AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದುಕೊಳ್ಳೋದು ಒಂದು, ಆಗೋದೇ ಇನ್ನೊಂದು’; ದೀಪಿಕಾ ಪಡುಕೋಣೆ ಹೊಸ ಪೋಸ್ಟ್​ ನೋಡಿ

ದೀಪಿಕಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಯೋಗಾಸನ ಮಾಡುತ್ತಿದ್ದಾರೆ. ಅದೇ ಪೋಸ್ಟ್​ನಲ್ಲಿ ಮತ್ತೊಂದು ಫೋಟೋ ಹಾಕಿದ್ದು, ಅದರಲ್ಲಿ ದೀಪಿಕಾ ನಿದ್ರಿಸುತ್ತಿದ್ದಾರೆ.

‘ಅಂದುಕೊಳ್ಳೋದು ಒಂದು, ಆಗೋದೇ ಇನ್ನೊಂದು’; ದೀಪಿಕಾ ಪಡುಕೋಣೆ ಹೊಸ ಪೋಸ್ಟ್​ ನೋಡಿ
ದೀಪಿಕಾ ಪಡುಕೋಣೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 28, 2021 | 8:34 PM

Share

ನಟಿ ದೀಪಿಕಾ ಪಡುಕೋಣೆ ಫಿಟ್​ನೆಸ್​ಗೆ ಹೆಚ್ಚು ಒತ್ತುಕೊಡುತ್ತಾರೆ. ಸದಾ ಜಿಮ್​ನಲ್ಲಿ ಕಳೆಯುವ ಅವರು, ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ. ಆದರೆ, ಲಾಕ್​ಡೌನ್​ನಿಂದ ಅವರ ಲೈಫ್​ಸ್ಟೈಲ್​ ಕೊಂಚ ಬದಲಾದಂತಿದೆ. ಅವರು ಅಂದುಕೊಳ್ಳೋದು ಒಂದಾದರೆ, ಆಗೋದು ಮಾತ್ರ ಇನ್ನೊಂದು.

ದೀಪಿಕಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಯೋಗಾಸನ ಮಾಡುತ್ತಿದ್ದಾರೆ. ಅದೇ ಪೋಸ್ಟ್​ನಲ್ಲಿ ಮತ್ತೊಂದು ಫೋಟೋ ಹಾಕಿದ್ದು, ಅದರಲ್ಲಿ ದೀಪಿಕಾ ನಿದ್ರಿಸುತ್ತಿದ್ದಾರೆ. ಇದಕ್ಕೆ ಅವರು ನಿರೀಕ್ಷೆ vs ರಿಯಾಲಿಟಿ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಸದ್ಯ, ಪೋಸ್ಟ್​ಗೆ ಸಾಕಷ್ಟು ಜನರು ಕಮೆಂಟ್​ ಮಾಡಿದ್ದಾರೆ. ಕೆಲವರು ‘ಈ ಫೋಟೋ ನನ್ನ ದಿನವನ್ನು ಖುಷಿಯಾಗಿಸಿತು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ನಾನು ಯೋಗ ಮಾಡಬೇಕು ಎಂದುಕೊಂಡಿದ್ದೇನೆ. ನಿಮ್ಮನ್ನು ನಾನು ಮಾದರಿಯಾಗಿಟ್ಟುಕೊಳ್ಳುತ್ತೇನೆ ಎಂದಿದ್ದಾರೆ. ಹಲವರು ನಗುವ ಸ್ಮೈಲಿ ಹಾಕಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ನೋಡಿದ ಅನೇಕರು ಖುಷಿ ಆಗಿದ್ದಂತೂ ಸತ್ಯ.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಏಪ್ರಿಲ್​ನಲ್ಲಿ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿತ್ತು. ಕೊರೊನಾದಿಂದಾಗಿ ಮುಂಬೈನಲ್ಲಿ ಆಗಿರುವ ಜನತಾ ಕರ್ಫ್ಯೂನಿಂದ ತಪ್ಪಿಸಿಕೊಳ್ಳಲು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಸದ್ಯ, ದೀಪಿಕಾ ಕೈನಲ್ಲಿ ಸಾಲು ಸಾಲು ಚಿತ್ರಗಳಿವೆ. ಶಾರುಖ್​ ಖಾನ್​ ನಟನೆಯ ಪಠಾಣ್​ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ನಟ ಪ್ರಭಾಸ್​ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ಜೊತೆಯಾಗಿ ಮಾಡುತ್ತಿರುವ​ ಸಿನಿಮಾಗೆ ದೀಪಿಕಾ ನಾಯಕಿ. ಹೃತಿಕ್​ ನಟನೆಯ ಫೈಟರ್​ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ರಿಲೀಸ್​ಗೆ ರೆಡಿ ಇರುವ ‘83’ ಚಿತ್ರದಲ್ಲಿ ದೀಪಿಕಾ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ನಟ ರಣವೀರ್ ಸಿಂಗ್​ಗೆ​ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!

ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?

Published On - 8:33 pm, Mon, 28 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ