ಹರಿಯಾಣ: 10 ವರ್ಷದ ಬಾಲಕಿ ಮೇಲೆ 7 ಬಾಲಕರಿಂದ ಅತ್ಯಾಚಾರ, ಅವರಲ್ಲಿ 6 ಜನ 12ಕ್ಕಿಂತ ಕಡಿಮೆ ಪ್ರಾಯದವರು!

ವಯಸ್ಕನೂ ಸೇರಿದಂತೆ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಅಪ್ರಾಪ್ತರನ್ನು ಬಾಲಾಪರಾಧಿಗಳ ನ್ಯಾಯ ಮಂಡಲಿ ಎದುರು ಹಾಜರುಪಡಿಸಿ ಸುಧಾರಣೆ ಮನೆಗೆ ಕಳಿಸಲಾಗಿದೆ ಮತ್ತು ವಯಸ್ಕನನ್ನು ಜಿಲ್ಲಾ ಕಾರಾಗೃಹಕ್ಕೆ ತಳ್ಳಲಾಗಿದೆ.

ಹರಿಯಾಣ: 10 ವರ್ಷದ ಬಾಲಕಿ ಮೇಲೆ 7 ಬಾಲಕರಿಂದ ಅತ್ಯಾಚಾರ, ಅವರಲ್ಲಿ 6 ಜನ 12ಕ್ಕಿಂತ ಕಡಿಮೆ ಪ್ರಾಯದವರು!
ಸಾಂದರ್ಭಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 11, 2021 | 6:17 PM

ಹರಿಯಾಣ: ಇದು ಬೆಳೆಯುತ್ತಿರುವ ಮಕ್ಕಳಿಗೆ ಇಂಟರ್ನೆಟ್​ನಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳು ಮತ್ತು ಈಗಿನ ಮತ್ತು ವೆಬ್​ಸಿರೀಸ್​ಗಳಲ್ಲಿ ತೋರಿಸಲಾಗುತ್ತಿರುವ ಹಸೀಕಾಮದ ದೃಶ್ಯಗಳು ಅವರ ಮೇಲೆ ಬೀರುತ್ತಿರುವ ಪ್ರಭಾವವಲ್ಲದೆ ಮತ್ತೇನೂ ಅಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಮೇ 24 ರಂದು ಗುರುಗ್ರಾಮ್​ನ ರೆವಾರಿ ಎಂಬ ಗ್ರಾಮದ ಒಂದು ಶಾಲೆಯಲ್ಲಿ 10-ವರ್ಷದ ಬಾಲಕಿಯ ಮೇಲೆ ಏಳು ಹುಡುಗರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಕೃತ್ಯ ನಡೆಯುವ ಮೊದಲು ಸಂತ್ರಸ್ತೆ ಮತ್ತು ಅರೋಪಿಗಳಲು ಅದೇ ಶಾಲೆಯ ಮೈದಾನದಲ್ಲಿ ಆಡುತ್ತಿದ್ದರು. ಅತ್ಯಾಚಾರ ನಡೆಸಿರುವವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲ10-12 ವರ್ಷ ವಯಸ್ಸಿನ ಮಕ್ಕಳು!! ಈ ದುರುಳ ಬಾಲಕರು ತಾವೆಸಗಿದ ಹೀನ ಕೃತ್ಯವನ್ನು ಮೊಬೈಲ್​ಗಳಲ್ಲಿ ರೆಕಾರ್ಡ್​ ಸಹ ಮಾಡಿಕೊಂಡಿದ್ದಾರೆ. ಸದರಿ ವಿಡಿಯೊ ಕ್ಕಿಪ್ಪಿಂಗ್ ಒಬ್ಬರಿಂದ ಮತ್ತೊಬ್ಬರಿಗೆ ಫಾರ್ವರ್ಡ್​ ಆಗುತ್ತಾ ಸಂತ್ರಸ್ತೆಯ ನರೆಮನೆಯವನಿಗೆ ತಲುಪಿದಾಗ ಆತ ಕೂಡಲೇ ಅಕೆಯ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಬಾಲಕಿಯ ತಂದೆ ಬುಧವಾರದಂದು ದೂರ ನೀಡಿದ ನಂತರ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಎಲ್ಲ ಏಳು ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 354 ಸಿ (ಲೈಂಗಿಕ ವಿಕೃತಿ) ಮತ್ತು 506 (ಕ್ರಿಮಿನಲ್ ಬೆದರಿಕೆ), ಪೋಕ್ಸೊ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ಮಹಿಳಾ ಪೊಲೀಸ್​ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆಯೆಂದು ರೆವಾರಿಯ ಡಿಎಸ್​ಪಿ ಹಂಸ್​ರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅತ್ಯಾಚಾರಿಗಳಲ್ಲಿ ಕೇವಲ ಒಬ್ಬನು ಮಾತ್ರ ವಯಸ್ಕನಾಗಿದ್ದು ಅವನು 18ರ ಪ್ರಾಯದವನಾಗಿದ್ದಾನೆ

‘ವಿಷಯವನ್ನು ನಮ್ಮ ಗಮನಕ್ಕೆ ತಂದ ಕೂಡಲೇ ಅರೋಪಿಗಳ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದೇವೆ. ಆರೋಪಿಗಳು ಮತ್ತು ಬಾಲಕಿ ಒಂದೇ ಏರಿಯಾದಲ್ಲಿ ವಾಸವಾಗಿದ್ದಾರೆ, ವಿಡಿಯೊವನ್ನು ನೋಡಿದ ನಂತರ ನೆರೆಹೊರೆಯವರೇ ಅತ್ಯಾಚಾರಿಗಳನ್ನು ಗುರುತಿಸಿದ್ದಾರೆ,’ ಎಂದು ಡಿಎಸ್​ಪಿ ಹಂಸ್​ರಾಜ್ ಹೇಳಿದ್ದಾರೆ.

ವಯಸ್ಕನೂ ಸೇರಿದಂತೆ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಅಪ್ರಾಪ್ತರನ್ನು ಬಾಲಾಪರಾಧಿಗಳ ನ್ಯಾಯ ಮಂಡಲಿ ಎದುರು ಹಾಜರುಪಡಿಸಿ ಸುಧಾರಣೆ ಮನೆಗೆ ಕಳಿಸಲಾಗಿದೆ ಮತ್ತು ವಯಸ್ಕನನ್ನು ಜಿಲ್ಲಾ ಕಾರಾಗೃಹಕ್ಕೆ ತಳ್ಳಲಾಗಿದೆ. ವಿಡಿಯೊದಲ್ಲಿರುವ ಮತ್ತೊಬ್ಬ ಬಾಲಕನಿಗಾಗಿ ಶೋಧ ನಡೆದಿದೆ ಎಂದು ಹೇಳಿರುವ ಪೊಲೀಸರು ವಿಡಿಯೋ ಶೇರ್​ ಮಾಡಿರುವವವರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ವಿಡಿಯೋ ಶೇರ್​ ಮಾಡಿರಿರುವವರ ಬಗ್ಗೆಯೂ ನಾವು ಮಾಹಿತಿ ಸಂಹ್ರಹಿಸುತ್ತಿದ್ದೇವೆ, ಯಾಕಂದರೆ, ಇಂಥ ವಿಡಿಯೋಗಳನ್ನು ಶೇರ್​ಮಾಡುವುದು ಸಹ ಕ್ರಿಮಿನಲ್ ಅಪರಾಧವಾಗಿದೆ,’ ಎಂದು ಹಂಸ್​ರಾಜ್ ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬ ಮತ್ತು ಅಕೆಯ ಮೇಲೆ ಅತ್ಯಾಚಾರವೆಸಗಿರುವ ಬಾಲಕರ ಕುಟುಂಬಗಳು ರೆವಾರಿ ಗ್ರಾಮದಲ್ಲಿ ನೆರೆಹೊರೆಯವರಾಗಿದ್ದು ಅವರ ನಡುವೆ ಪರಿಚಯವಿದೆ. ಅತ್ಯಾಚಾರ ನಡೆದ ಶಾಲೆಯು ಅದರ ಮೈದಾನಕ್ಕೆ ಹೊಂದಿಕೊಂಡಿದೆ. ಕೊವಿಡ್​ ಪಿಡುಗಿನಿಂದಾಗಿ ಶಾಲೆ ಮುಚ್ಚಿರುವುದರಿಂದ ಅದರೊಳಗಡೆ ಯಾರೂ ಇರಲಿಲ್ಲ.

ಲೈಂಗಿಕ ದೌರ್ಜನ್ಯ ನಡೆಸಿರುವದನ್ನು ಯಾವ ಬಾಲಕನೂ ಒಪ್ಪಿಕೊಂಡಿಲ್ಲ.

ಸಂತ್ರಸ್ತೆ ಸಹ ತಾನು ಅನುಭವಿಸಿದ ನೋವನ್ನು ಯಾರೊಂದಿಗೂ ಹೇಳಿಕೊಂಡಿಲ್ಲ.ಇದರಿಂದ ಧೈರ್ಯಗೊಂಡ ಆರೋಪಿಗಳಯ ಕೃತ್ಯದ ವಿಡಿಯೋವನ್ನು ಶೇರ್ ಮಾಡುತ್ತಾ ಹೋಗಿದ್ದಾರೆ. ಜೂನ್ 8ರಂದು (ಮಂಗಳವಾರ) ಆ ವಿಡಿಯೋ ಸಂತ್ರಸ್ತೆಯ ನೆರೆಯವನ ಫೋನಿಗೆ ಫಾರ್ವರ್ಡ್ ಅಗಿದೆ ಮತ್ತು ಆತ ಬಾಲಕಿಯ ತಂದೆಗೆ ಅದನ್ನು ಹೇಳಿದ್ದಾನೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಲೈಂಗಿಕ ಹಲ್ಲೆ ನಡೆದಿರುವುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಏಳು ಆರೋಪಿಗಳಲ್ಲಿ ಮೂವರು ಸಂತ್ರಸ್ತೆ ಕುಟುಂಬದ ಸಂಬಂಧಿಕರಾಗಿದ್ದಾರೆ ಎಂದು ಡಿಎಸ್​ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಚ್ಚಿಯಲ್ಲಿ ಮಾಡೆಲ್ ಒಬ್ಬರ ಮೇಲೆ 22 ದಿನಗಳ ಕಾಲ ಅತ್ಯಾಚಾರ, ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಆರೋಪಿ ನಾಪತ್ತೆ