ಸೀರೆಯುಟ್ಟು ಸಖತ್​ ಆಗಿ ಹಾಡಿಗೆ ಹೆಜ್ಜೆ ಹಾಕಿದ ನಟಿ: ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದ್ದೇ ಹವಾ

ಗುಲಾಬಿ ಬಣ್ಣದ ಸೀರೆ ತೊಟ್ಟು ಹಾಡಿಗೆ ಹೆಜ್ಜೆ ಹಾಕಿದ ಶ್ವೇತಾ ಶಿಂಧೆ ಅದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಧಾರಣವಾಗಿ ನಟಿಮಣಿಯರು ಆಧುನಿಕ ಶೈಲಿಯ ಉಡುಪುಗಳನ್ನು ತೊಟ್ಟು ನೃತ್ಯ ಮಾಡುವುದೇ ಹೆಚ್ಚೆಚ್ಚು ಕಾಣಸಿಗುವ ಸಂದರ್ಭದಲ್ಲಿ ಇವರು ಸೀರೆ ತೊಟ್ಟು ಕುಣಿದಿರುವುದು ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ.

ಸೀರೆಯುಟ್ಟು ಸಖತ್​ ಆಗಿ ಹಾಡಿಗೆ ಹೆಜ್ಜೆ ಹಾಕಿದ ನಟಿ: ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದ್ದೇ ಹವಾ
ಶ್ವೇತಾ ಶಿಂಧೆ

ಮುಂಬೈ: ಕೊರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ವಿಧಿಸಿದ ನಂತರ ಹಾಡಬೇಕೆಂದರೂ, ಕುಣಿದು ಕುಪ್ಪಳಿಸಬೇಕೆಂದರೂ ಮನೆಯೊಳಗೇ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು. ಆದರೆ, ಆ ಖುಷಿಗಳನ್ನೆಲ್ಲಾ ಹಂಚಿಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆ ಒದಗಿಸಿಕೊಟ್ಟಿರುವುದರಿಂದ ಬಹುತೇಕರು ತಮ್ಮ ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಹೆಜ್ಜೆ ಹಾಕಿ, ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದ ನಟ, ನಟಿಯರೂ ಈಗ ಈ ವೇದಿಕೆಗಳ ಮೂಲಕವೇ ರಂಜಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮರಾಠಿಯ ಖ್ಯಾತ ನಟಿ ಶ್ವೇತಾ ಶಿಂಧೆ ಹಂಚಿಕೊಂಡ ವಿಡಿಯೋ ಒಂದು ಈಗ ಎಲ್ಲರ ಮನಗೆದ್ದು ವೈರಲ್ ಆಗುತ್ತಿದೆ.

ಗುಲಾಬಿ ಬಣ್ಣದ ಸೀರೆ ತೊಟ್ಟು ಹಾಡಿಗೆ ಹೆಜ್ಜೆ ಹಾಕಿದ ಶ್ವೇತಾ ಶಿಂಧೆ ಅದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಧಾರಣವಾಗಿ ನಟಿಮಣಿಯರು ಆಧುನಿಕ ಶೈಲಿಯ ಉಡುಪುಗಳನ್ನು ತೊಟ್ಟು ನೃತ್ಯ ಮಾಡುವುದೇ ಹೆಚ್ಚೆಚ್ಚು ಕಾಣಸಿಗುವ ಸಂದರ್ಭದಲ್ಲಿ ಇವರು ಸೀರೆ ತೊಟ್ಟು ಕುಣಿದಿರುವುದು ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ.

ಕಳೆದ ಕೆಲದಿನಗಳಿಂದ ಶ್ವೇತಾ ಶಿಂಧೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ರೀತಿ ನೃತ್ಯ ಮಾಡುವ ವಿವಿಧ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಅವೆಲ್ಲವೂ ಹೆಚ್ಚೆಚ್ಚು ಜನರನ್ನು ಸೆಳೆಯುತ್ತಿವೆ. ಆದರೆ, ಕಳೆದ ಮೇ 23ರಂದು ಹಂಚಿಕೊಂಡ ವಿಡಿಯೋ ಮಾತ್ರ ಎಲ್ಲಕ್ಕಿಂತಲೂ ಹೆಚ್ಚು ವೈರಲ್​ ಆಗಿದ್ದು, ಸೀರೆಯಲ್ಲಿ ತಮ್ಮ ನೆಚ್ಚಿನ ನಟಿಯನ್ನು ನೋಡಿದ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.

ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಶ್ವೇತಾ ಶಿಂಧೆ ಅವರ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಹಿಂಬಾಲಕರ ಸಂಖ್ಯೆಯೂ ಹೆಚ್ಚುತ್ತಿದ್ದು, ಇನ್ನಷ್ಟು ಹಾಡುಗಳಿಗೆ ಹೆಜ್ಜೆ ಹಾಕಿ ಎಂದು ಜನ ಕೇಳಿಕೊಳ್ಳುತ್ತಿದ್ದಾರೆ. ಅಲ್ಲದೇ ಅವರ ಹಳೇ ವಿಡಿಯೋಗಳನ್ನೂ ಜಾಲಾಡಿ ನೋಡುತ್ತಿದ್ದಾರೆ. ವಿಶೇಷವೆಂದರೆ ಅವರ ಸದರಿ ಖಾತೆ ಇತ್ತೀಚೆಗಷ್ಟೇ ಅಂದರೆ ಏಪ್ರಿಲ್​ 28ರಿಂದ ಈಚೆಗಿನ ವಿಡಿಯೋಗಳನ್ನಷ್ಟೇ ಹೊಂದಿದ್ದು, ಇಲ್ಲಿಯ ತನಕ ಕೇವಲ 20 ಪೋಸ್ಟ್ ಹಾಕಿದ್ದಾರೆ. ವೈರಲ್​ ಆಗಿರುವ ವಿಡಿಯೋಕ್ಕೂ ಮೊದಲು ಹೆಚ್ಚೇನು ಇರದಿದ್ದ ಹಿಂಬಾಲಕರ ಸಂಖ್ಯೆ ಈಗಾಗಲೇ ನಾಲ್ಕೂವರೆ ಸಾವಿರ ದಾಟಿದ್ದು, ಮರಾಠಿಯಷ್ಟೇ ಅಲ್ಲದೇ ಬೇರೆ ಭಾಷಿಕರು ಕೂಡಾ ಶ್ವೇತಾ ಅವರ ನೃತ್ಯವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:
ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್ 

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!