ಕೊಚ್ಚಿಯಲ್ಲಿ ಮಾಡೆಲ್ ಒಬ್ಬರ ಮೇಲೆ 22 ದಿನಗಳ ಕಾಲ ಅತ್ಯಾಚಾರ, ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಆರೋಪಿ ನಾಪತ್ತೆ
ಸುಮಾರು 7.5 ಲಕ್ಷ ಜನಸಂಖ್ಯೆಯಿರುವ ಮತ್ತು ಕೇರಳದ ಪ್ರಮುಖ ನಗರಳಲ್ಲಿ ಒಂದಾಗಿರುವ ಕೊಚ್ಚಿಯಲ್ಲಿ 24-ವರ್ಷ ವಯಸ್ಸಿನ ಒಬ್ಬ ಮಹಿಳೆಯನ್ನು ಒಂದು ತಿಂಗಳ ಕಾಲ ಪ್ಲ್ಯಾಟೊಂದಲ್ಲಿ ಕೂಡಿಟ್ಟು ಪ್ರತಿದಿನ ಅತ್ಯಾಚಾರ ನಡೆಸಲಾಗಿದೆ.
ಕೊಚ್ಚಿ: ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಲೈಂಗಿಕ ಅತ್ಯಾಚಾರದ ಪ್ರಕಣಗಳು ಭಾರತದಲ್ಲಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಂತೂ ಅವು ಬೆಳಕಿಗೆ ಬರುವುದೇ ಅಪರೂಪ. ಶೋಷಣೆಗೊಳಗಾದ ಮಹಿಳೆ ಹಣಕಾಸು ವಿಷಯದಲ್ಲೂ ದುರ್ಬಲಳಾಗಿದ್ದರೆ. ಅವಳು ಜೀವನವಡೀ ಕೊರಗುತ್ತಾ ಬದುಕು ಸವೆಸುತ್ತಾಳೆಯೇ ಹೊರತು ಆಕೆಗೆ ನ್ಯಾಯ ಸಿಗುವುದಿಲ್ಲ. ಮರ್ಯಾದೆಗೆ ಹೆದರುವ ಮತ್ತು ದೂರು ದಾಖಲಿಸಿದರೂ ನ್ಯಾಯ ಸಿಕ್ಕೀತು ಎನ್ನುವ ಭರವಸೆ ಕಳೆದುಕೊಂಡಿರುವ ಸಂತ್ರಸ್ತೆ ಬದುಕುವ ಅನಿವಾರ್ಯತೆಗಾಗಿ ಅವಮಾನವನ್ನು ಸಹಿಸಿಕೊಂಡು ಜೀವಿಸುತ್ತಾಳೆ. ನಾವು ಸಿನಿಮಾಗಳಲ್ಲಿ ನೋಡುವ ಮತ್ತು ಕತೆಗಳಲ್ಲಿ ಓದುವದಕ್ಕಿಂತಲೂ ಭೀಕರವಾದ ದೌರ್ಜನ್ಯ ಮತ್ತು ಶೋಷಣೆಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಅತ್ಯಾಚಾರದಂಥ ಪ್ರಕರಣಗಳಲ್ಲೂ ಸಾಕ್ಷಿ ಬೇಕು ಎಂದು ಹೇಳುವ ಕಾನೂನು ಪರಿಪಾಲಕರು ತಮ್ಮಲ್ಲಿಗೆ ಬರುವ ಅಸಾಹಯಕ ಮಹಿಳೆಯೆಡೆ ಒಂದು ದೀನ ದೃಷ್ಟಿ ಬೀರಿ ತಮ್ಮ ಕರ್ತವ್ಯ ಮುಗಿಯಿತು ಅಂತ ಭಾವಿಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಬಹಳ ಭಿನ್ನವಾಗೇನೂ ಇಲ್ಲ. ಇಲ್ಲೂ ಶೋಷಿತೆಯು ತನ್ನ ಮತ್ತು ಮನೆತನದ ಗೌರವಕ್ಕೆ ಹೆದರಿ ತನ್ನ ವಿರುದ್ಧ ನಡೆದ ಅನ್ಯಾಯವನ್ನು ಮುಚ್ಚಿಟ್ಟುಕೊಳ್ಳುತ್ತಾಳೆ.
ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಕೇರಳದ ಕೊಚ್ಚಿ ಹೆಸರು ಕೇಳಿದ್ದೀರಲ್ಲ? ಅದೇನು ಸಣ್ಣ ಊರಲ್ಲ. ಅರಬ್ಬೀ ಸಮುದ್ರ ರಾಣಿ ಎಂದು ಕರೆಸಿಕೊಳ್ಳುವ ಈ ಕರಾವಳಿ ನಗರವು ನೈಸರ್ಗಿಕ ಬಂದರನ್ನು ಹೊಂದಿದ್ದು ದೊಡ್ಡ ವ್ಯಾಪಾರ ಕೇಂದ್ರವೆನಿಸಿಕೊಂಡಿದೆ.
ಸುಮಾರು 7.5 ಲಕ್ಷ ಜನಸಂಖ್ಯೆಯಿರುವ ಮತ್ತು ಕೇರಳದ ಪ್ರಮುಖ ನಗರಳಲ್ಲಿ ಒಂದಾಗಿರುವ ಕೊಚ್ಚಿಯಲ್ಲಿ 24-ವರ್ಷ ವಯಸ್ಸಿನ ಒಬ್ಬ ಮಹಿಳೆಯನ್ನು ಒಂದು ತಿಂಗಳ ಕಾಲ ಪ್ಲ್ಯಾಟೊಂದಲ್ಲಿ ಕೂಡಿಟ್ಟು ಪ್ರತಿದಿನ ಅತ್ಯಾಚಾರ ನಡೆಸಲಾಗಿದೆ. ಈ ಘೋರ ಘಟನೆಯು ಈ ವರ್ಷಾರಂಭದಲ್ಲಿ ನಡೆದರೂ ಈಗಷ್ಟೇ ಬೆಳಕಿಗೆ ಬಂದಿದೆ. ಅದ್ಹೇಗೋ ಆ ನರಕದಿಂದ ತಪ್ಪಿಸಿಕೊಂಡ ಮಹಿಳೆಯು ಪೊಲೀಸರಿಗೆ ದೂರು ಕೊಟ್ಟಿರುವರಾದರೂ ಇದುವರೆಗೆ ಆರೋಪಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಸಂತ್ರಸ್ತೆ ವೃತ್ತಿಯಲ್ಲಿ ರೂಪದರ್ಶಿ ಎಂದು ಹೇಳಲಾಗಿದೆ.
ಮಹಿಳೆಯ ಸ್ನೇಹಿತೆಯರು ಆಕೆಯ ಮೈಮೇಲಿನ ಗಾಯ ಮತ್ತು ಸುಟ್ಟ ಗಾಯದ ಗುರುತುಗಳ ಫೋಟೋಗಳನ್ನು ಬಿಡುಗಡೆ ಮಾಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಹೇಳುವ ಪ್ರಕಾರ ವೃತ್ತಿಯಲ್ಲಿ ಬಿಸಿನೆಸ್ಮನ್ ಆಗಿರುವ ಅರೋಪಿಯು ಕಾಣೆಯಾಗಿದ್ದು ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.
ಪ್ರಕರಣ ಕುರಿತು ಶುಕ್ರವಾರದೊಳಗೆ ವಿವರಗಳನ್ನು ಕಲೆಹಾಕಲು ಪೊಲೀಸರಿಗೆ ಹೇಳಿರುವ ಕೋರ್ಟ್ ತನಿಖೆ ನಡೆಸಲು ಒಂದು ವಿಶೇಷ ತಂಡವನ್ನು ರಚಿಸುವಂತೆಯೂ ಸೂಚಿಸಿದೆ. ಕೊಚ್ಚಿಯ ಪೊಲೀಸ್ ಕಮೀಶನರ್ ಸಿ ನಾಗರಾಜು ಅವರು, ಅರೋಪಿಯನ್ನು ಪತ್ತೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆಯು ಒಂದು ಫ್ಲ್ಯಾಟ್ನಲ್ಲಿ ತನ್ನನ್ನು 22 ದಿಗಳ ಕಾಲ ಕೂಡಿಹಾಕಿ ಲೈಂಗಿಕ ಅತ್ಯಾಚಾರವೆಸಗಿದ್ದಲ್ಲದೆ, ದೈಹಿಕವಾಗಿ ಹಿಂಸಿಸಿ ಬಲವಂತದಿಂದ ಮೂತ್ರ ಕುಡಿಸಲಾಯಿತೆಂದು ಹೇಳಿದ್ದಾರೆ. ಅಕೆಯ ದೇಹದ ಮೇಲೆ ಅರೋಪಿಯು ಸಿಗರೇಟನಿಂದ ಸುಟ್ಟಿರುವ ಗಾಯಗಳೂ ಇವೆ. ಅರೋಪಿಯು ಊಟ ತರಲೆಂದು ಹೊರಗಡೆ ಹೋದಾಗ ಅಲ್ಲಿಂದ ತಪ್ಪಿಸಿಕೊಂಡಿರುವುದಾಗಿ ಆಕೆ ಹೇಳಿದ್ದಾರೆ. ಅರೋಪಿಯು ಹಲವಾರು ಬಾರಿ ತನ್ನ ಪೋಟೋ ಮತ್ತು ವಿಡಿಯೋ ತೆಗೆದಿದ್ದರಿಂದ ದೂರು ನೀಡಲು ತಡ ಮಾಡಿದೆ ಎಂದು ಆಕೆ ಹೇಳಿದ್ದಾರೆ.
ಮಹಿಳಾ ಹಕ್ಕುಗಳ ರಾಜ್ಯ ಘಟಕವು ಪ್ರಕರಣವನ್ನು ಕೈಗೆತ್ತಿಕೊಂಡಿದೆ ಮತ್ತು ಸಮಗ್ರವಾದ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಪ್ರಕರಣದ ತನಿಖೆ ನಡೆಸಲು ಮೀನಾಮೇಷ ಎಣಿಸುತ್ತಿರುವ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಮಹಿಳೆಗೆ ರಕ್ಷಣೆ ಒದಗಿಸುವಂತೆ ಮಹಿಳಾ ವೇದಿಕೆ ಹೇಳಿದೆ. ದೂರನ್ನು ಹಿಂಪಡೆಯುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಹಿಳೆ ಈ ಮೊದಲು ದೂರಿದ್ದರು.
ಇದನ್ನೂ ಓದಿ: Shocking News: ಅತ್ಯಾಚಾರವೆಸಗಲು ಬಂದ ಮಾಲೀಕನ ಮರ್ಮಾಂಗವನ್ನು ಕತ್ತರಿಸಿದ ಮಹಿಳೆ; ಮರುಜೋಡಣೆಗಾಗಿ ಆಸ್ಪತ್ರೆಗೆ ಓಡಿದ ಮಾಲೀಕ