ್ಷಗಳ ಕಾಲ ಖುಷಿಯಿಂದ ಸಹಬಾಳ್ವೆ ನಡೆಸಿದ ಅವರಿಗೆ ಇಬ್ಬರು ಹೆಣ್ಣುಮಕ್ಕಳು (ಶ್ರುತಿ ಹಾಸನ್​ ಮತ್ತು ಅಕ್ಷರಾ ಹಾಸನ್) ಜನಿಸಿದರು. ​ಆದರೆ 2004ರಲ್ಲಿ ಕಮಲ್​ ಹಾಸನ್​ ಹಾಗೂ ಸಾರಿಕಾ ವಿಚ್ಛೇದನ ಪಡೆದುಕೊಂಡರು. ಈಗ ಶ್ರುತಿ ಹಾಸನ್​ ಸಂಭ್ರಮಿಸಿದ್ದರು ಎಂದರೆ ನಂಬಲೇಬೇಕು.

ಸಾಮಾನ್ಯವಾಗಿ ಅಪ್ಪ-ಅಮ್ಮ ಬೇರಾದರೆ ಮಕ್ಕಳಿಗೆ ನೋವಾಗುತ್ತದೆ. ಆದರೆ ಶ್ರುತಿ ಹಾಸನ್​ ವಿಚಾರದಲ್ಲಿ ಅದು ಉಲ್ಟಾ ಆಯಿತು. ಯಾಕೆಂದರೆ, ತಂದೆ-ತಾಯಿ ಡಿವೋರ್ಸ್​ ಆಗಬೇಕು ಎಂಬುದೇ ಅವರ ಬಯಕೆ ಆಗಿತ್ತು. ‘ಪರಸ್ಪರ ಹೊಂದಾಣಿಕೆ ಇಲ್ಲದ ಇಬ್ಬರು ದೂರಾಗುವುದೇ ಒಳಿತು. ಅಪ್ಪ-ಅಮ್ಮ ಅವರವರ ಬದುಕನ್ನು ಪ್ರತ್ಯೇಕವಾಗಿ ಕಟ್ಟಿಕೊಳ್ಳುತ್ತಾರೆ ಎಂದಾಗ ನನಗೆ ಖುಷಿ ಆಯಿತು. ವಿಚ್ಛೇದನದ ನಂತರವೂ ಅವರು ನಮಗೆ ಒಳ್ಳೆಯ ಪಾಲಕರಾಗಿದ್ದರು’ ಎಂದು ಶ್ರುತಿ ಹಾಸನ್​ ಹೇಳಿದ್ದಾರೆ.

‘ಅಪ್ಪನ ಜೊತೆಗೆ ನಾನು ಹೆಚ್ಚು ಆಪ್ತವಾಗಿದ್ದೆ. ಅಮ್ಮ ಕೂಡ ಚೆನ್ನಾಗಿದ್ದಾರೆ. ಇಂದಿಗೂ ಅವರು ನಮ್ಮ ಬದುಕಿನ ಭಾಗವಾಗಿದ್ದಾರೆ. ಅವರಿಬ್ಬರ ವಿಚ್ಛೇದನದಿಂದ ಒಳ್ಳೆಯದೇ ಆಯಿತು’ ಎಂಬುದು ಶ್ರುತಿ ಹಾಸನ್​ ಮಾತುಗಳು. ಈ ವರ್ಷ ತೆರೆಕಂಡ ‘ವಕೀಲ್​ ಸಾಬ್’​ ಸಿನಿಮಾದಲ್ಲಿ ಶ್ರುತಿ ಅವರು ಪವನ್​ ಕಲ್ಯಾಣ್​ ಜೊತೆಗೆ ನಟಿಸಿದ್ದರು. ಈಗ ಅವರು ಬಹುನಿರೀಕ್ಷಿತ ‘ಸಲಾರ್’​ ಸಿನಿಮಾದ ಭಾಗವಾಗಿದ್ದಾರೆ. ಲಾಕ್​ಡೌನ್​ ಕಾರಣದಿಂದ ಸಲಾರ್​ ಚಿತ್ರದ ಕೆಲಸಗಳು ನಿಂತಿವೆ.

ಇದನ್ನೂ ಓದಿ:

ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

Shruti Haasan: ಬಾಯ್​ಫ್ರೆಂಡ್​ ಜೊತೆ ಕಮಲ್​ ಹಾಸನ್​ ಪುತ್ರಿ ಶ್ರುತಿ ಮೋಜು ಮಸ್ತಿ; ಫೋಟೋ ವೈರಲ್​

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More