ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ಗೆ ಸಿಕ್ಕ ಮೊದಲ ಸಂಬಳ ಎಷ್ಟು? ಖರೀದಿಸಿದ್ದು ಏನು?
Deepika Padukone | Ranbir Kapoor: ಮೊದಲ ಸಂಬಳವನ್ನು ಖರ್ಚು ಮಾಡುವ ವಿಚಾರದಲ್ಲಿ ಇಷ್ಟು ಅಜಗಜಾಂತರ ವ್ಯತ್ಯಾಸ ಇರುವ ರಣಬೀರ್ ಮತ್ತು ದೀಪಿಕಾ ನಂತರ ಪ್ರೇಮಿಗಳಾದರು. ಬಳಿಕ ಬಾಲಿವುಡ್ನ ಬಹುಬೇಡಿಕೆಯ ಸ್ಟಾರ್ಗಳಾಗಿ ಮಿಂಚಿದರು.
ಮೊದಲ ಸಂಬಳ ಎಂದರೆ ಎಲ್ಲರಿಗೂ ಒಂದು ಬಗೆಯ ಪುಳಕ ಇರುತ್ತದೆ. ಆಗತಾನೆ ಕೆಲಸಕ್ಕೆ ಸೇರಿಕೊಂಡು ಅಥವಾ ಹೊಸ ವ್ಯವಹಾರ ಶುರುಮಾಡಿ ಅದರಿಂದ ಬಂದ ಮೊದಲ ಸಂಬಳದ ಬಗ್ಗೆ ಎಲ್ಲಿಲ್ಲದ ಗೌರವ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಈ ಭಾವ ಇರುತ್ತದೆ. ಇಂದು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸ್ಟಾರ್ ಕಲಾವಿದರು ಕೂಡ ಹಲವು ವರ್ಷಗಳ ಹಿಂದೆ ಮೊದಲ ಸಂಬಳದ ಆ ಫೀಲ್ ಅನುಭವಿಸಿರುತ್ತಾರೆ. ಬಾಲಿವುಡ್ನಲ್ಲಿ ಇಂದು ಬಹುಬೇಡಿಕೆಯ ಸ್ಟಾರ್ಗಳಾದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅವರ ಮೊದಲ ಸ್ಯಾಲರಿಯ ಇಂಟರೆಸ್ಟಿಂಗ್ ವಿಷಯ ಇಲ್ಲಿದೆ.
ರಣಬೀರ್ ಕಪೂರ್ ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಸಾವರಿಯಾ’. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದರಲ್ಲಿ ರಣಬೀರ್ಗೆ ಸೋನಮ್ ಕಪೂರ್ ನಾಯಕಿ ಆಗಿದ್ದರು. ‘ಸಾವರಿಯಾ’ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ರಣಬೀರ್ಗೆ ಚಿಕ್ಕ ಸಂಭಾವನೆ ಸಿಕ್ಕಿತ್ತು. ಅದರಲ್ಲಿ ಅವರೊಂದು ವಾಚ್ ಖರೀದಿಸಿದ್ದರು.
ಸಾವರಿಯಾ ಸಿನಿಮಾದಿಂದ ಬಂದ ಸಂಭಾವನೆಯಲ್ಲಿ ರಣಬೀರ್ ಕಪೂರ್ ಹಬ್ಲಾಟ್ ಮೆಕ್ಸಿಕನ್ ಕಂಪನಿಯ ದುಬಾರಿ ವಾಚ್ ಕೊಂಡುಕೊಂಡಿದ್ದರು. ಅದರ ಬೆಲೆ 8.16 ಲಕ್ಷ ರೂ. ಆಗಿತ್ತು! ಆ ಮೂಲಕ ಅವರು ತಮ್ಮ ಆಸೆಯನ್ನು ಮೊದಲ ಸಂಬಳದಲ್ಲಿ ಈಡೇರಿಸಿಕೊಂಡರು. ಆದರೆ ದೀಪಿಕಾ ಪಡುಕೋಣೆಗೆ ಮೊದಲ ಸಂಬಳ ಇಷ್ಟೆಲ್ಲ ಸಿಕ್ಕಿರಲಿಲ್ಲ.
ನಟಿಯಾಗುವುದಕ್ಕೂ ಮುನ್ನ ದೀಪಿಕಾ ಪಡುಕೋಣೆ ಮಾಡೆಲಿಂಗ್ ಲೋಕದಲ್ಲಿ ಸಕ್ರಿಯರಾಗಿದ್ದರು. ಆಗ ಅವರಿಗೆ ಸಿಕ್ಕ ಮೊದಲ ಸಂಬಳ 2 ಸಾವಿರ ರೂಪಾಯಿ. ಅದನ್ನು ಅವರು ಬೇಕಾಬಿಟ್ಟು ಖರ್ಚು ಮಾಡಲಿಲ್ಲ. ನೇರವಾಗಿ ಅದನ್ನು ತಂದೆಯ ಕೈಯಲ್ಲಿ ಕೊಟ್ಟು ಯಾವುದರ ಮೇಲಾದರೂ ಹೂಡಿಕೆ ಮಾಡುವಂತೆ ಹೇಳಿದ್ದರಂತೆ. ಮೊದಲ ಸಂಬಳವನ್ನು ಖರ್ಚು ಮಾಡುವ ವಿಚಾರದಲ್ಲಿ ಇಷ್ಟು ಅಜಗಜಾಂತರ ವ್ಯತ್ಯಾಸ ಇರುವ ರಣಬೀರ್ ಮತ್ತು ದೀಪಿಕಾ ನಂತರ ಪ್ರೇಮಿಗಳಾದರು. ಬಳಿಕ ಬ್ರೇಕಪ್ ಕೂಡ ಮಾಡಿಕೊಂಡರು.
ಸದ್ಯ ರಣಬೀರ್ ಕಪೂರ್ ನಟನೆಯ ‘ಶಂಶೇರಾ’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ದೀಪಿಕಾ ಪಡುಕೋಣೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪತಿ ರಣವೀರ್ ಸಿಂಗ್ ಜೊತೆ ನಟಿಸಿರುವ ‘83’ ಚಿತ್ರದ ಬಿಡುಗಡೆ ಲಾಕ್ಡೌನ್ ಕಾರಣದಿಂದ ತಡವಾಗಿದೆ.
ಇದನ್ನೂ ಓದಿ:
ಆಲಿಯಾ, ದೀಪಿಕಾ, ಕತ್ರಿನಾ ಅಲ್ಲ, ರಣಬೀರ್ ಕಪೂರ್ ಮದುವೆಯನ್ನು ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್
ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ