Pearl V Puri: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಕಿರುತೆರೆ ನಟ ಪರ್ಲ್ ವಿ. ಪುರಿಗೆ ಸಿಕ್ತು ರಿಲೀಫ್
Pearl V Puri Granted Bail: ಸೆಟ್ನಲ್ಲಿಯೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಪರ್ಲ್ ವಿರುದ್ಧ ಕೇಳಿ ಬಂದಿತ್ತು. ಜೂನ್ ನಾಲ್ಕರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಅಲ್ಲದೆ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಕಿರುತೆರೆ ನಟ ಪರ್ಲ್ ವಿ. ಪುರಿ ಅರೆಸ್ಟ್ ಆಗಿದ್ದರು. ಈಗ ವಾಸೈ ನ್ಯಾಯಾಲಯ ಜಾಮೀನು ನೀಡಿದೆ. ಈ ಮೂಲಕ ನಟನಿಗೆ ಸಣ್ಣ ರಿಲೀಫ್ ಸಿಕ್ಕಂತಾಗಿದೆ. ಸೆಟ್ನಲ್ಲಿಯೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಪರ್ಲ್ ವಿರುದ್ಧ ಕೇಳಿ ಬಂದಿತ್ತು. ಜೂನ್ ನಾಲ್ಕರಂದು ಪೊಲೀಸರು ಅವರನ್ನು ಬಂಧಿಸಿದ್ದರು. ಅಲ್ಲದೆ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ವಾಸೈ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಪರ್ಲ್ ಅವರು ಜಾಮೀನು ಕೋರಿ ಜೂನ್ 7ರಂದು ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಜೂನ್ 15ರಂದು ಅರ್ಜಿ ವಿಚಾರಣೆ ನಿಗದಿ ಮಾಡಲಾಗಿತ್ತು. ಈಗ ವಿಚಾರಣೆ ನಡೆಸಿ ನ್ಯಾಯಾಲಯ ಬೇಲ್ ನೀಡಿದೆ. ಈ ಮೂಲಕ 11 ದಿನಗಳ ಜೈಲು ವಾಸದ ನಂತರದಲ್ಲಿ ಅವರು ಹೊರ ಬರುತ್ತಿದ್ದಾರೆ.
ಪರ್ಲ್ ಅವರನ್ನು ಬಂಧಿಸಿದ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ಸಾಕಷ್ಟು ನಡೆದಿದ್ದವು. ದಿವ್ಯಾ ಕುಮಾರ್, ಏಕ್ತಾ ಕಪೂರ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಪರ್ಲ್ ಅವರನ್ನು ಬೆಂಬಲಿಸಿದ್ದರು. ಈ ಆರೋಪ ಒಂದು ಷಢ್ಯಂತ್ರ ಎಂದು ಕರೆದಿದ್ದರು. ಇನ್ನೂ, ಕೆಲವರು ಪರ್ಲ್ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು.
‘2019ರಲ್ಲಿ ಶೋ ಒಂದರ ಶೂಟಿಂಗ್ ವೇಳೆ ತನ್ನ ಮಗಳ ಮೇಲೆ ಪರ್ಲ್ ಅವರಿಂದ ಅತ್ಯಾಚಾರವಾಗಿದೆ. ಇದಕ್ಕೆ ನ್ಯಾಯ ಒದಗಿಸಬೇಕು’ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದರು. ಆದರೆ, ಸಂತ್ರಸ್ತೆಯ ತಾಯಿ ಏಕ್ತಾ ಶರ್ಮಾ ಅವರು ಪರ್ಲ್ ಪರ ಮಾತನಾಡಿದ್ದರು. ಏಕ್ತಾ ಶರ್ಮಾ ಮತ್ತು ಅವರ ಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳನ್ನು ತಮ್ಮ ಸುಪರ್ದಿಗೆ ಪಡೆಯಬೇಕು ಎಂಬ ಕಾರಣಕ್ಕೆ ಇಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಬಂದಿದೆ. ಅದೇ ಕಾರಣಕ್ಕಾಗಿ ಏಕ್ತಾ ಶರ್ಮಾ ಹೆಸರಿಗೆ ಮಸಿ ಬಳಿಯಲು ಅವರ ಗಂಡ ಈ ಸುಳ್ಳು ಕೇಸ್ ದಾಖಲಿಸಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ:
ಅಪ್ರಾಪ್ತೆ ಮೇಲೆ ರೇಪ್ ಮಾಡಿದ ಆರೋಪ ಹೊತ್ತ ನಟ ಪರ್ಲ್ ವಿ. ಪುರಿಗೆ ಸಂತ್ರಸ್ತೆಯ ತಾಯಿ ಬೆಂಬಲ; ಬಿಗ್ ಟ್ವಿಸ್ಟ್
Published On - 4:20 pm, Tue, 15 June 21