AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ, ದೀಪಿಕಾ, ಕತ್ರಿನಾ​ ಅಲ್ಲ, ರಣಬೀರ್​ ಕಪೂರ್ ಮದುವೆಯನ್ನು​ ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್​

ರಣಬೀರ್ ಮದುವೆ ಬಗ್ಗ ರಿಷಿ ಚಿಂತಿಸಿದ್ದು ನಿಜ. ರಣಬೀರ್​ ಮದುವೆಯನ್ನು ಯಾರ ಜತೆ ಮಾಡಬೇಕು ಎಂಬುದು ರಿಷಿ ಆಲೋಚನೆ ಆಗಿತ್ತು ಎಂಬುದು ಗೊತ್ತೇ? ಅದಕ್ಕೆ ಇಲ್ಲಿದೆ ಉತ್ತರ.

ಆಲಿಯಾ, ದೀಪಿಕಾ, ಕತ್ರಿನಾ​ ಅಲ್ಲ, ರಣಬೀರ್​ ಕಪೂರ್ ಮದುವೆಯನ್ನು​ ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್​
ರಿಷಿ ಕಪೂರ್​ - ರಣಬೀರ್​ ಕಪೂರ್​
ರಾಜೇಶ್ ದುಗ್ಗುಮನೆ
| Edited By: |

Updated on:May 28, 2021 | 6:36 PM

Share

ಬಾಲಿವುಡ್​ ನಟ ರಣಬೀರ್​ ಕಪೂರ್​ ಸಿನಿಮಾಗಳ ಜತೆಗೆ ವೈಯಕ್ತಿಕ ಜೀವನದ ಮೂಲಕವೂ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅವರು ಬಾಲಿವುಡ್​ನ ಹಲವು ಹೀರೋಯಿನ್​ಗಳ ಜತೆ ಡೇಟಿಂಗ್​ ನಡೆಸಿದ್ದಾರೆ. ಅಂತಿಮವಾಗಿ ಈಗ ಅವರು ಬಾಲಿವುಡ್​ ನಟಿ ಆಲಿಯಾ ಭಟ್​ ಅವರನ್ನು ಮದುವೆ ಆಗುತ್ತಿದ್ದಾರೆ. ಆದರೆ, ತಂದೆ ರಿಷಿ ಕಪೂರ್ ಬೇರೆಯವರ ಜತೆ ರಣಬೀರ್​ ಮದುವೆ ಮಾಡಲು ನಿಶ್ಚಯಿಸಿದ್ದರಂತೆ!

ರಣಬೀರ್ ಕಪೂರ್​ ಹಾಗೂ ಆಲಿಯಾ ಭಟ್​ ಪರಸ್ಪರ ಪ್ರೀತಿಸುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಇನ್ನು, ಇಬ್ಬರೂ ರಜೆಯ ಮಜ ಕಳೆಯೋಕೆ ಸಾಕಷ್ಟು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ರಣಬೀರ್​ ಮದುವೆ ನೋಡಬೇಕು ಎಂಬುದು ತಂದೆ ರಿಷಿ ಅವರ ಕೊನೆ ಆಸೆ ಆಗಿತ್ತು. ಆದರೆ, ಅದು ಈಡೇರುವ ಮೊದಲೇ ರಿಷಿ ಮೃತಪಟ್ಟರು.

ರಣಬೀರ್ ಮದುವೆ ಬಗ್ಗೆ ರಿಷಿ ಚಿಂತಿಸಿದ್ದು ನಿಜ. ರಣಬೀರ್​ ಮದುವೆಯನ್ನು ಯಾರ ಜತೆ ಮಾಡಬೇಕು ಎಂಬುದು ರಿಷಿ ಆಲೋಚನೆ ಆಗಿತ್ತು ಎಂಬುದು ಗೊತ್ತೇ? ನಿರ್ದೇಶಕ ಅಯಾನ್​ ಮುಖರ್ಜಿ! ಹೌದು, ಹೀಗೊಂದು ಆಲೋಚನೆಯನ್ನು ರಿಷಿ ಮಾಡಿದ್ದರಂತೆ. 2018ರಲ್ಲಿ ಈ ಬಗ್ಗೆ ಟ್ವೀಟ್​ ಮಾಡಿದ್ದ ರಿಷಿ, ಅಯಾನ್​-ರಣಬೀರ್​ ಫೋಟೋ ಹಾಕಿ, ಬೆಸ್ಟ್​ ಫ್ರೆಂಡ್ಸ್​! ಇಬ್ಬರೂ ಮದುವೆ ಆದರೆ ಹೇಗಿರುತ್ತದೆ? ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್​ ಸಾಕಷ್ಟು ಚರ್ಚೆ ಕೂಡ ಹುಟ್ಟು ಹಾಕಿತ್ತು. ಕೆಲವರು ಇದನ್ನು ಟ್ರೋಲ್​ ಮಾಡಿದ್ದರು.

‘ವೇಕ್​ ಅಪ್​ ಸಿದ್​’​ ಸಿನಿಮಾವನ್ನು ಅಯಾನ್​ ಮುಖರ್ಜಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಣಬೀರ್​ ಕಪೂರ್​ ನಟಿಸಿದ್ದರು. ಇದಾದ ನಂತರದಲ್ಲಿ ಇಬ್ಬರ ನಡುವೆ ಉತ್ತಮ ಗೆಳೆತನ ಬೆಳೆದಿತ್ತು. ರಣಬೀರ್​-ಅಯಾನ್​ ಸಾಕಷ್ಟು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ರಣಬೀರ್​ ಹಾಗೂ ಆಲಿಯಾ ಪ್ರೀತಿ ವಿಚಾರಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿ ವರ್ಷಗಳೇ ಕಳೆದಿವೆ. 2020ರಲ್ಲಿ ಇಬ್ಬರೂ ಮದುವೆ ಆಗುವ ಆಲೋಚನೆ ಇಟ್ಟುಕೊಂಡಿದ್ದರು. ಇವರದ್ದು ಡೆಸ್ಟಿನೇಷನ್​ ಮದುವೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಕೊರೊನಾ ಇವರ ಪ್ಲ್ಯಾನ್​ಅನ್ನು ತಲೆಕೆಳಗೆ ಮಾಡಿತ್ತು. ಈ ಬಾರಿ ಇವರ ವಿವಾಹ ನಡೆಯಲಿದೆ ಎನ್ನಲಾಗಿತ್ತು. ಈ ಬಾರಿಯೂ ಕೊರೊನಾ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ

Published On - 5:03 pm, Fri, 28 May 21

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್